ವಿಕ ಸುದ್ದಿಲೋಕ ಚಿಕ್ಕಮಗಳೂರುವಿದ್ಯಾರ್ಥಿಗಳು ಶಾಲೆ, ಕಾಲೇಜು ಹಂತದಲ್ಲೇ ವಿದ್ಯಾರ್ಥಿ ಪರಿಷತ್ತಿನ ಮಂತ್ರಿಮಂಡಲದಲ್ಲಿಸೇರುವುದರಿಂದ ಕರ್ತವ್ಯ ಮತ್ತು ಜವಾಬ್ದಾರಿಯ ಪ್ರಜ್ಞೆ ಮೂಡುತ್ತದೆ ಎಂದು ಕಳಸಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್ .ಎಂ.ನಾಗರಾಜರಾವ್ ಕಲ್ಕಟ್ಟೆ ಹೇಳಿದರು.
ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿಇತ್ತೀಚೆಗೆ ಹಮ್ಮಿಕೊಂಡಿದ್ದ ಶಾಲಾ ವಿದ್ಯಾರ್ಥಿ ಪರಿಷತ್ ನ ಪದಗ್ರಹಣ ಸಮಾರಂಭದಲ್ಲಿಮಾತನಾಡಿದರು.
ಪ್ರತಿಯೊಬ್ಬರಿಗೂ ಅಂತರ್ಗತವಾದ ನಾಯಕತ್ವದ ಶಕ್ತಿ ಇರುತ್ತದೆ. ಕರ್ತೃತ್ವ ಮತ್ತು ಕ್ರಿಯಾಶಕ್ತಿ ಎರಡೂ ಮೇಳೈಸಿದಾಗ ಸಮಾಜದಲ್ಲಿಸುಧಾರಣೆ ತರಲು ಸಾಧ್ಯ. ಮನೆ, ಶಾಲೆ, ಊರು ಎಲ್ಲವೂ ನಮ್ಮನ್ನು ಪೆæäೕಷಿಸುತ್ತಿರುವಾಗ ಅವುಗಳಿಗೆ ಸಕಾರಾತ್ಮಕ ಪ್ರತಿಸ್ಪಂದನೆ ನೀಡಿ ಅಭಿವೃದ್ಧಿಗೆ ಸಹಕರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
‘ಮೊದಲಾಗುವುದು ಸಮಾಜ ನೀ ಮೊದಲಾದರೆ, ಬದಲಾಗುವುದು ಸಮಾಜ ನೀ ಬದಲಾದರೆ’ ಎಂಬುದನ್ನು ವಿದ್ಯಾರ್ಥಿ ಹಂತದಲ್ಲೇ ಕಲಿತಾಗ ಶೈಕ್ಷಣಿಕ ಮತ್ತು ಇತರ ರಂಗದಲ್ಲಿನಾವು ಪ್ರಗತಿ ಹೊಂದಲು ಸಾಧ್ಯ. ವ್ಯಕ್ತಿತ್ವದ ಬೆಳವಣಿಗೆಗೆ ಎಲ್ಲೆಡೆಯೂ ಸಕಾರಾತ್ಮಕವಾದ ಕೊಡುಗೆಗಳು ದೊರೆಯುತ್ತವೆ. ಆದರೆ, ಸ್ವೀಕರಿಸುವ ಮನೋಭಾವ ನಮ್ಮಲ್ಲಿರಬೇಕು. ಉನ್ನತ ಗುರಿ, ಅಚಲ ನಂಬಿಕೆ ಮತ್ತು ಆತ್ಮವಿಶ್ವಾಸ ಇವು ನದಿಯೊಂದು ಹೇಗೆ ವಿಶಾಲವಾದ ಸಮುದ್ರವನ್ನು ಸೇರುತ್ತದೆಯೋ, ಹಾಗೆಯೇ ನಮ್ಮನ್ನು ಬಹುಮುಖಿ ವಿಶಾಲ ಸಮಾಜಕ್ಕೆ ಸೇರಿಸುತ್ತವೆ ಎಂದರು.
ವಿದ್ಯಾಸಂಸ್ಥೆಯ ಅಧ್ಯಕ್ಷೆ ಎಸ್ .ಶಾಂತಕುಮಾರಿ ಮಾತನಾಡಿ, ಮಂತ್ರಿಮಂಡಲಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ವ್ಯವಸ್ಥೆಯನ್ನು ಮುನ್ನಡೆಸುವ ಕುರಿತಾದ ಪರೀಕ್ಷೆಗಳು ಪ್ರಾರಂಭವಾಗಲಿದೆ. ತಾವು ವಹಿಸಿಕೊಂಡ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದರ ಜತೆಗೆ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗೆ ಸಹಕಾರ ನೀಡಬೇಕು. ಈಗಾಗಲೇ ಸಂಸ್ಥೆಯ ಸಿಬ್ಬಂದಿ ನಮ್ಮ ಸಂಸ್ಥೆಯ ಪರಿಸರವನ್ನು ಶುಚಿತ್ವವಾಗಿಡುವಲ್ಲಿಯಶಸ್ವಿಯಾಗಿದ್ದು, ಈ ಪರಿಸ್ಥಿತಿ ಯಥಾವತ್ತಾಗಿ ಮುಂದುವರಿಯಬೇಕು ಎಂದು ಸೂಚಿಸಿದರು.
ಸಂಸ್ಥೆಯ ಕಾರ್ಯದರ್ಶಿ ಎಂ.ಪಿ.ಉಡುಪ, ಉಪ ಕಾರ್ಯದರ್ಶಿ ಡಾ. ಡಿ.ಪಿ.ಮೋಹನ್ , ಪ್ರಾಂಶುಪಾಲರಾದ ಎಸ್ .ಆರ್ .ಹೇಮ, ಮುಖ್ಯಶಿಕ್ಷಕಿ ಕುಮುದಾ, ಆಡಳಿತ ಮಂಡಳಿ ಸದಸ್ಯ ಎಂ.ಎನ್ .ರಂಗನಾಥನ್ , ಹರಿಣಿ, ಡಿ.ಎನ್ .ಲಾವಣ್ಯ, ಸ್ಮಿತ, ತನು ಹಾಗೂ ಇತರರಿದ್ದರು.
* ಪರಿಷತ್ ವಿದ್ಯಾರ್ಥಿಗಳು:
ಎನ್ .ಯುಕ್ತ (ಮುಖ್ಯ ಚುನಾವಣಾ ಆಯುಕ್ತೆ), ಬಿ.ಜಿ.ಗುಣಶ್ರೀ, ಪೃಥ್ವಿರಾಜ್ (ಚುನಾವಣಾ ಆಯುಕ್ತರು), ಆರ್ .ಪ್ರಹಂತ್ (ಅಧ್ಯಕ್ಷ), ಆರ್ .ವರ್ಷಾ (ಪ್ರಧಾನ ಮಂತ್ರಿ), ಲಿಥಿಗೌಡ (ಸಾಂಸ್ಕೃತಿಕ ಮಂತ್ರಿ), ಮದನ್ ( ಶಿಕ್ಷಣ ಮಂತ್ರಿ), ಕೆ.ಯಶಸ್ (ಶಿಸ್ತು ಖಾತೆ ಸಚಿವ), ಕೆ.ವಿ.ಮೋಹಿತ್ (ಕ್ರೀಡಾ ಸಚಿವ), ಕಾಜಲ್ (ಸಾಂಸ್ಕೃತಿಕ ಸಚಿವೆ), ಉಮಾ ಶಂಕರ್ (ಪರಿಸರ ಖಾತೆ ಸಚಿವ), ಅಭಯ್ ಜಿ.ಎಂ.(ಆರೋಗ್ಯ ಸಚಿವ).
===
21ರುದ್ರಯ್ಯ-ಪಿ1 :
ಚಿಕ್ಕಮಗಳೂರಿನ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿನಡೆದ ವಿದ್ಯಾರ್ಥಿ ಪರಿಷತ್ ಪದಗ್ರಹಣ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.