ನಾನಾ ಸಮಾಜಗಳ ಮುಖಂಡರ ಶಾಂತಿ ಸಭೆಯಲ್ಲಿ ಡಿವೈಎಸ್ಪಿ ಸಂತೋಷ ಚೌವ್ಹಾಣ್ ಹೇಳಿಕೆ (ಕಿಕ್ಕರ್ )
‘ಮೊಹರಂ ವೇಳೆ ಶಾಂತಿ ಕದಡಿದರೆ ಕ್ರಮ’ವಿಕ ಸುದ್ದಿಲೋಕ ಹರಪನಹಳ್ಳಿ
‘‘ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಹೆಸರಾಗಿರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಬೇಕು.ಹಬ್ಬದ ವೇಳೆ ಶಾಂತಿ ಕದಡಿದರೆ ಕ್ರಮ ಅನಿವಾರ್ಯ,’’ ಎಂದು ಡಿವೈಎಸ್ಪಿ ಸಂತೋಷ ಚೌವ್ಹಾಣ್ ಹೇಳಿದರು.
ನಗರದ ಪೊಲೀಸ್ ಠಾಣೆ ಅವರಣದಲ್ಲಿಸಂಘಟಿಸಲಾಗಿದ್ದ ಮೊಹರಂ ಹಬ್ಬದ ಆಚರಣೆ ಕುರಿತು ನಾನಾ ಸಮಾಜದ ಮುಖಂಡರ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಲಾಟೆಯಾದರೆ ಗಮನಕ್ಕೆ ತನ್ನಿ:
‘‘ಕತ್ತಲರಾತ್ರಿ ಹಾಗೂ ದೇವರು ಹೊಳೆಗೆ ಹೋಗುವ ಸಂದರ್ಭದಲ್ಲಿಶಾಂತಿ ಕಾಪಾಡಬೇಕು. ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಮೊಹರಂ ಆಚರಣೆ ಸಂದರ್ಭದಲ್ಲಿಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಎಲ್ಲರ ಕರ್ತವ್ಯ. ಯಾವುದೇ ಸಣ್ಣಪುಟ್ಟ ಘಟನೆ ನಡೆದರೂ ಇಲಾಖೆ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
‘’ಸಾಮಾಜಿಕ ಜಾಲತಾಣಗಳಲ್ಲಿಧರ್ಮ ಮತ್ತು ಜಾತಿ ಹೆಸರಿನಲ್ಲಿನಿಂದನೆ ಪ್ರಕರಣಗಳು ನಡೆದರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಮೊಹರಂ ವೇಳೆ ಕಿಡಿಗೇಡಿಗಳು ಅನಾವಶ್ಯಕ ಗಲಾಟೆ ಮಾಡಿದರೆ ಶಿಕ್ಷೆ ವಿಧಿಸಲಾಗುವುದು.ಏನೇ ಗಲಾಟೆ ನಡೆದರೂ ಸರಿಪಡಿಸುವ ಕೆಲಸ ಮಾಡುತ್ತೇವೆ. ಮುನ್ನೆಚ್ಚರಿಕೆ ಕ್ರಮವಾಗಿ ಹಬ್ಬ ಅಚರಣೆ ಮಾಡುವ ಸ್ಥಳಗಳಲ್ಲಿಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಗಲಾಟೆ, ಕೋಮು ಸೌಹಾರ್ದಕ್ಕೆ ಧಕ್ಕೆ ತಂದರೆ ಕ್ರಮ ಕೈಗೊಳ್ಳಲಾಗುವುದು,’’ ಎಂದು ಎಚ್ಚರಿಕೆ ನೀಡಿದರು.
ಹೂವಿನಹಡಗಲಿ ಸಿಪಿಐ ಮಲ್ಲಪ್ಪ ಎಸ್ .ಹೂಗಾರ್ ಮಾತನಾಡಿ, ‘‘ಮೊಹರಂ ಹಿಂದೂ-ಮುಸ್ಲಿಂ ಭಾವೈಕ್ಯ ಸಾರುವ ಹಬ್ಬವಾಗಿದೆ. ಎಲ್ಲರೂ ಕೂಡಿ ಸಹೋದರತ್ವದಿಂದ ಪ್ರೀತಿ, ವಿಶ್ವಾಸ ವೈಭವದಿಂದ ಆಚರಣೆ ಮಾಡಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡದೆ, ಶಾಂತಿ, ಸಹಕಾರದಿಂದ ಹಬ್ಬ ಯಶಸ್ವಿಗೊಳಿಸಬೇಕು,’’ ಎಂದು ಕರೆ ನೀಡಿದರು.
ಹೆಚ್ಚು ಜನಸಂಖ್ಯೆ ಸೇರಿಸೋಣ:
ಪುರಸಭೆ ಮಾಜಿ ಅಧ್ಯಕ್ಷ ಮೆಹಬೂಬ್ ಸಾಹೇಬ್ ಮಾತನಾಡಿ,‘‘ ಹಿಂದೆ ಸಾವಿರಾರು ಜನರು ಸೇರಿ ಹಬ್ಬ ಅಚರಣೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿಹಬ್ಬ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಹಿಂದೂ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿಸೇರಿ ಮೊಹರಂ ಹಬ್ಬ ಆಚರಿಸಬೇಕಿದೆ,’’ ಎಂದರು.
ಹರಪನಹಳ್ಳಿ ಸಿಪಿಐ ಮಹಾಂತೇಶ್ ಜಿ. ಸಜ್ಜನ್ , ಸಿರಾಜ್ ವುದ್ದೀನ್ ಮಾತನಾಡಿದರು.
ಹರಪನಹಳ್ಳಿ ಠಾಣೆ ಪಿಎಸ್ ಐ ಶಂಭುಲಿಂಗ ಸಿ.ಹಿರೇಮಠ, ಎ.ಕಿರಣ್ ಕುಮಾರ್ , ನಾಗರತ್ನಮ್ಮ, ಅಬ್ಬಾಸ್ , ಮಣಿಕಂಠ, ಅಶೋಕ ಬೇವೂರು, ಮೀನಾಕ್ಷಿ, ಪ್ರೋಬೇಷನರಿ ಪಿಎಸ್ ಐ ಮಂಜುನಾಥ, ಸಿಬ್ಬಂದಿ,ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಇದ್ದರು.
22,ಹೆಚ್ .ಆರ್ .ಪಿ.02- ಹರಪನಹಳ್ಳಿ ಪೊಲೀಸ್ ಠಾಣೆ ಅವರಣದಲ್ಲಿನಡೆದ ನಾನಾ ಸಮಾಜದ ಮುಖಂಡರ ಸಮ್ಮುಖದಲ್ಲಿಮೊಹರಂ ಹಬ್ಬದ ಶಾಂತಿ ಸಭೆಯಲ್ಲಿಡಿವೈಎಸ್ಪಿ ಸಂತೋಷ ಚೌವ್ಹಾಣ್ ಮಾತನಾಡಿದರು.