ಬದುಕು ರೂಪಿಸಿಕೊಳ್ಳಲು ಶಿಕ್ಷಣ ಅತ್ಯಗತ್ಯ

Contributed byonkarmurthysp@gmail.com|Vijaya Karnataka
achieving a better future through education inauguration of devanooru school by mla investment
ಬದುಕು ರೂಪಿಸಿಕೊಳ್ಳಲು ಶಿಕ್ಷಣ ಅತ್ಯಗತ್ಯ

ವಿಕ ಸುದ್ದಿಲೋಕ ಸಖರಾಯಪಟ್ಟಣ
ಬದುಕು ರೂಪಿಸಿಕೊಳ್ಳುವಲ್ಲಿಶಿಕ್ಷಣ ಬಹುಮುಖ್ಯ ಪಾತ್ರವಹಿಸಲಿದೆ ಎಂದು ಶಾಸಕ ಎಚ್ .ಡಿ.ತಮ್ಮಯ್ಯ ತಿಳಿಸಿದರು.

ಸಮೀಪದ ದೇವನೂರಿನಲ್ಲಿಭಾನುವಾರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ಪಡೆದವರು ಸಮಾಜದ ಮುನ್ನಲೆಯಲ್ಲಿನಿಲ್ಲುತ್ತಾರೆ. ಪೋಷಕರು ತಮ್ಮ ಮಕ್ಕಳು ಸರಕಾರಿ ಶಾಲೆಯಲ್ಲಿವ್ಯಾಸಂಗ ಮಾಡುತ್ತಿದ್ದಾರೆ ಎಂಬ ಕೀಳರಿಮೆ ಇಟ್ಟುಕೊಳ್ಳದೆ ಭವಿಷ್ಯದಲ್ಲಿಉತ್ತಮ ಪ್ರಜೆಗಳಾಗಿ ರೂಪಿಸಲು ಪ್ರೋತ್ಸಾಹಿಸಬೇಕಿದೆ ಎಂದರು.

ದೇವನೂರು ಶಾಲಾ ಕೊಠಡಿಯನ್ನು 50 ಲಕ್ಷ ರೂ. ವೆಚ್ಚದಲ್ಲಿಹಾಗೂ 10 ಲಕ್ಷ ರೂ. ವೆಚ್ಚದಲ್ಲಿಶೌಚಾಲಯ ನಿರ್ಮಿಸಲಾಗಿದೆ. ಸಖರಾಯಪಟ್ಟಣ, ದೇವನೂರು ಲೋಕೋಪಯೋಗಿ ರಸ್ತೆ ಕಾಮಗಾರಿ ಸೇರಿದಂತೆ ದೇವನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ3 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯ ಪರಿಸರ ಮಾಲಿನ್ಯ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್ .ಮಹೇಶ್ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ವ್ಯವಸ್ಥೆಗೆ ಪೂರಕವಾಗಿ ಶಾಸಕ ಎಚ್ .ಡಿ.ತಮ್ಮಯ್ಯ ಅವರು ಶಾಲಾ ಕೊಠಡಿಗಳಿಗೆ ಅನುದಾನ ನೀಡಿ ಕಳಕಳಿ ತೋರಿದ್ದಾರೆ ಎಂದರು.

ಎಸ್ ಡಿಎಂಸಿ ಅಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ದೇವನೂರು ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಮನವಿ ಮಾಡಿದರು.

ಬಿಇಒ ಬುರ್ಹನುದ್ದೀನ್ ಚೋಪ್ದಾರ್ ಮಾತನಾಡಿದರು. ದೇವನೂರು ಗ್ರಾ.ಪಂ. ಅಧ್ಯಕ್ಷೆ ದೀಪಾ ದಕ್ಷಿಣಮೂರ್ತಿ, ಉಪಾಧ್ಯಕ್ಷ ಎಸ್ .ಪಿ.ರವಿಕುಮಾರ್ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡ, ತಾ.ಪಂ. ಇಒ ಸಿ.ಆರ್ .ಪ್ರವೀಣ್ , ಭೂಮಿಕ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಮೋಹನ್ ನಾಯ್ ್ಕ, ಸಿಡಿಪಿಒ ದೇವರಾಜ್ , ರುದ್ರಪ್ಪ, ವಿ.ರವಿಕುಮಾರ್ , ಬಸಪ್ಪ, ನಿರ್ಮಿತಿ ಕೇಂದ್ರದ ಎಂಜಿನಿಯರ್ ಗಂಗಾಧರ್ ಹಾಗೂ ಇತರರಿದ್ದರು.

21ಔಟಿಞಚಿಡಿ1

ಸಖರಾಯಪಟ್ಟಣ ಸಮೀಪದ ದೇವನೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳನ್ನು ಶಾಸಕ ಎಚ್ .ಡಿ.ತಮ್ಮಯ್ಯ ಉದ್ಘಾಟಿಸಿದರು.