ವಿಕ ಸುದ್ದಿಲೋಕ ಕಾಸರಗೋಡುಇಲ್ಲಿನ ನಗರ ವ್ಯಾಪ್ತಿಯ ಹಲವೆಡೆಗಳಲ್ಲಿ ಕಾಲ್ನಡೆ ಪ್ರಯಣಿಕರಿಗೆ ರಸ್ತೆ ಹಾದು ಹೋಗಲು ಝೀಬ್ರಾ ಲೈನ್ ಗಳಿಲ್ಲ. ಜೀವ ಕೈಯಲ್ಲಿಹಿಡಿದುಕೊಂಡು ರಸೆ ್ತಯನ್ನು ಹಾದುಹೋಗಬೇಕಾದ ಅನಿವಾರ ್ಯತೆ ಸೃಷ್ಟಿಯಾಗಿದೆ. ಹಿಂದೆ ಪ್ರಧಾನ ಸ್ಥಳಗಳಲ್ಲಿಝೀಬ್ರಾ ಲೈನ್ ಗಳಿದ್ದವು. ಆದರೆ ಇದೀಗ ಝೀಬ್ರಾ ಲೈನ್ ಗಳು ಅಳಿಸಿ ಹೋಗಿರುವುದರಿಂದ ನೂತನ ಝೀಬ್ರಾ ಲೈನ್ ಎಳೆಯದೇ ಇರುವುದು ಸಮಸ್ಯೆಯಾಗಿದೆ.
ನಗರದ ಪ್ರಧಾನ ರಸ್ತೆಯಾದ ಎಂ.ಜಿ. ರಸ್ತೆಯಲ್ಲಿ, ಕಾಸರಗೋಡು-ಕಾಞಂಗಾಡು ರಾಜ್ಯ ಹೆದ್ದಾರಿಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ರಸ್ತೆಗಳು, ನಗರಸಭೆಯ ಅಧೀನದಲ್ಲಿರುವ ರಸ್ತೆಗಳು ಇವುಗಳಲ್ಲಿಸೇರಿವೆ. ಜಿಲ್ಲಾರಸ್ತೆ ಸುರಕ್ಷಾ ಸಮಿತಿ, ಸ್ಥಳೀಯಾಡಳಿತ ಮಟ್ಟದಲ್ಲಿರುವ ಟ್ರಾಫಿಕ್ ನಿಯಾಮಕ ಸಮಿತಿ ಇದ್ದರೂ, ಝೀಬ್ರಾ ಲೈನ್ ಎಳೆಯಲು ಕ್ರಮ ಕೈಗೊಳ್ಳುತ್ತಿಲ್ಲ.
ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲಿರುವ ಯೋಜನೆಗಳನ್ನು ಜಾರಿಗೊಳಿಸುವುದು, ಅಪಘಾತಗಳು ನಿರಂತರವಾಗಿ ನಡೆಯುತ್ತಿರುವ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಪರಿಹರಿಸಲು ಲೋಕೋಪಯೋಗಿ ಇಲಾಖೆಗೆ ನಿರ್ದೇಶನ ನೀಡುವುದು, ನಗರಗಳ ಹಾಗೂ ಪ್ರಧಾನ ಪೇಟೆಗಳ ಅವೈಜ್ಞಾನಿಕ ಪಾರ್ಕಿಂಗ್ ನಿಯಂತ್ರಿಸುವುದು, ಪಾರ್ಕಿಂಗ್ ಕೇಂದ್ರಗಳನ್ನು ನಿಗದಿಪಡಿಸುವುದು, ಏಕ ಮುಖ ಸಂಚಾರ, ಸಿಗ್ನಲ್ ಗಳು, ಸೈನ್ ಬೋರ್ಡ್ ಗಳು, ಝೀಬ್ರಾ ಕ್ರಾಸಿಂಗ್ ಗಳನ್ನು ಅಳವಡಿಸಿ ಸಂಚಾರದಟ್ಟಣೆಯನ್ನು ಪರಿಹರಿಸುವುದು, ಆಟೋರಿಕ್ಷಾ, ಟ್ಯಾಕ್ಸಿ, ಬಸ್ ಗಳಿಗಿರುವ ನಿಲ್ದಾಣಗಳನ್ನು ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ವ್ಯವಸ್ಥೆಗೊಳಿಸುವುದು, ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ಸಾರಿಗೆ ನಿಯಮಗಳ ಕುರಿತು ತಿಳಿವಳಿಕಾ ಕಾರ್ಯಕ್ರಮಗಳನ್ನು ನಡೆಸುವುದು ಸಮಿತಿಯ ಹೊಣೆಗಾರಿಕೆಯಾಗಿದೆ.
ಕೆಲವೆಡೆಗಳಲ್ಲಿ ಫುಟ್ ಪಾತ್ ಗಳಲ್ಲಿ ಸಾಮಗ್ರಿಗಳನ್ನು ಇರಿಸಿ ಮಾರಾಟ ನಡೆಯುತ್ತಿದೆ. ಹಳೆ ಬಸ್ ನಿಲ್ದಾಣ ಸಮೀಪ ಈ ರೀತಿ ಫುಟ್ ಪಾತ್ ಗಳಲ್ಲಿಬೀದಿ ವ್ಯಾಪಾರ ಕಂಡುಬರುತ್ತಿದೆ. ಕರಂದಕ್ಕಾಡು-ತಾಳಿಪಡ್ಪು ಮೈದಾನದ ಸಮೀಪ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯ ಫುಟ್ ಪಾತ್ ನಲ್ಲಿವಿದ್ಯುತ್ ಕಂಬದ ಸ್ಟೇ ವಯರ್ ಅಳವಡಿಸಲಾಗಿದೆ. ಗಮನಿಸಿಕೊಂಡು ನಡೆಯದಿದ್ದರೆ ಎಡವಿ ಬೀಳುವುದು ಖಚಿತವಾಗಿದೆ.
ಕರಂದಕ್ಕಾಡು ಅಶ್ವಿನಿ ನಗರದಲ್ಲಿಸರ್ವಿಸ್ ರಸ್ತೆಯ ಫುಟ್ ಪಾತ್ ಗೆ ಪ್ರವೇಶಿಸಿ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಲಾಗಿದೆ. ನುಳ್ಳಿಪ್ಪಾಡಿಯ ಸಮೀಪ ಸರ್ವಿಸ್ ರಸ್ತೆಗೆ ಅಗಲ ಕಡಿಮೆ ಆಗಿರುವುದರಿಂದ ಫುಟ್ ಪಾತ್ ಹಾಗೂ ರಸ್ತೆ ಸಮಾನವಾಗಿದೆ. ಫುಟ್ ಪಾತ್ ರಸ್ತೆಗಿಂತ ಎತ್ತರವಾಗಿಲ್ಲ. ಇದರಿಂದ ವಾಹನಗಳು ಹೆಚ್ಚಾಗಿ ಫುಟ್ ಪಾತ್ ಗೆ ಪ್ರವೇಶಿಸುತ್ತವೆ.ಫುಟ್ ಪಾತ್ ಹಾಗೂ ರಸ್ತೆಗೆ ಪರಸ್ಪರ ಎತ್ತರ ವ್ಯತ್ಯಾಸ ಇಲ್ಲದೇ ಇರುವುದು ಫುಟ್ ಪಾತ್ ಗಳಿಗೆ ಪ್ರವೇಶಿಸಿ ವಾಹನಗಳು ಪಾರ್ಕ್ ಮಾಡಲು ಕಾರಣವಾಗುತ್ತಿದೆ.
...............
ಚಿತ್ರ: 22ಕೆಎಸ್ ಎಲ್ ಫುಟ್ ಪಾತ್ -ಕಾಸರಗೋಡು ಹಳೆ ಬಸ್ ನಿಲ್ದಾಣ ಸಮೀಪ ಫುಟ್ ಪಾತ್ ನಲ್ಲಿ ಸಾಮಗ್ರಿಗಳನ್ನಿರಿಸಿರುವುದು.
22ಕೆಎಸ್ ಎಲ್ ಫುಟ್ ಪಾತ್ 1-ಕಾಸರಗೋಡು ಕರಂದಕ್ಕಾಡು-ತಾಳಿಪಡ್ಪು ಮೈದಾನದ ಸಮೀಪ ಫುಟ್ ಪಾತ್ ನಲ್ಲಿ ವಿದ್ಯುತ್ ಕಂಬ ಸ್ಥಾಪಿಸಿ ಸ್ಟೇ ವಯರ್ ಅಳವಡಿಸಿರುವುದು.
22ಕೆಎಸ್ ಎಲ್ ಫುಟ್ ಪಾತ್ 2-ಕಿಮ್ಸ್ ಆಸ್ಪತ್ರೆಯ ಸಮೀಪ ಹೊಸದಾಗಿ ನಿರ್ಮಿಸಿದ ಫುಟ್ ಪಾತ್ ನಲ್ಲಿಟ್ರಾನ್ಸ್ ಫಾರ್ಮರ್ ಸ್ಥಾಪಿಸಿರುವುದು.
22ಕೆಎಸ್ ಎಲ್ ಫುಟ್ ಪಾತ್ 3-ರಾಷ್ಟ್ರೀಯ ಹೆದ್ದಾರಿಯ ನುಳ್ಳಿಪ್ಪಾಡಿ ಪೆಟ್ರೋಲ್ ಪಂಪ್ ಸಮೀಪ ಸರ್ವಿಸ್ ರಸ್ತೆಯ ಅಗಲ ಕಿರಿದಾದ ಕಾರಣ ರಸ್ತೆ ಹಾಗೂ ಫುಟ್ ಪಾತ್ ಸಮಾನ ಎತ್ತರದಲ್ಲಿರುವುದು.