ಲೀಡ್ -2

Contributed byshubha.hegde@timesgroup.com|Vijaya Karnataka
the perils of midnight eating

ಮಧ್ಯರಾತ್ರಿ ಆಹಾರ ಸೇವನೆ ಜೀರ್ಣಾಂಗವ್ಯೂಹಕ್ಕೆ ಅಪಾಯ

ಇಂಟ್ರೊ: ಮಧ್ಯರಾತ್ರಿಯ ಹಸಿವನ್ನು ನೀಗಿಸುವ ಅಭ್ಯಾಸದಿಂದ ದೇಹದಲ್ಲಿಆಗುವ ಬದಲಾವಣೆ ಕುರಿತು ಇತ್ತೀಚಿನ ಸಮಶೋಧನೆಯೊಂದು ಬೆಳಕು ಚೆಲ್ಲಿದೆ.

ಲವಲವಿಕೆ ಸುದ್ದಿಲೋಕ

ನಾವು ಏನನ್ನು ತಿನ್ನುತ್ತೇವೆ ಎಂಬುದು ಎಷ್ಟು ಮುಖ್ಯವೋ, ಯಾವ ಸಮಯದಲ್ಲಿತಿನ್ನುತ್ತೇವೆ ಎಂಬುದು ಅಷ್ಟೇ ಪ್ರಾಮುಖ್ಯ ಪಡೆಯುತ್ತದೆ. ಹಗಲಿನಲ್ಲಿತಿನ್ನುವ ಆಹಾರವನ್ನು ಮಧ್ಯರಾತ್ರಿಯಲ್ಲಿತಿಂದರೆ ಜೀರ್ಣಾಂಗ ವ್ಯೂವಕ್ಕೆ ಅಪಾಯ ಎಂದಿದೆ ಸಂಶೋಧನೆ.

ಸಾಮಾನ್ಯವಾಗಿ ಹೊತ್ತಲ್ಲದ ಹೊತ್ತಲ್ಲಿಆಹಾರ ಸೇವಿಸುವ ಅಭ್ಯಾಸದಿಂದ ಹೊಟ್ಟೆ ಉಬ್ಬರ, ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕೆ ನಿಖರ ಕಾರಣವೇನು ಎಂಬುದನ್ನು ಅಮೆರಿಕದ ಯುಟಿ ಸೌತ್ ವೆಸ್ಟರ್ನ್ ಮೆಡಿಕಲ್ ಸೆಂಟರ್ ನಡೆಸಿದ ಇತ್ತೀಚಿನ ಸಂಶೋಧನೆಯೊಂದು ಬಹಿರಂಗಪಡಿಸಿದೆ.

ಜೈವಿಕ ಗಡಿಯಾರದ ಸಂಘರ್ಷ

ನಮ್ಮ ಮಿದುಳಿನಲ್ಲಿಮುಖ್ಯ ಜೈವಿಕ ಗಡಿಯಾರ ಇರುತ್ತದೆ. ಇದು ಹಗಲು ಹಾಗೂ ರಾತ್ರಿಯ ಬೆಳಕಿಗೆ ಅನುಗುಣವಾಗಿ ನಮ್ಮ ನಿದ್ದೆ ಮತ್ತು ಎಚ್ಚರದ ಸ್ಥಿತಿಯನ್ನು ನಿಯಂತ್ರಿಸುತ್ತದೆ. ಸಂಶೋಧನೆಯ ಪ್ರಕಾರ, ನಮ್ಮ ಕರುಳಿನಲ್ಲಿರುವ ವಿಭಿನ್ನ ಜೀವಕೋಶಗಳೂ ಸಹ ತಮ್ಮದೇ ಆದ ಸ್ವತಂತ್ರ ಜೈವಿಕ ಗಡಿಯಾರಗಳನ್ನು ಹೊಂದಿರುತ್ತವೆ. ನಾವು ನಿದ್ದೆ ಮಾಡಬೇಕಾದ ಸಮಯದಲ್ಲಿಆಹಾರ ಸೇವಿಸಿದಾಗ, ಕರುಳಿನ ಜೈವಿಕ ಗಡಿಯಾರಗಳ ನಡುವೆ ಪರಸ್ಪರ ಹೊಂದಾಣಿಕೆ ತಪ್ಪುತ್ತದೆ. ಇದು ಜೀರ್ಣಕ್ರಿಯೆಯ ಏರುಪೇರಿಗೆ ನೇರ ಕಾರಣವಾಗುತ್ತದೆ.

ಜೀರ್ಣಾಂಗವ್ಯೂಹದ ಕಾಯಿಲೆ

ಕರುಳಿನ ಜೀವಕೋಶಗಳ ನಡವಳಿಕೆಯಲ್ಲಿಸಾಮರಸ್ಯ ತಪ್ಪಿದಾಗ ಕರುಳಿನ ಉರಿಯೂತ, ತೀವ್ರ ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆಹಾರ ಸರಿಯಾಗಿ ಜೀರ್ಣವಾಗದೆ ದೇಹದಲ್ಲಿಕೊಬ್ಬು ಶೇಖರಣೆಯಾಗುವುದು ಮತ್ತು ಮಧುಮೇಹದಂತಹ ಅಪಾಯಗಳು ಹೆಚ್ಚಾಗುತ್ತವೆ. ನಮ್ಮ ಜೀರ್ಣಾಂಗ ವ್ಯವಸ್ಥೆಯು ಕೇವಲ ಆಹಾರ ಜೀರ್ಣ ಮಾಡುವ ಅಂಗವಲ್ಲ. ನಿಯಮಿತ ಸಮಯವನ್ನು ಪಾಲಿಸುವ ಸೂಕ್ಷ್ಮ ವ್ಯವಸ್ಥೆ. ಹೀಗಾಗಿ ಯಾವ ಸಮಯಕ್ಕೆ ಎಂತಹ ಆಹಾರ ಸೇವಿಸಬೇಕು ಎಂಬುದು ಮುಖ್ಯ.

ಆಹಾರ ಸೇವನೆಗೆ ಸೂಕ್ತ ಸಮಯ

ಕರುಳಿನ ಜೈವಿಕ ಗಡಿಯಾರ ಹದಗೆಡದಂತೆ ಕಾಯ್ದುಕೊಳ್ಳಲು ನಾವು ಏನನ್ನು ತಿನ್ನುತ್ತೇವೆ ಮತ್ತು ಯಾವಾಗ ತಿನ್ನುತ್ತೇವೆ ಎಂಬ ಎರಡು ಅಂಶಗಳ ನಡುವೆ ಸಮತೋಲನ ಇರಬೇಕಾದದ್ದು ಅತ್ಯಗತ್ಯ. ಹಾರ್ಮೋನ್ ಗಳು ಮತ್ತು ಜೀರ್ಣಕಾರಿ ರಸಗಳು ಸೂರ್ಯನ ಬೆಳಕಿಗೆ ಅನುಗುಣವಾಗಿ ಸ್ರವಿಸುತ್ತವೆ. ಆದ್ದರಿಂದ ಆಹಾರ ಸೇವಿಸುವ ಸಮಯ ಮುಖ್ಯ ಪಾತ್ರವಹಿಸುತ್ತದೆ. ಬೆಳಗಿನ ಉಪಾಹಾರವನ್ನು 7-8.30ರೊಳಗೆ ಮುಗಿಸುವುದು ಉತ್ತಮ. ಬೆಳಗ್ಗಿನ ಸಮಯದಲ್ಲಿಚಯಾಪಚಯ ಕ್ರಿಯೆ ಚುರುಕಾಗಿರುವುದರಿಂದ ಈ ಸಮಯದಲ್ಲಿ ಪೌಷ್ಟಿಕ ಆಹಾರ ಸೇವಿಸಬೇಕು. ಮಧ್ಯಾಹ್ನದ ಊಟ 1ರಿಂದ 2 ಸೂಕ್ತ. ಸೂರ್ಯ ನೆತ್ತಿಗೆ ಬಂದಾಗ ಜಠರಾಗ್ನಿ ತೀವ್ರವಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿಬೇಳೆ, ಅನ್ನ, ತರಕಾರಿ ಒಳಗೊಂಡ ಪೂರ್ಣ ಪ್ರಮಾಣದ ಊಟ ಮಾಡಬಹುದು. ರಾತ್ರಿಯ ಊಟ 7ರಿಂದ 8 ಗಂಟೆ ಉತ್ತಮ. ಸೂರ್ಯಾಸ್ತದ ನಂತರ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಹಾಗಾಗಿ ಮಲಗುವುದಕ್ಕೆ ಕನಿಷ್ಠ 2 ರಿಂದ 3 ಗಂಟೆಗಳ ಮುಂಚಿತವಾಗಿ ರಾತ್ರಿಯ ಊಟ ಮುಗಿಸಬೇಕು. ಇದು ಕರುಳಿನ ಜೀವಕೋಶಗಳಿಗೆ ವಿಶ್ರಾಂತಿ ಪಡೆಯಲು ಸಮಯ ನೀಡುತ್ತದೆ.

ಬಾಕ್ಸ್

ರಾತ್ರಿ ಏನನ್ನು ಸೇವಿಸಬೇಕು?

ಕರುಳಿನ ಆರೋಗ್ಯವನ್ನು ವೃದ್ಧಿಸುವ ಮತ್ತು ರಾತ್ರಿ ವೇಳೆಯ ಜೀರ್ಣಕ್ರಿಯೆಯ ಭಾರವನ್ನು ತಗ್ಗಿಸುವ ಆಹಾರಗಳ ಆಯ್ಕೆ ಉತ್ತಮ ಎನ್ನುವ ಆಹಾರ ತಜ್ಞರು, ಕರುಳಿನ ಬ್ಯಾಕ್ಟೀರಿಯಾಗಳಿಗೆ ಪೂರಕ ಆಹಾರ

ಮೊಸರು ಮತ್ತು ಮಜ್ಜಿಗೆ ತೆಗೆದುಕೊಳ್ಳಿ. ನಾರಿನಂಶವಿರುವ ಹಸಿರು ತರಕಾರಿಗಳು, ಹಣ್ಣುಗಳು, ನವಣೆ, ಸಾಮೆ ಮುಂತಾದ ಸಿರಿಧಾನ್ಯಗಳು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತವೆ. ರಾತ್ರಿಯ ಊಟಕ್ಕೆ ಲಘು ಆಹಾರಗಳಾದ ತರಕಾರಿ ಸೂಪ್ , ರಾಗಿ ಗಂಜಿ, ಹೆಸರುಬೇಳೆ ಕಿಚಡಿ ಅಥವಾ ಮೃದುವಾದ ಇಡ್ಲಿಸೇವಿಸಿ. ತಡರಾತ್ರಿಯಲ್ಲಿಬಿರಿಯಾನಿ, ಕರಿದ ಪದಾರ್ಥಗಳು, ಮೈದಾ ಪದಾರ್ಥಗಳು ಮತ್ತು ಸಂಸ್ಕರಿಸಿದ ಆಹಾರಗಳನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇವುಗಳು ಕರುಳಿನಲ್ಲಿದೀರ್ಘಕಾಲ ಉಳಿದು ಗ್ಯಾಸ್ಟ್ರಿಕ್ ಮತ್ತು ಉರಿಯೂತವನ್ನು ಉಂಟುಮಾಡುತ್ತವೆ. ರಾತ್ರಿ ತಡವಾಗಿ ಸ್ವೀಟ್ಸ… ತಿನ್ನುವುದರಿಂದ ರಕ್ತದಲ್ಲಿಸಕ್ಕರೆ ಪ್ರಮಾಣ ಹೆಚ್ಚಾಗಿ, ಇನ್ಸುಲಿನ್ ಮಟ್ಟ ಏರುಪೇರಾಗುತ್ತದೆ ಮತ್ತು ಇದು ಲಿವರ್ ನಲ್ಲಿಕೊಬ್ಬು ಶೇಖರಣೆಯಾಗಲು ಕಾರಣವಾಗುತ್ತದೆ.