ಞahaಞಞಛಿd.a್ಟಜ್ಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞಮಂಗಳೂರು ಹಳೆ ಬಂದರಿನ ಹೊಯ್ಗೆಬಜಾರ್ ನಿಂದ ಕೂಳೂರು ಸೇತುವೆ ತನಕ ರೋ-ರೋ ಜಲಸಾರಿಗೆ ಸೇವೆ ಆರಂಭಿಸುವ ಬಹುನಿರೀಕ್ಷಿತ ಯೋಜನೆಗೆ ರಾಜ್ಯ ಮಟ್ಟದ ತಜ್ಞರ ಮೌಲ್ಯಮಾಪನ ಸಮಿತಿ (ಎಸ್ ಇಎಸಿ) ಮಂಜೂರಾತಿ ನೀಡಿದೆ. ಇದರೊಂದಿಗೆ ಸುಮಾರು 29.60 ಕೋಟಿ ವೆಚ್ಚದ ಯೋಜನೆಗೆ ವೇಗ ಸಿಕ್ಕಿದ್ದು, ಅಕ್ಟೋಬರ್ ವೇಳೆಗೆ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಯೋಜನೆ ಪೂರ್ಣಗೊಂಡ ಬಳಿಕ ವಾಹನ ಹಾಗೂ ಪ್ರಯಾಣಿಕರ ಸಂಚಾರಕ್ಕೆ ಪರ್ಯಾಯ ಜಲಮಾರ್ಗ ಲಭ್ಯವಾಗಲಿದ್ದು, ನಗರದ ಟ್ರಾಫಿಕ್ ದಟ್ಟಣೆ ತಗ್ಗಿಸುವಲ್ಲಿಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.
ಅಕ್ಟೋಬರ್ ನಲ್ಲಿದ.ಕ. ಜಿಲ್ಲಾಧಿಕಾರಿ ನೇತೃತ್ವದಲ್ಲಿಪರಿಸರ ಸಾರ್ವಜನಿಕ ಅಹವಾಲು ಸ್ವೀಕಾರ ನಡೆದಿತ್ತು. ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಅಭಿವೃದ್ಧಿ ಇಲಾಖೆಯ ಕರ್ನಾಟಕ ಜಲಸಾರಿಗೆ ಮಂಡಳಿಯು 29.60 ಕೋಟಿ ರೂ. ಮೊತ್ತದಲ್ಲಿಯೋಜನೆ ಅನುಷ್ಠಾನಕ್ಕೆ ತರುತ್ತಿದೆ. ಇದಕ್ಕೆ ಕೇಂದ್ರ ಸರಕಾರದ ಸಾಗರಮಾಲ ಯೋಜನೆ-2022ರಲ್ಲಿಅನುಮೋದನೆ ನೀಡಿತ್ತು. ಎಸ್ ಇಎಸಿ ಸಮಿತಿ 2024ರಲ್ಲಿಶಿಫಾರಸು ಮಾಡಿತ್ತು. ಕೇಂದ್ರ-ರಾಜ್ಯ ಸರಕಾರದ ಸಮಾನ ಮೊತ್ತದಲ್ಲಿಯೋಜನೆ ಸಾಕಾರಗೊಳ್ಳಲಿದೆ.
ಪ್ರತಿದಿನ 400 ಮೆ.ಟನ್ ಸರಕು ಮತ್ತು 200 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಹೊಯ್ಗೆಬಜಾರ್ ಮತ್ತು ಕೂಳೂರಿನಲ್ಲಿ25/13 ಮೀ. ಅಳತೆಯ ಜೆಟ್ಟಿ ಮತ್ತು ಟರ್ಮಿನಲ್ ಕಟ್ಟಡ ನಿರ್ಮಿಸಲಾಗುತ್ತಿದೆ. ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ 3 ಮೀ. ಆಳದವರೆಗೆ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಎರಡು ತೇಲುವ ಜೆಟ್ಟಿಗಳು ಮತ್ತು ಒಂದು ತೇಲುವ ಕಿರುಸೇತುವೆ ಅಭಿವೃದ್ಧಿಪಡಿಸಲಾಗುತ್ತದೆ. ಎರಡು ರೋ-ರೋ ಹಡಗುಗಳು ದಿನಕ್ಕೆ 12 ಬಾರಿ ಸಂಚರಿಸಲಿವೆ.
ಯೋಜನೆಗೆ ಕರಾವಳಿ ನಿಯಂತ್ರಣ ವಲಯದ ಅನುಮತಿ ಹಿಂದೆಯೇ ಸಿಕ್ಕಿತ್ತು. ಅಕ್ಟೋಬರ್ ನಲ್ಲಿನಡೆದಿದ್ದ ಪರಿಸರ ಅಹವಾಲು ಸಭೆಯಲ್ಲಿಪರ-ವಿರೋಧ ವ್ಯಕ್ತವಾಗಿತ್ತು. ಯೋಜನೆಯಿಂದ ಮೀನುಗಾರಿಕೆ ಚಟುವಟಿಕೆಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲಮತ್ತು ಪರಿಸರದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಎಲ್ಲಸುರಕ್ಷತೆ ಮತ್ತು ಭದ್ರತಾ ಕ್ರಮ ಅಳವಡಿಸಲಾಗುವುದು ಎಂಬುದು ಅಧಿಕಾರಿಗಳ ಸಮರ್ಥನೆ.
ಯೋಜನೆಯು ಮಂಗಳೂರು ನಗರದ ಟ್ರಾಫಿಕ್ ಸಮಸ್ಯೆ, ಸಾರಿಗೆ ಸಮಯ ಕಡಿಮೆ ಮಾಡಲಿದೆ. ಜಲ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ. ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ ಮತ್ತು ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎನ್ನುತ್ತದೆ ಯೋಜನೆ.
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ(ಎನ್ ಇಸಿಎಫ್ ) ಯೋಜನೆ ಬಗ್ಗೆ ಕೆಲವು ಆಕ್ಷೇಪ ವ್ಯಕ್ತಪಡಿಸಿತ್ತು. ಹೂಳೆತ್ತುವಿಕೆ, ಭೂಮಿ ತುಂಬುವಿಕೆ ಮತ್ತು ನಿರ್ಮಾಣ ಕಾರ್ಯಗಳಿಂದಾಗಿ ಕಾಂಡ್ಲಾವನ ಮತ್ತು ಮರಗಳು ನಾಶವಾಗುವ ಸಾಧ್ಯತೆಯಿದೆ. ಪರಿಸರ ಅನುಮತಿ ಪಡೆಯುವ ಮೊದಲೇ ಯೋಜನೆಯ ಟೆಂಡರ್ ಪ್ರಕಟಿಸಲಾಗಿದೆ ಎಂಬುದು ಒಕ್ಕೂಟದ ಆಕ್ಷೇಪವಾಗಿತ್ತು.
ಬಾಕ್ಸ್
ಯೋಜನೆಯಲ್ಲಿಏನೇನಿದೆ?
*2 ಆರ್ ಸಿಸಿ ಜೆಟ್ಟಿಗಳ ನಿರ್ಮಾಣ
*2 ವಾಟರ್ ಫ್ರಂಟ್ ಟರ್ಮಿನಲ್
*2 ಯುಟಿಲಿಟಿ ಕಟ್ಟಡಗಳು
*2 ತೇಲುವ ಜೆಟ್ಟಿಗಳು
*1 ರೋ-ರೋ ಹಡಗು
*78,078 ಕ್ಯೂ.ಮೀ. ಡ್ರೆಜ್ಜಿಂಗ್
ಬಾಕ್ಸ್
ಮೀನಿನ ನೀರಿಗೆ ಮುಕ್ತಿ?
ರೋರೋ ಜಲಸಾರಿಗೆ ಸೇವೆ ಆರಂಭಗೊಂಡರೆ, ಮಂಗಳೂರು ದಕ್ಕೆಯಿಂದ ಮೀನಿನ ನೀರು ಚೆಲ್ಲುವ ಲಾರಿಗಳ ಸಂಚಾರದಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಜಿಲ್ಲಾಡಳಿತ ನಗರದೊಳಗೆ ಮೀನಿನ ಲಾರಿಗಳಿಗೆ ನಿಷೇಧ ಹೇರಿದರೆ, ಮೀನಿನ ಲಾರಿಗಳನ್ನು ಹೊಯ್ಗೆಬಜಾರ್ ಜೆಟ್ಟಿಯಿಂದ ಕೂಳೂರು ಜೆಟ್ಟಿಗೆ ತಂದು ಇಳಿಸಿ, ಅಲ್ಲಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಚರಿಸಬಹುದು ಎನ್ನುತ್ತಾರೆ ನಗರ ವಾಸಿಗಳು.
ಕೋಟ್
ಕೂಳೂರು-ಹೊಯ್ಗೆಬಜಾರ್ ಮಧ್ಯೆ ರೋರೋ ಜಲಸಾರಿಗೆ ಸೇವೆಗೆ ಪೂರಕ ಜೆಟ್ಟಿಗಳ ನಿರ್ಮಾಣಕ್ಕೆ ರಾಜ್ಯಮಟ್ಟದ ತಜ್ಞರ ಮೌಲ್ಯಮಾಪನ ಸಮಿತಿ ಮಂಜೂರಾತಿ ನೀಡಿದೆ. ಇದರಿಂದ ಯೋಜನೆ ಅನುಷ್ಠಾನಕ್ಕೆ ವೇಗ ಸಿಕ್ಕಿದೆ. ಕೆಲವು ಪ್ರಕ್ರಿಯೆಗಳು ನಡೆದು, ಆಗಸ್ಟ್ ಬಳಿಕ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ.