ವಿಕ ಸುದ್ದಿಲೋಕ ಮೊಳಕಾಲ್ಮುರುತಾಲೂಕಿನಲ್ಲಿಹಾದು ಹೋಗಿರುವ 150ಎ ರಾಷ್ಟ್ರೀಯ ಹೆದ್ದಾರಿಯ ರಾಯಾಪುರ ಮ್ಯಾಸರಹಟ್ಟಿ ಸಮೀಪದಲ್ಲಿಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ಒಂದೇ ಕುಟುಂಬದ ಐವರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ಚಿತ್ರದುರ್ಗ ಜೆಸಿಆರ್ ಬಡಾವಣೆಯ ಕೆ.ಎಸ್ .ಆನಂದ್ (55), ರೂಪಾ(50), ಪ್ರೇರಣಾ(27), ಕೆ.ಎ.ಶ್ರೇಯಸ್ (24) ಹಾಗೂ ಪ್ರೇರಣಾ ಐದು ತಿಂಗಳ ಮಗು ಘಟನೆಯಲ್ಲಿಗಾಯಗೊಂಡಿದೆ. ಇದರಲ್ಲಿಇಬ್ಬರು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿಚಿಕಿತ್ಸೆಗೆ ದಾಖಲಾಗಿದ್ದಾರೆ.
ಕಾರಿನಲ್ಲಿಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಪಡೆದು ವಾಪಸ್ ಚಿತ್ರದುರ್ಗಕ್ಕೆ ತೆರಳುತ್ತಿದ್ದಾಗ ದಾರಿ ಮಧ್ಯದ ರಾಯಾಪುರ ಮ್ಯಾಸರಹಟ್ಟಿ ಸಮೀಪದಲ್ಲಿಮುಂದೆ ಚಲಿಸುತ್ತಿದ್ದ ಲಾರಿ ಚಾಲಕ ಲಾರಿ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬಲಭಾಗಕ್ಕೆ ತಂದ ಪರಿಣಾಮ ಹಿಂದೆ ಬರುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದೆ.
--
22 ಎಂಎಲ್ ಕೆ ಪಿ 2
ಮೊಳಕಾಲ್ಮುರು ತಾಲೂಕು 150 ಎ ರಾಷ್ಟ್ರೀಯ ಹೆದ್ದಾರಿಯ ರಾಯಾಪುರ ಮ್ಯಾಸರಹಟ್ಟಿ ಸಮೀಪದಲ್ಲಿಭಾನುವಾರ ಸಂಜೆ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು ಜಖಂಗೊಂಡಿರುವುದು.