ವಿಕ ಸುದ್ದಿಲೋಕ ಕಲಾದಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಬಳಿಕ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದ ಕುರಿತು ಪರಿಶೀಲಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಔಷಧ, ರೋಗಿಗಳ ದಾಖಲಾತಿ, ವೈದ್ಯರು ಮತ್ತು ಸಿಬ್ಬಂದಿ ಹಾಜರಿ ಪರಿಶೀಲಿಸಿದರು. ತಾಲೂಕು ಪಂಚಾಯಿತಿಯಿಂದ ಆಸ್ಪತ್ರೆಗೆ ಮಂಜೂರು ಮಾಡಿರುವ ವೈದ್ಯಕೀಯ ಉಪಕರಣಗಳ ಬಳಕೆ ಮತ್ತು ಅವುಗಳ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಹರಣಶಿಕಾರಿ ಕಾಲೊನಿಯ ದುರ್ಗಾದೇವಿ ದೇವಸ್ಥಾನ ಹತ್ತಿರದ ಹೈಮಾಸ್ಟ್ ಕಾಮಗಾರಿ ಪರಿಶೀಲಿಸಿದರು. ಗ್ರಾಮದ 7ನೇ ವಾರ್ಡ್ ನಲ್ಲಿನಡೆಯುತ್ತಿದ್ದ ಎಸ್ ಐಆರ್ ಕಾರ್ಯದ ಮಾಹಿತಿಯನ್ನು ಬಿಎಲ್ ಒಗಳಿಂದ ಪಡೆದುಕೊಂಡರು.
ಖಜ್ಜಿಡೋಣಿಗೆ ಭೇಟಿ:
ಸಮೀಪದ ಖಜ್ಜಿಡೋಣಿ ಗ್ರಾಮದಲ್ಲಿಗ್ರಾಪಂ ಕಚೇರಿ ಹಾಗೂ ಡಿಜಿಟಲ್ ಗ್ರಂಥಾಲಯಕ್ಕೆ ತಾಪಂ ಇಒ ಭೇಟಿ ನೀಡಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿಬಿಸಿಯೂಟ ಹಾಗೂ ದಾಸ್ತಾನು ಪರಿಶೀಲಿಸಿದರು. ದೇವನಾಳ, ಸೀಮಿಕೇರಿ, ಯಡಹಳ್ಳಿ ಸೇರಿದಂತೆ ನಾನಾ ಗ್ರಾಮಗಳಿಗೂ ಸಂಪಗಾವಿ ಭೇಟಿ ನೀಡಿದರು.
ಕೆಎಲ್ ಡಿಜಿ-11-1
ಕೆಎಲ್ ಡಿಜಿ-11-1-
ಕಲಾದಗಿಯಲ್ಲಿನಡೆಯುತ್ತಿರುವ ಎಸ್ ಐಆರ್ ಪ್ರಕ್ರಿಯೆ ಪರಿಶೀಲಿಸಿದ ತಾಪಂ ಇಒ ಸುಭಾಷ ಸಂಪಗಾವಿ.