ನಶಾ ಮುಕ್ತ ಭಾರತ ಅಭಿಯಾನದಲ್ಲಿ ತಂಬಾಕು ನಿಯಂತ್ರಣ ಕೋಶದ ಭೋಜರಾಜ್ (ಹೇಳಿಕೆ)
‘ನಶೆ ಮುಕ್ತ ಭಾರತಕ್ಕೆ ಸಹಕರಿಸಿ’ವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)
‘‘ಮಾದಕ ವಸ್ತುಗಳ ಚಟ ಯುವಸಮುದಾಯದ ಭವಿಷ್ಯವನ್ನು ಬಲಿತೆಗೆದುಕೊಳ್ಳುತ್ತಿದೆ,’’ ಎಂದು ತಂಬಾಕು ನಿಯಂತ್ರಣ ಕೋಶದ ಭೋಜರಾಜ್ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಕಮಲಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಬಾಲಕರ ಪ್ರೌಢಶಾಲಾ ವಿಭಾಗದಲ್ಲಿಆಯೋಜಿಸಿದ್ದ ವಿಶೇಷ ಅರಿವು ಕಾರ್ಯಕ್ರಮದಲ್ಲಿನಶಾ ಮುಕ್ತ ಭಾರತ ಅಭಿಯಾನದಲ್ಲಿ ವಿಶೇಷ ಉಪನ್ಯಾಸ ನೀಡಿ ಮಂಗಳವಾರ ಮಾತನಾಡಿದರು.
ಮಾನಸಿಕ ಸ್ಥೈರ್ಯ ಕುಂದಿಸಲಿದೆ:
‘‘ಮಾದಕ ವ್ಯಸನವು ಕೇವಲ ದೈಹಿಕ ಆರೋಗ್ಯವನ್ನಷ್ಟೇ ಹಾಳು ಮಾಡುವುದಿಲ್ಲ, ಬದಲಾಗಿ ವ್ಯಕ್ತಿಯ ಮಾನಸಿಕ ಸ್ಥೈರ್ಯವನ್ನು ಕುಂದಿಸಿ, ಸಾಮಾಜಿಕವಾಗಿ ಒಬ್ಬರನ್ನು ಅಧಃಪತನಕ್ಕೆ ಕೊಂಡೊಯ್ಯುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಶಿಕ್ಷಣದ ಕಡೆಗೆ ಗಮನ ಹರಿಸಬೇಕಾದ ನೀವು, ಆಕರ್ಷಣೆಗೆ ಒಳಗಾಗಿ ಮಾದಕ ವಸ್ತುಗಳ ದಾಸರಾಗಬಾರದು. ನಶಾ ಮುಕ್ತ ಸಮಾಜ ನಿರ್ಮಿಸುವಲ್ಲಿವಿದ್ಯಾರ್ಥಿಗಳ ಪಾತ್ರ ಅತಿ ಮುಖ್ಯ,’’ ಎಂದು ಹೇಳಿದರು.
ಕಾನೂನು ಮತ್ತು ಸುರಕ್ಷತೆಯ ಅರಿವು:
ಜಿಲ್ಲಾಮಿಷನ್ ಶಕ್ತಿ ಸಂಯೋಜಕಿ ವಿದ್ಯಾಬಾಯಿ ಅವರು, ಬಾಲ್ಯ ವಿವಾಹದಿಂದ ಉಂಟಾಗುವ ಗಂಭೀರ ಪರಿಣಾಮ ವಿವರಿಸಿ, ಕಾನೂನಿನ ಚೌಕಟ್ಟಿನಲ್ಲಿಬಾಲ್ಯ ವಿವಾಹ ನಿಷೇಧದ ಮಹತ್ವ ತಿಳಿಸಿದರು.
ಅನ್ನಪೂರ್ಣ ಅವರು ಮಕ್ಕಳ ಸುರಕ್ಷತೆಯ ವಿಷಯವಾಗಿ ಪೋಕ್ಸೊ ಕಾಯ್ದೆಯ ಅಗತ್ಯತೆ, ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ಜಾಗೃತಿ ಮೂಡಿಸಿದರು. ಇಂದಿನ ಡಿಜಿಟಲ್ ಯುಗದಲ್ಲಿಮೊಬೈಲ್ ಫೋನ್ ಗಳ ಸದ್ಬಳಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಾಲೆಯ ಮುಖ್ಯಗುರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಇದ್ದರು.
ಫೋಟೊ: ವಿಜೆಎನ್ 23ಜಯಪ್ಪ06: ಹೊಸಪೇಟೆ ತಾಲೂಕಿನ ಕಮಲಾಪುರದ ಶಾಲೆಯಲ್ಲಿಮಂಗಳವಾರ ನಶಾಮುಕ್ತ ಭಾರತ ಅಭಿಯಾನದಲ್ಲಿಜಿಲ್ಲಾಮಿಷನ್ ಶಕ್ತಿ ಸಂಯೋಜಕಿ ವಿದ್ಯಾಬಾಯಿ ಮಾತನಾಡಿದರು.