ಇ-ಎಲೆಕ್ಷನ್ ಮ್ಯಾಪಿಂಗ್ ನಲ್ಲಿಶೇ.91 ಪ್ರಗತಿ

Contributed byhai.dhl562110@gmail.com|Vijaya Karnataka
91 progress in e election mapping voter information is being accurately refined
ಇ-ಎಲೆಕ್ಷನ್ ಮ್ಯಾಪಿಂಗ್ ನಲ್ಲಿಶೇ.91 ಪ್ರಗತಿ

ಮತದಾರರಿಗೆ ಸುಲಭವಾಗಿ ಮತಗಟ್ಟೆ ಗುರುತಿಸಲು ಅನುಕೂಲ | ಶೇ.100 ಗುರಿ ಸಾಧನೆಗೆ ಶ್ರಮ
ಹೈದರ್ ಸಾಬ್ ಕುಂದಾಣ

ಮುಂಬರುವ ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಇ-ಎಲೆಕ್ಷನ್ ಮ್ಯಾಪಿಂಗ್ ಸಮೀಕ್ಷೆ ಕಾರ್ಯವು ವೇಗವಾಗಿ ನಡೆಯುತ್ತಿದ್ದು, ಶೇ.91ರಷ್ಟು ಪ್ರಗತಿ ಸಾಧಿಸಿದೆ.

ಮತದಾರರ ವಿಳಾಸ, ಮತಗಟ್ಟೆಗಳ ಭೌಗೋಳಿಕ ವ್ಯಾಪ್ತಿಯನ್ನು ಮತದಾರರ ಮಾಹಿತಿ ಡಿಜಿಟಲ್ ತಂತ್ರಜ್ಞಾನದ ಮೂಲಕ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ ಒ)ಗಳು ಮನೆಮನೆಗೆ ತೆರಳಿ, ವರದಿಯನ್ನು ನಿಖರಗೊಳಿಸುತ್ತಿದ್ದಾರೆ. ಉಳಿದ ಶೇ.9ರಷ್ಟು ಸಮೀಕ್ಷೆಯನ್ನು ಶೀಘ್ರ ಪೂರ್ಣಗೊಳಿಸಿ, ಶೇ.100ರಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿಶ್ರಮಿಸಲಾಗುತ್ತಿದೆ.

ಜಿಲ್ಲೆಯ ಒಟ್ಟು 9,12,913 ಮತದಾರರ ಪೈಕಿ ಈಗಾಗಲೇ 3,48,180 ಮತದಾರರ ವಿವರಗಳನ್ನು ಮನೆಮನೆ ಭೇಟಿ ಮೂಲಕ ಮ್ಯಾಪಿಂಗ್ ಮಾಡಲಾಗಿದೆ. ಮತದಾರರ ಮಾಹಿತಿಯನ್ನು ನಿಖರಗೊಳಿಸುವುದು, ತಪ್ಪು ದಾಖಲೆಗಳನ್ನು ಸರಿಪಡಿಸುವುದು ಹಾಗೂ ಸಮಗ್ರ ಡಿಜಿಟಲ್ ಡೇಟಾಬೇಸ್ ಸಿದ್ಧಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿಪ್ರತ್ಯೇಕವಾಗಿ ಸಮೀಕ್ಷೆ ನಡೆಯುತ್ತಿದ್ದು, ಕೆಲ ತಾಲೂಕುಗಳಲ್ಲಿಶೇ.70ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಲಾಗಿದೆ. ಉಳಿದ ಭಾಗಗಳಲ್ಲಿಮ್ಯಾಪಿಂಗ್ ಕಾರ್ಯ ಚುರುಕುಗೊಳಿಸಲು ಸಂಬಂಧಪಟ್ಟ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

ಬಾಕ್ಸ್

ಸಮೀಕ್ಷೆಯ ಪ್ರಮುಖ ಅಂಕಿ ಅಂಶಗಳು

ಜಿಲ್ಲೆಯಲ್ಲಿಒಟ್ಟು ಮತದಾರರು(2025): 9,12,913

ಕಟ್ ಆಫ್ ವಯಸ್ಸು (39) ಇರುವ ಮತದಾರರು: 5,18,103

ಮ್ಯಾಪ್ ಮಾಡಿದ ಒಟ್ಟು ಮತದಾರರು: 3,48,180

ಒಟ್ಟಾರೆ ಮ್ಯಾಪಿಂಗ್ ಪ್ರಗತಿ: ಶೇ. 91.82

ಮ್ಯಾಪ್ ಮಾಡಿದ ಮತದಾರರು : 74,685 (ಶೇ.8.18)

ಬಾಕ್ಸ್

ತಾಲೂಕುವಾರು ಪ್ರಗತಿ (ಶೇಕಡವಾರು)

ಹೊಸಕೋಟೆ(ನಗರ): ಶೇ. 47.39

ಹೊಸಕೋಟೆ (ಗ್ರಾಮೀಣ): ಶೇ. 69.96

ದೇವನಹಳ್ಳಿ: ಶೇ. 71.15

ದೊಡ್ಡಬಳ್ಳಾಪುರ: ಶೇ. 67.99

ನೆಲಮಂಗಲ: ಶೇ. 65.16

ಕೋಟ್

ಇ-ಎಲೆಕ್ಷನ್ ಮ್ಯಾಪಿಂಗ್ ಕಾರ್ಯವು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಮತದಾರರ ಮಾಹಿತಿಯ ನಿಖರತೆ ಹೆಚ್ಚಿಸುವುದು ನಮ್ಮ ಮುಖ್ಯ ಉದ್ದೇಶ. ಉಳಿದ ಭಾಗದ ಕಾರ್ಯವನ್ನು ಕೂಡಾ ಶೀಘ್ರವಾಗಿ ಪೂರ್ಣಗೊಳಿಸಲು ಎಲ್ಲತಾಲೂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

-ಸೈಯಿದ ಆಯಿಷ | ಅಪರ ಜಿಲ್ಲಾಧಿಕಾರಿ

ಚಿತ್ರ: 22 ಕುಂದಾಣ 9

ಸಾಂದರ್ಭಿಕ ಎಐ ಚಿತ್ರ ಬಳಸಿಕೊಳ್ಳಿ

ಚಿತ್ರ: 22 ಕುಂದಾಣ 10

ಇದುವರೆಗೆ ಮ್ಯಾಪಿಂಗ್ ಆಗಿರುವ ಸಂಪೂರ್ಣ ವರದಿ.