ಆಶಾಕಿರಣ ವಿಶೇಷ ಶಿಕ್ಷಕರ ತರಬೇತಿ ಕೇಂದ್ರದಲ್ಲಿಶಾರದಾ ಪೂಜೆ
ವಿಶೇಷ ಮಕ್ಕಳ ಪರಿವರ್ತನೆಗೆ ಶ್ರಮಿಸಿವಿಕ ಸುದ್ದಿಲೋಕ ಶಿವಮೊಗ್ಗ
ಸೇವಾ ಮನೋಭಾವ, ತಾಳ್ಮೆ ಹಾಗೂ ವೃತ್ತಿಪರ ಬದ್ಧತೆಯೊಂದಿಗೆ ವಿಶೇಷ ಮಕ್ಕಳ ಜೀವನದಲ್ಲಿಪರಿವರ್ತನೆ ತರಲು ಶಿಕ್ಷಕರು ಶ್ರಮಿಸಬೇಕು ಎಂದು ಮಾನಸ ಸಮೂಹ ಸಂಸ್ಥೆ ನಿರ್ದೇಶಕರಾದ ಡಾ.ರಜನಿ ಎ. ಪೈ ತಿಳಿಸಿದರು.
ಆಶಾಕಿರಣ ವಿಶೇಷ ಶಿಕ್ಷಕರ ತರಬೇತಿ ಕೇಂದ್ರದಲ್ಲಿಹಮ್ಮಿಕೊಂಡಿದ್ದ ಶಾರದಾ ಪೂಜೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ವಿಶೇಷ ಅಗತ್ಯವಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಪುನರ್ವಸತಿ ಸೇವೆಗಳನ್ನು ಒದಗಿಸಲು ತರಬೇತಿ ಪಡೆದ ವಿಶೇಷ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ನಟರಾಜ್ ಮಾತನಾಡಿ, ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ವೃತ್ತಿಯಲ್ಲ, ಅದು ಸಮಾಜಮುಖಿ ಸೇವೆ. ಪ್ರೀತಿ, ಸಹಾನುಭೂತಿ ಮತ್ತು ಪರಿಣತಿಯೊಂದಿಗೆ ಕಾರ್ಯನಿರ್ವಹಿಸುವ ವಿಶೇಷ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳಾಗಿದ್ದು, ಈ ಕ್ಷೇತ್ರದಲ್ಲಿಸೇವೆ ಆರಂಭಿಸಿದ ಡಾ.ರಜನಿ ಪೈ ಹಾಗೂ ಡಾ.ಅಶೋಕ್ ಪೈ ಅವರ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.
ಕೇಂದ್ರದ ಉಪನ್ಯಾಸಕಿ ಸಂಗೀತಾ ಮಾತನಾಡಿ, ಡಿಇಸಿಎಸ್ ಇ ಮತ್ತು ಐಡಿ ಪಠ್ಯಕ್ರಮವು ವಿಶೇಷ ಶಿಕ್ಷಣ ಕ್ಷೇತ್ರದಲ್ಲಿವೈಜ್ಞಾನಿಕ ಜ್ಞಾನ ಮತ್ತು ಪ್ರಾಯೋಗಿಕ ಕೌಶಲಗಳನ್ನು ಸಮನ್ವಯಗೊಳಿಸುವ ಸಮಗ್ರ ತರಬೇತಿ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಉಪನ್ಯಾಸಕಿ ಸವಿತಾ, ರೋಟರಿ ಸಂಸ್ಥೆಯ ಉಮೇಶ್ ಶಣೈ ಮಾತನಾಡಿದರು. ಪ್ರತಿಭಾ ಮತ್ತು ರೇಖಾ ಪ್ರಾರ್ಥಿಸಿ, ಮನಸ್ಫೂರ್ತಿ ಕಲಿಕಾ ಕೇಂದ್ರದ ಪ್ರಾಂಶುಪಾಲರಾದ ರಂಗನಾಯಕಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರೂಪಾ ವಂದಿಸಿ, ಪ್ರಿಯಾಂಕ ನಿರೂಪಿಸಿದರು.
10ಅನಿತಾ01
ಶಿವಮೊಗ್ಗದ ಆಶಾಕಿರಣ ವಿಶೇಷ ಶಿಕ್ಷಕರ ತರಬೇತಿ ಕೇಂದ್ರದಲ್ಲಿಹಮ್ಮಿಕೊಂಡಿದ್ದ ಶಾರದಾ ಪೂಜೆ ಕಾರ್ಯಕ್ರಮದಲ್ಲಿಭಾಗವಹಿಸಿದ್ದ ಗಣ್ಯರು.