ಶಾಲೆ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಲಕ್ಷ ರೂ.ದತ್ತಿನಿಧಿ(ಹೆಡ್ )
ಗುಡ್ಡದಮಾದಾಪುರ ಸಹಿಪ್ರಾ ಕನ್ನಡ ಶಾಲೆಗೆ ಹಳೆ ವಿದ್ಯಾರ್ಥಿ ಕೊಡುಗೆವಿಕ ಸುದ್ದಿಲೋಕ ರಟ್ಟೀಹಳ್ಳಿ
ಸರಕಾರಿ ಶಾಲೆಗೆ 100 ರೂ. ಕೊಡುವುದಕ್ಕೂ ವಿಚಾರ ಮಾಡುವ ಕಾಲದಲ್ಲಿಶಾಲೆಯ ಹಳೆ ವಿದ್ಯಾರ್ಥಿಯೊಬ್ಬ ತಂದೆ, ತಾಯಿ ನೆನಪಿಗಾಗಿ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ 1 ಲಕ್ಷ ರೂ.ದತ್ತಿನಿಧಿ ಸ್ಥಾಪಿಸಿ ಗಮನ ಸೆಳೆದಿದ್ದಾರೆ.
ತಮ್ಮ ಶಾಲೆ ಹಾಗೂ ಮಕ್ಕಳ ಉತ್ತೇಜನಕ್ಕಾಗಿ ಶಿವಲಿಂಗಪ್ಪ ಕಾಗಿನೆಲ್ಲಿ1 ಲಕ್ಷ ರೂ ದತ್ತಿನಿಧಿ ಇಟ್ಟು ಗ್ರಾಮಸ್ಥರ ಮತ್ತು ತಾಲೂಕಿನ ಜನರ ಪ್ರಿತಿಗೆ ಪಾತ್ರರಾಗಿದ್ದಾರೆಂದು ತಾಲೂಕಿನ ಗುಡ್ಡದಮಾದಾಪುರ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಎಸ್ ಡಿಎಂಸಿ ಅಧ್ಯಕ್ಷ ಗದಿಗೆಯ್ಯ ಬಸಾಪುರ ಮಾಹಿತಿ ನೀಡಿದ್ದಾರೆ.
ಅವರು ಶಾಲೆಯಲ್ಲಿಔಪಚಾರಿಕವಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿಶಿವಲಿಂಗಪ್ಪ ತಮ್ಮ ಆಶಯವನ್ನು ಹೇಳಿಕೊಂಡು ಮಕ್ಕಳಿಗೆ ಉಚಿತವಾಗಿ ನೋಟ್ಸ್ ಬುಕ್ , ಕಂಪಾಸ್ , ಪೆನ್ಸಿಲ್ ಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿಅವರು ತಮ್ಮ ತಂದೆ ಬಸಪ್ಪ, ತಾಯಿ ಬಸಮ್ಮ ಕಾಗಿನೆಲ್ಲಿಅವರ ಸ್ಮರಣಾರ್ಥವಾಗಿ ಶಾಲೆ ಹೆಸರಲ್ಲಿಪೋಸ್ಟ್ ಆಫೀಸ್ ನಲ್ಲಿ1 ಲಕ್ಷ ದತ್ತಿನಿಧಿ ಸ್ಥಾಪಿಸಿದ್ದು, ಅದರಿಂದ ಬಂದ ಬಡ್ಡಿ ಹಣದಲ್ಲಿಮಕ್ಕಳ ಪ್ರತಿಭಾ ಪುರಸ್ಕಾರ ಮಾಡಲು ತಿಳಿಸಿದರು. ಅಲ್ಲದೆ, ಸಂಬಂಧಿತ ದಾಖಲೆಗಳನ್ನು ಹಸ್ತಾಂತರಿಸಿದರು ಎಂದು ಬಸಾಪುರ ವಿವರಿಸಿದರು.
ಹಿಂದೆಯೂ ದೇಣಿಗೆ:
ಶಿವಲಿಂಗಪ್ಪ ಬಸಪ್ಪ ಕಾಗಿನೆಲ್ಲಿಈ ಹಿಂದೆ ಶಾಲೆಗಾಗಿ ಗಣಪತಿ ದೇವಸ್ಥಾನ, ಮಕ್ಕಳ ಕಲಿಕೆಗೆ ಸ್ಮಾಟ್ ಕ್ಲಾಸ್ ಹೀಗೆ ಹಲವು ಕೆಲಸಗಳನ್ನು ಮಾಡಿಸಿಕೊಟ್ಟಿದ್ದಾರೆ. ಸರಕಾರ ಹತ್ತು-ಹಲವಾರು ಯೋಜನೆಗಳನ್ನು ತರುತ್ತದೆ. ಅದರ ಜತೆಗೆ ಶಿಕ್ಷಣ ಪ್ರೇಮಿಗಳು ಕೈಜೋಡಿಸಿದರೆ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳು ಹೆಚ್ಚಿನ ಮಟ್ಟದಲ್ಲಿಬೆಳೆಯುವುದಕ್ಕೆ ಸಾಧ್ಯವಾಗುತ್ತದೆ ಎಂಬ ಅಭಿಮತ ಕಾರ್ಯಕ್ರಮದಲ್ಲಿವ್ಯಕ್ತವಾಯಿತು.
ಈ ಸಂದರ್ಭದಲ್ಲಿಮುಖ್ಯ ಶಿಕ್ಷಕ ಆರ್ .ಎಸ್ .ಮಲ್ಲೂರ, ಶಿಕ್ಷಕ-ಶಿಕ್ಷಕಿಯರು ಇದ್ದರು.
ಫೋಟೋ ಶೀರ್ಷಿಕೆ:ಜೂ.23.ರಟ್ಟೀಹಳ್ಳಿ.1-
ರಟ್ಟೀಹಳ್ಳಿ ತಾಲೂಕಿನ ಗುಡ್ಡದಮಾದಾಪುರ ಸರಕಾರಿ ಶಾಲೆಯಲ್ಲಿಧಾನಿಗಳಿಂದ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ , ಕಂಪಾಸ್ , ಪೆನ್ಸಿಲ್ ನೀಡಲಾಯಿತು.