ವಿಕ ಸುದ್ದಿಲೋಕ ಪಿರಿಯಾಪಟ್ಟಣತಾಲೂಕಿನ ಕಣಗಾಲು ಗ್ರಾಮದ ಗ್ರಾಮದೇವತೆ ಶ್ರೀ ದಿಡ್ಡಿಯಮ್ಮ ದೇವಸ್ಥಾನದ ಅರ್ಚಕರನ್ನು ಸೇವೆಯಿಂದ ವಜಾಗೊಳಿಸಿ ಅವರ ಸ್ಥಾನಕ್ಕೆ ಬೇರೆಯವರನ್ನು ನೇಮಿಸುವಂತೆ ಮೈಸೂರಿನ ಮುಜರಾಯಿ ತಹಸೀಲ್ದಾರ್ ಭಾಗ್ಯಾ ಅವರಿಗೆ ಕಣಗಾಲು ಗ್ರಾಮಸ್ಥರು ಶುಕ್ರವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥರು, ‘‘ಪ್ರಸ್ತುತ ಅರ್ಚಕ ಸತೀಶ್ ನಾಯಕ್ ಎಂಬುವರು ದೇವಸ್ಥಾನದ ಪೂಜೆ ಮಾಡುವ ವಿಧಾನದಲ್ಲಿಹಾಗೂ ತಮ್ಮ ವೈಯಕ್ತಿಕ ನಡವಳಿಕೆಯಲ್ಲಿಹಲವು ಅಸಮರ್ಪಕ ನಡೆಗಳನ್ನು ತೋರಿದ್ದು, ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ. ಅಲ್ಲದೆ, ಗ್ರಾಮದಲ್ಲಿಕಳೆದ ಫೆಬ್ರವರಿ ತಿಂಗಳಲ್ಲಿ ಉಪವಿಭಾಗಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿಗ್ರಾಮದಲ್ಲಿನಡೆದ ಶಾಂತಿ ಸಭೆಯಲ್ಲಿ, ಗ್ರಾಮದ ಸುಮಾರು ಶೇ.95 ಜನರು ಅರ್ಚಕರ ಕುಟುಂಬದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ವರದಿ ಪ್ರಕಾರ ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ಗ್ರಾಮಸ್ಥರ ಮಾಹಿತಿಯಂತೆ ಅರ್ಚಕರನ್ನು ಬದಲಾವಣೆ ಸಂಬಂದ ಶಿಫಾರಸ್ಸು, ಮಾಹಿತಿ ಕಳುಹಿಸಿಕೊಟ್ಟರೂ ಜಿಲ್ಲಾಮಟ್ಟದಲ್ಲಿಇನ್ನೂ ಸಮಸ್ಯೆ ಬಗೆಹರಿಸದೆ ಇರುವುದು ಬೇಸರದ ಸಂಗತಿಯಾಗಿದೆ.
ಹೀಗಾಗಿ ದೇವಸ್ಥಾನದ ಶಾಂತಿ, ಸುವ್ಯವಸ್ಥೆ ಹಾಗೂ ಭಕ್ತರ ಹಿತದೃಷ್ಟಿಯಿಂದ ಪ್ರಸ್ತುತ ಇರುವ ಅರ್ಚಕರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಿ, ಅವರ ಕುಟುಂಬ ಬಿಟ್ಟು ಬೇರೆ ಅರ್ಹ ವ್ಯಕ್ತಿಯನ್ನು ಹೊಸ ಅರ್ಚಕರಾಗಿ ನೇಮಿಸಬೇಕು ಎಂದು ಮುಜರಾಯಿ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘‘ನಿಯಮ, ಕಾನೂನು ಎಂದುಕೊಂಡು ಅವರ ಕುಟುಂಬದವರನ್ನೇ ನೇಮಿಸಿದರೆ ಗ್ರಾಮದಲ್ಲಿಅಶಾಂತಿ ಮತ್ತೆ ಸೃಷ್ಟಿಯಾಗಲಿದೆ. ಹಾಗಾಗಿ ಅದೇ ಜನಾಂಗಕ್ಕೆ ಸೇರಿದ ಬೇರೆ ಕುಟುಂಬದ ವ್ಯಕ್ತಿಯನ್ನು ನೇಮಿಸಿ, ಆದರೆ, ಆ ಕುಟುಂಬದ ವ್ಯಕ್ತಿಗಳನ್ನು ನೇಮಿಸಬಾರದು. ಗ್ರಾಮದ ಶಾಂತಿ ಕಾಪಾಡಲು ಹಾಗೂ ದೇವಸ್ಥಾನದ ಧಾರ್ಮಿಕ ಚಟುವಟಿಕೆಗಳು ಸುಗಮವಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು,’’ ಎಂದು ಮನವಿಯಲ್ಲಿವಿನಂತಿಸಲಾಗಿದೆ.
ಗ್ರಾಮಸ್ಥರಾದ ಕೆ.ವಿ. ಶೇಖರ್ , ಕೆ. ಮಹದೇವ್ , ಕೆ.ಡಿ. ಮಹದೇವ್ , ವಾಸು, ತಮ್ಮೇಗೌಡ, ಬೇಲೂರಯ್ಯ, ಕುಮಾರಶೆಟ್ಟಿ, ಸ್ವಾಮಿಗೌಡ, ಕಾಳಯ್ಯ, ಗೋವಿಂದೇಗೌಡ, ಹರಿ, ಜಗದೀಶ್ , ಮಧು, ಪ್ರಭಾಕರ, ರಾಜಶೇಖರ್ , ಇತರರು ಇದ್ದರು.
ಫೋಟೋ:
ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ಗ್ರಾಮದೇವತೆಯಾದ ಶ್ರೀ ದಿಡ್ಡಿಯಮ್ಮ ದೇವಸ್ಥಾನದ ಅರ್ಚಕರನ್ನು ಸೇವೆಯಿಂದ ವಜಾಗೊಳಿಸಿ, ಅವರ ಸ್ಥಾನಕ್ಕೆ ಬೇರೆಯವರನ್ನು ನೇಮಿಸುವಂತೆ ಮೈಸೂರಿನ ಮುಜರಾಯಿ ಇಲಾಖೆಯ ತಹಸೀಲ್ದಾರ್ ಭಾಗ್ಯ ಅವರಿಗೆ ಕಣಗಾಲು ಗ್ರಾಮಸ್ಥರು ಶುಕ್ರವಾರ ಮನವಿ ಸಲ್ಲಿಸಿದರು. ಎಂವೈಎಸ್ 11ಬಿಟಿಪಿ3