ವಿಕ ಸುದ್ದಿಲೋಕ ಮುಳಬಾಗಲುಮುದಿಗೆರೆ ಗ್ರಾಪಂ ವ್ಯಾಪ್ತಿಗೆ ಸೇರುವ ಕೆ.ಉಗಣಿ ಗ್ರಾಮದಲ್ಲಿಗ್ರಾಮ ಠಾಣೆ ಜಮೀನನ್ನು ಬಿಲ್ಲಾಲ ಎಂಬವರು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕು ಹಾಗೂ ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ಮಾಡಿರುವ ಈತನ ವಿರುದ್ಧ್ದ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಎನ್ .ರಾಜಗೋಪಾಲ್ ನೇತೃತ್ವದಲ್ಲಿತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಹಲವಾರು ವರ್ಷಗಳಿಂದ ಗ್ರಾಮಸ್ಥರು ಗ್ರಾಮ ಠಾಣೆ ಜಾಗದಲ್ಲಿತಿಪ್ಪೆಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಅದರೆ ಕಾನೂನು ಬಾಹಿರವಾಗಿ ಬಿಲ್ಲಾಲ ಎಂಬವರು ಗ್ರಾಮ ಠಾಣೆ ಜಾಗವನ್ನು ಅಕ್ರಮಿಸಿಕೊಂಡಿದ್ದು ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಗ್ರಾಮಸ್ಥರು ಪ್ರಶ್ನೆ ಮಾಡಿದಾಗ ಬಿಲ್ಲಾಲ ಎಂಬುವರು ತನ್ನ ಸಹಚರರೊಂದಿಗೆ ಹಿಂದು ಮಹಿಳೆಯರು ಹಾಗೂ ಪುರುಷರ ಮೇಲೆ ದೌರ್ಜನ್ಯ ಮಾಡಿ ಹಲ್ಲೆನಡೆಸಿದ್ದಾರೆ. ಈಗಾಗಲೇ 7 ಮಂದಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ತಹಸೀಲ್ದಾರ್ ಅವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದ ಪಕ್ಷದಲ್ಲಿಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಪತ್ರ ಸ್ವೀಕರಿಸಿದ ತಹಸೀಲ್ದಾರ್ ವಿ.ಗೀತಾ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಅಮರ್ ನಾಥ್ , ಬಿಜೆಪಿ ಮುಖಂಡರಾದ ನಂಗಲಿ ಸತೀಶ್ ಕುಮಾರ್ , ಶಂಕರ್ ಕೇಸರಿ, ಮೈಕ್ ಶಂಕರ್ , ಕಿಶೋರ್ , ನಂಗಲಿ ವಿಶ್ವನಾಥ್ ರೆಡ್ಡಿ ಅಗರ ಸುರೇಶ್ ಮತ್ತಿತರರು ಇದ್ದರು.
22 ಎಂ.ಬಿ.ಎಲ್ ಪೋಟೋ 5 ಮುಳಬಾಗಲು ನಗರದ ತಾಲೂಕು ಕಚೇರಿ ಮುಂಭಾಗ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಎನ್ .ರಾಜಗೋಪಾಲ್ ತಹಸೀಲ್ದಾರ್ ವಿ.ಗೀತಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.