ಚಳ್ಳಕೆರೆ : ಮತದಾರ ಪಟ್ಟಿ ಪರಿಷ್ಕರಣೆ ಅಂಗವಾಗಿ ಚಳ್ಳಕೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿನಡೆಸುತ್ತಿರುವ ಎಸ್ ಐಆರ್ ಮ್ಯಾಪಿಂಗ್ ಶೇ.98.33ರಷ್ಟು ಆಗಿದ್ದು, ಜೂನ್ 30ರಿಂದ ಜು.29ರವರೆಗೆ ಮನೆ ಮನೆ ಭೇಟಿ ಸಂದರ್ಭದಲ್ಲಿಉಳಿದ ಮ್ಯಾಪಿಂಗ್ ಪೂರ್ಣಗೊಳಿಸಿ ಎಸ್ ಐಆರ್ ಪ್ರಕ್ರಿಯೆ ನಡೆಸಲಾಗುವುದು ಎಂದು ತಹಸೀಲ್ದಾರ್ ರೇಹಾನ್ ಪಾಷ ಹೇಳಿದರು.ನಗರದ ತಾಲೂಕು ಕಚೇರಿಯಲ್ಲಿಮಂಗಳವಾರ ಮಾಹಿತಿ ನೀಡಿದ ಅವರು, ಚಳ್ಳಕೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿಬರುವ 2,25,546 ಮತದಾರರ ಪೈಕಿ ಮೇ 27, 2026ರವರೆಗೆ 2,21,774 ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಳಿಸಿದ್ದು, ಬಾಕಿ ಉಳಿದದ್ದನ್ನು ಜೂ.30ರ ಬಳಿಕ ನಡೆಸಿ, ಎಸ್ ಐಆರ್ ನಡೆಸಲಾಗುವುದು ಎಂದರು.
ಜೂ.30ರಿಂದ ಆಯಾ ಮತಗಟ್ಟೆಗಳ ಬಿಎಲ್ ಒಗಳು ಜು.29ರವರೆಗೆ ಮನೆ ಮನೆಗೆ ಭೇಟಿ ನೀಡಿ ಮ್ಯಾಪಿಂಗ್ ಮಾಡುವ ಜತೆಗೆ ಮತದಾರರಿಗೆ ಅರ್ಜಿಗಳನ್ನು ನೀಡಿ, ಭರ್ತಿ ಮಾಡಿಸಿಕೊಂಡು ಚುನಾವಣೆಯ ಶಾಖೆಗೆ ತಲುಪಿಸುವರು. ಇನ್ನು ಮತದಾರರು ಊರಿಗೆ ಹೋಗಿದ್ದಲ್ಲಿ, ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರ ಹೋಗಿರುವ ಕಾರಣದಿಂದಾಗಿ ಬಿಎಲ್ ಒಗಳಿಗ ಮೂರು ಬಾರಿ ಭೇಟಿ ನೀಡಿ ಎಸ್ ಐಆರ್ ಪ್ರಕ್ರಿಯೆ ನಡೆಸುವರು ಮತ್ತು ಚಳ್ಳಕೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 26 ಪಂಚಾಯಿತಿಗಳಲ್ಲಿಮತ್ತು ನಗರ ವ್ಯಾಪ್ತಿಯಲ್ಲಿಸಹಾಯವಾಣಿ ತೆರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಎಸ್ ಐಆರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಆ.5ರಂದು ಮತದಾರರ ಕರಡು ಪಟ್ಟಿ ಪ್ರಕಟಿಸಲಾಗುತ್ತದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸುವರು ಆ.5ರಿಂದ ಸೆ.4ರವರೆಗೆ ಸಲ್ಲಿಸಬಹುದು. ಆ.5ರಿಂದ ಅ.3ರವರೆಗೆ ನೋಟಿಸ್ , ವಿಲೇವಾರಿ ಮಾಡಲಾಗುತ್ತದೆ. ಅ.7ರಂದು ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದರು.