ಮೊಳಕಾಲ್ಮುರು: ತಾಪಂ ಆವರಣದಲ್ಲಿಶುಕ್ರವಾರ ತಾಲೂಕು ಸ್ವೀಪ್ ಸಮಿತಿಯಿಂದ ಎಸ್ ಐಆರ್ ಮತದಾರರ ವಿಶೇಷ ಪರಿಷ್ಕರಣೆ ಬಗ್ಗೆ ಮಹಿಳೆಯರಲ್ಲಿಜಾಗೃತಿ ಮೂಡಿಸಲು ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿತಾಲೂಕು ವ್ಯಾಪ್ತಿಯ ಗ್ರಾಪಂಗಳಿಂದ ಡಾಟಾ ಎಂಟ್ರಿ ಆಪರೇಟರ್ , ಕಾಯಕ ಮಿತ್ರ, ಮಹಿಳಾ ಒಕ್ಕೂಟದ ಪ್ರತಿನಿಧಿಗಳು ಗ್ರಾಪಂನಿಂದ ನಾಲ್ಕು ಜನರಂತೆ ಒಟ್ಟು 60ಕ್ಕೂ ಹೆಚ್ಚು ಜನ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಆಕರ್ಷಕವಾಗಿ ರಂಗೋಲಿ ಬಿಡಿಸುವುದರ ಜತೆಯಲ್ಲಿಮತದಾನಕ್ಕೆ ಸಂಬಂಧಿಸಿದಂತೆ ಉತ್ತಮ ಘೋಷ ವಾಕ್ಯ ರಚಿಸಿದವರಿಗೆ ಬಹುಮಾನ ನೀಡಲಾಯಿತು. ಕೋನಸಾಗರ ಗ್ರಾಪಂ(ಪ್ರಥಮ) ರಾಂಪುರ (ದ್ವಿತೀಯ) ನೇರ್ಲಹಳ್ಳಿ (ತೃತೀಯ)ಬಹುಮಾನ ಪಡೆದವು. ಬಿ.ಜಿ.ಕೆರೆ ಗ್ರಾಪಂಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಮತದಾರ ನೋಂದಣಾಧಿಕಾರಿ ಡಾ.ವೆಂಕಟೇಶ್ ನಾಯ್ಕ, ಗ್ರೇಡ್ 2 ತಹಸೀಲ್ದಾರ್ ಸಂತೋಷ್ ಕುಮಾರ್ , ತಾಪಂ ಇಒ ಎಚ್ .ಹನುಮಂತಪ್ಪ, ಬಿಇಒ ಇ.ನಿರ್ಮಲಾದೇವಿ, ಇತರರು ಇದ್ದರು.