ಪೋಷಕರಿಗೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಪಟ್ಟಣದ ಜ್ಞಾನಸಾಗರ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿಅಪ್ಪಂದಿರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.ಮಕ್ಕಳೊಂದಿಗೆ ಮಕ್ಕಳಾಗಿ ಪೋಷಕರು ಸಂತಸದಿಂದ ಪಾಲ್ಗೊಂಡು ಅಪ್ಪಂದಿರ ದಿನವನ್ನು ವಿಶೇಷವಾಗಿಸಿದರು. ವಿಜೇತರ ಪೋಷಕರಿಗೆ ಶಾಲೆವತಿಯಿಂದ ಬಹುಮಾನಗಳನ್ನು ನೀಡಲಾಯಿತು. ಎಲ್ಲಪೋಷಕರು ಇದೊಂದು ಅವಿಸ್ಮರಣೀಯ ಕಾರ ್ಯಕ್ರಮ ಎಂದು ಶ್ಲಾಘಿಘಿಸಿದರು.
ಇದೇ ವೇಳೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ.ಕೆ.ನಾಗೇಶ್ ,‘‘ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿ ತಮ್ಮ ತಂದೆಯಿಂದ ದೊರೆತ ಪ್ರೋತ್ಸಾಹ, ಸ್ಫೂರ್ತಿಯನ್ನು ಸ್ಮರಿಸಿದರು. ಪ್ರತಿಯೊಬ್ಬರ ಜೀವನದಲ್ಲಿಯೂ ತಂದೆಯ ಪಾತ್ರ ಹಿರಿದಾಗಿದ್ದು, ಆತನ ತ್ಯಾಗ ಹಾಗೂ ಕುಟುಂಬದ ಕಾಳಜಿಯನ್ನು ಸದಾ ಗೌರವಿಸಬೇಕು,’’ಎಂದರು.
‘‘ಮಕ್ಕಳ ಪಾಲಿಗೆ ಅಪ್ಪಂದಿರು ಸದಾ ಸ್ಫೂರ್ತಿಯ ಚಿಲುಮೆಯಂತಿದ್ದು, ಮಕ್ಕಳ ಸಾಧನೆಯ ಆಧಾರಸ್ತಂಭವಾಗಿರುತ್ತಾರೆ. ಮಕ್ಕಳು ತಮ್ಮ ಪೋಷಕರ ಇಳಿವಯಸ್ಸಿನಲ್ಲಿಅವರನ್ನು ನಿರ್ಲಕ್ಷಿಸದೆ ಎಲ್ಲರೀತಿಯ ಕಾಳಜಿ ತೋರಿಸಬೇಕು,’’ಎಂದರು.
ಸಂಸ್ಥೆಯ ಕಾರ ್ಯದರ್ಶಿ ಡಾ.ಭಾರತಿ ನಾಗೇಶ್ , ಶೈಕ್ಷಣಿಕ ಅಧಿ ಕಾರಿ ಡಾ.ಸುಜಾಫಿಲಿಪ್ , ಪೋಷಕರಾದ ಲೋಹಿತ್ ಮತ್ತಿತರರು ಹಾಜರಿದ್ದರು.
ಚಿತ್ರ: ಎಚ್ ಎಸ್ ಎನ್ 21ಸಿಆರ್ ಪಿ2- ಚನ್ನರಾಯಪಟ್ಟಣದ ಜ್ಞಾನಸಾಗರ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಯಿತು.