ಚಿಕ್ಕೋಡಿ: ಪಟ್ಟಣದ ಕೆಎಲ್ ಇ ಆಯುರ್ವೇದ ಆಸ್ಪತ್ರೆಯಲ್ಲಿಜೂ. 25ರಂದು ಮಧ್ಯಾಹ್ನ 1ರಿಂದ ಸಂಜೆ 4ರವರೆಗೆ ಚರ್ಮ ರೋಗಗಳ ಉಚಿತ ತಪಾಸಣೆ ಶಿಬಿರ ಜರುಗಲಿದೆ. ತೊನ್ನು, ಬಿಳಿ ಮಚ್ಚೆ, ಇಸಬು, ಕಜ್ಜಿ, ತುರಿಕೆ, ತುರಿಗಜ್ಜಿ, ಗಜಕರ್ಣ, ಚರ್ಮದ ಅಲರ್ಜಿ ಹಾಗೂ ಇತರ ಚರ್ಮ ರೋಗಗಳ ತಪಾಸಣೆ ಮಾಡಿ ಆಯುರ್ವೇದ ಚಿಕಿತ್ಸೆಗಳ ಸಲಹೆಯನ್ನು ತಜ್ಞ ವೈದ್ಯರು ನೀಡಲಿದ್ದಾರೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೆಎಲ್ ಇ ಚಿಕ್ಕೋಡಿ ವೈದ್ಯಕೀಯ ನಿರ್ದೇಶಕ ಡಾ. ಕಿರಣ ಮುತ್ನಾಳಿ ಪ್ರಕಟಣೆಯಲ್ಲಿತಿಳಿಸಿದ್ದಾರೆ. ಮಾಹಿತಿಗೆ ಮೊ: 08338275100 ಸಂಪರ್ಕಿಸಬಹುದು.