ಪ್ರಗತಿಪರ ಚಿತ್ರದುರ್ಗಕ್ಕಾಗಿ ಕೈಜೋಡಿಸಿ

Contributed byprakashbabbur@gmail.com|Vijaya Karnataka
cooperation is essential for the progress of chitradurga

ಪ್ರಗತಿಪರ ಚಿತ್ರದುರ್ಗಕ್ಕಾಗಿ ಕೈಜೋಡಿಸಿ

ವಿಕ ಸುದ್ದಿಲೋಕ ಹಿರಿಯೂರು

‘ನ್ಯಾಯಸಮ್ಮತ, ಸಮಾವೇಶಾತ್ಮಕ ಮತ್ತು ಪ್ರಗತಿಪರ ಚಿತ್ರದುರ್ಗ ಜಿಲ್ಲೆಯ ನಿರ್ಮಾಣಕ್ಕಾಗಿ ಎಲ್ಲಪ್ರಜಾಸತ್ತಾತ್ಮಕ ಶಕ್ತಿಗಳು, ನಾಗರಿಕ ಸಂಸ್ಥೆಗಳು ಹಾಗೂ ಕಾಳಜಿಯುಳ್ಳ ನಾಗರಿಕರು ಕೈಜೋಡಿಸಬೇಕು,’ ಎಂದು ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಮೌಲಾನಾ ಹೇಳಿದರು.

ನಗರದ ಐಬಿಎಂ ಸಭಾಂಗಣದಲ್ಲಿಶನಿವಾರ ಎಸ್ ಡಿಪಿಐ ಜಿಲ್ಲಾಮತ್ತು ತಾಲೂಕು ಮಟ್ಟದ ನಾಯಕರ ನೇತೃತ್ವದಲ್ಲಿನಡೆದ ಚಿತ್ರದುರ್ಗ ಜಿಲ್ಲಾಪ್ರತಿನಿಧಿಗಳ ಸಭೆ ಉದ್ಘಾಟಿಸಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯ ರೈತರು, ಕೃಷಿ ಕಾರ್ಮಿಕರು ಹಾಗೂ ಭದ್ರಾ ಮೇಲ್ದಂಡೆ ಯೋಜನೆ ವಿಳಂಬ ತಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನುದಾನ ಒದಗಿಸಿ, ಆಡಳಿತಾತ್ಮಕ ಅಡೆತಡೆ ನಿವಾರಿಸಿ, ಶೀಘ್ರ ಪೂರ್ಣಗೊಳಿಸಬೇಕು ಎಂದರು.

ರಾಜ್ಯ ಸಮಿತಿ ಸದಸ್ಯ ಹಾಗೂ ಚಿತ್ರದುರ್ಗ ಉಸ್ತುವಾರಿ ಫಯಾಝ್ ದಾವಣಗೆರೆ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿಸರಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಬೇಕು. ವಕ್ಫ್ ಆಸ್ತಿಗಳ ಸಂರಕ್ಷಣೆ, ಅಕ್ರಮ ಅತಿಕ್ರಮಣ ತೆರವು ಹಾಗೂ ಪಾರದರ್ಶಕ ಆಡಳಿತಕ್ಕೆ ವಕ್ಫ್ ಮಂಡಳಿ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಅಫಾನ್ ಅಲಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಗೀರ್ ಅಹ್ಮದ್ , ಖಜಾಂಚಿ ಘಾಜಿ ಹುಸೇನ್ , ಕಾರ್ಯದರ್ಸಿಗಳಾದ ಆಸಿಫ್ ಅಲಿ, ಸಾಕಿಬ್ , ತಾಲೂಕು ಅಧ್ಯಕ್ಷ ಜಮೀರ್ , ಉಮರ್ , ಹೊಸದುರ್ಗ ತಾಲೂಕು ಅಧ್ಯಕ್ಷ ಜಬಿವುಲ್ಲಾಇತರರಿದ್ದರು.

--

20 ಪಿಎಚ್ ವೈಆರ್ 4

ಹಿರಿಯೂರು ನಗರದ ಐಬಿಎಂ ಸಭಾಂಗಣದಲ್ಲಿಶನಿವಾರ ಎಸ್ ಡಿಪಿಐ ಜಿಲ್ಲಾಮತ್ತು ತಾಲೂಕು ಮಟ್ಟದ ನಾಯಕರ ನೇತೃತ್ವದಲ್ಲಿಚಿತ್ರದುರ್ಗ ಜಿಲ್ಲಾಪ್ರತಿನಿಧಿಗಳ ಸಭೆ ನಡೆಯಿತು.