ಮಹಿಳಾ ವಕೀಲರು, ನೋಟರಿಗಳ ಕಟ್ಟಡಕ್ಕೆಭೂಮಿಪೂಜೆ

Contributed byjayadev435@gmail.com|Vijaya Karnataka
groundbreaking ceremony for womens lawyers and notaries building
ಮಹಿಳಾ ವಕೀಲರು , ನೋಟರಿಗಳ ಕಟ್ಟಡಕ್ಕೆಭೂಮಿಪೂಜೆ

*ನಿರ್ಮಾಣಕ್ಕೆ ಸಂಸದ ರ ನಿಧಿಯಿಂದ ಅನುದಾನ: ಸಂಸದ ಯದುವೀರ್
ವಿಕ ಸುದ್ದಿಲೋಕ ಮೈಸೂರು

ನಗರದ ನ್ಯಾಯಾಲಯ ಕಚೇರಿ ಆವರಣದಲ್ಲಿಮಹಿಳಾ ವಕೀಲರು ಹಾಗೂ ನೋಟರಿಗಳ ಕಟ್ಟಡ ನಿರ್ಮಾಣಕ್ಕೆಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೂಮಿಪೂಜೆ ನೆರವೇರಿಸಿದರು.

ನಂತರ ವೇದಿಕೆ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘‘ನಮ್ಮ ಹಾಗೂ ನಿಮ್ಮ ಪೂರ್ವಜರು ನ್ಯಾಯಾಲಯದ ಆವರಣದಲ್ಲಿಸಭಾಂಗಣ ನಿರ್ಮಾಣಕ್ಕೆ ಶ್ರಮ ಹಾಕಿದ್ದಾರೆ. ಈಗ ಮಹಿಳಾ ವಕೀಲರಿಗಾಗಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆ. ಇದಕ್ಕೆ ಸಂಸದರ ನಿಧಿಯಿಂದ ಅನುದಾನ ನೀಡಲಾಗುವುದು’’ ಎಂದರು.

‘‘ಸ್ವಾತಂತ್ರ್ಯ ಪೂರ್ವದಲ್ಲಿಹಾಗೂ ನಂತರದಲ್ಲಿಯೂ ಅರಮನೆ ವಿಚಾರದಲ್ಲಿವಕೀಲರ ಸಂಬಂಧ ಇದೆ. ನ್ಯಾಯಾಂಗದಿಂದ ಅರಮನೆ ವಿಚಾರವಾಗಿ ಒಳ್ಳೆಯ ಅಭಿಪ್ರಾಯ ಇದೆ. ನ್ಯಾಯಾಂಗಕ್ಕೆ ನಾವು ಚಿರಋುಣಿಯಾಗಿರುತ್ತೇವೆ. ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ನ್ಯಾಯಾಂಗ ತೀರ್ಪುಗಳನ್ನು ಗೌರವಿಸುತ್ತೇವೆ’’ ಎಂದರು.

‘‘ದೇಶದಲ್ಲಿನ್ಯಾಯಾಂಗ ಬಲಿಷ್ಠ ಸ್ತಂಭವಾಗಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನ್ಯಾಯಾಲಯ ತೀರ್ಪುಗಳು ಜನರ ಪರವಾಗಿಯೇ ಇವೆ. ನಮ್ಮ ದೇಶದ ಕಾನೂನು ಶಕ್ತಿಯುತವಾಗಿದೆ’’ ಎಂದು ಹೇಳಿದರು.

‘‘ಪ್ರಧಾನ ಮೋದಿ ಅವರ ನೇತೃತ್ವದಲ್ಲಿಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೈಲ್ವೆ, ರಸ್ತೆಗಳು, ವಿಮಾನ ನಿಲ್ದಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ತುಂಬ ವೇಗವಾಗಿ ನಡೆಯುತ್ತಿವೆ. ಮೂಲ ಸೌಕರ್ಯ ಜತೆಗೆ ಭಾರತವನ್ನು ನಿರ್ಮಿಸಲು ಹಾಗೂ ಆರ್ಥಿಕತೆ ಬೆಳೆವಣಿಗೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ’’ ಎಂದು ತಿಳಿಸಿದರು.

‘‘ಪ್ರಾಚೀನ ಇತಿಹಾಸ ಇರುವ ದೇಶದಲ್ಲಿಆಧುನಿಕ ಸೌಲಭ್ಯಗಳ ಅಗತ್ಯ ಕೂಡ ಇದೆ. ದೇಶದ ಅಭಿವೃದ್ಧಿಗೆæ ಕೊಡುಗೆ ನೀಡುವಂತಹ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕು. ದೇಶ ಅಭಿವೃದ್ದಿಯಾದರೆ, ನಾವು ಸಹ ಅಭಿವೃದ್ಧಿಯತ್ತ ಸಾಗುತ್ತೇವೆ’’ ಎಂದು ಹೇಳಿದರು.

ಪ್ರಧಾನ ಜಿಲ್ಲಾನ್ಯಾಯಾಧೀಶರಾದ ಉಷಾರಾಣಿ ಮಾತನಾಡಿದರು. ಮಾಜಿ ಶಾಸಕ ಎಲ್ .ನಾಗೇಂದ್ರ, ಹಿರಿಯ ವಕೀಲ ಬಿ.ಆರ್ .ಚಂದ್ರಮೌಳಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್ .ಲೋಕೇಶ್ , ಉಪಾಧ್ಯಕ್ಷ ಎಂ.ವಿ.ಚಂದ್ರಶೇಖರ್ , ಕಾರ್ಯದರ್ಶಿ ಎ.ಜಿ.ಸುಧೀರ್ , ಖಜಾಂಚಿ ಎಚ್ .ಜಿ.ಭರತ್ , ಜಂಟಿ ಕಾರ್ಯದರ್ಶಿ ಕೆ.ಆರ್ .ಚರಣ್ ರಾಜ್ , ಮಹಿಳಾ ಜಂಟಿ ಕಾರ್ಯದರ್ಶಿ ಬಿ.ವಿ.ವಿನೋದ , ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು ಇದ್ದರು.

ನೋಟರಿಗಳ ಆಯ್ಕೆ ಕಾರಣಾಂತರಗಳಿಂದ ಸ್ಥಗಿತವಾಗಿದೆ, ಕೆಲಸಗಳು ಸುಲಭವಾಗಿ ಆಗಲು ನೋಟರಿಗಳ ಆಯ್ಕೆ ಮಾಡಬೇಕಿದೆ. ನ್ಯಾಯಾಲಯದ ಆವರಣದಲ್ಲಿರುವ ಲೈಬ್ರರಿಗೆ ಅನುದಾನ ಒದಗಿಸಬೇಕು.

-ಎಸ್ .ಲೋಕೇಶ್ ,ಅಧ್ಯಕ್ಷ, ಮೈಸೂರು ವಕೀಲರ ಸಂಘ,

ಕ್ಯಾಪ್ಷನ್ : ಮೈಸೂರಿನ ನ್ಯಾಯಾಲಯದ ಆವರಣದಲ್ಲಿಮಹಿಳಾ ವಕೀಲರು ಹಾಗೂ ನೋಟರಿಗಳ ಕಟ್ಟಡ ನಿರ್ಮಾಣಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭೂಮಿಪೂಜೆ ನೆರವೇರಿಸಿದರು.