ಕೊಪ್ಪಳ: 2 ಕ್ರೈಂ ಸುದ್ದಿ- (ಅಕ್ಕಿ- ಜಿವಿಟಿ ವಾಟ್ಸ್ ಆ್ಯಪ್ ಗ್ರೂಪ್ )

Contributed byManjunath.Sali@timesgroup.com|Vijaya Karnataka
koppal serious accident and suicide friday reports
ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತ

ಕೊಪ್ಪಳ: ತಾಲೂಕಿನ ಬೇವಿನಹಳ್ಳಿ ಗ್ರಾಮದ ಬಳಿ ಕೊಪ್ಪಳ ಹೊಸಪೇಟೆ ಎನ್ ಎಚ್ -67ರ ಸಮೀಪ ಭಾನುವಾರ ಬೈಕ್ ಸ್ಕಿಡ್ ಆಗಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಹೊಸಳ್ಳಿ ಗ್ರಾಮದ ನಿವಾಸಿ, ಗ್ರಾಪಂ ವಾಟರ್ ಮನ್ ಅಬ್ದುಲ್ ಕರೀಮ್ (49) ಮೃತ. ಅಪಘಾತದಲ್ಲಿತಲೆ, ಎಡ ಪಕ್ಕೆಲುಬು ಹಾಗೂ ಎಡ ಕಾಲಿಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರ ಸಹೋದರ ಹುಸ್ಮಾನ್ ಪಟೇಲ್ ನೀಡಿದ ದೂರಿನ ಮೇರೆಗೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
**

ನೇಣು ಬಿಗಿದುಕೊಂಡು ಆತ್ಮಹತ್ಯೆ

ಕೊಪ್ಪಳ: ತಾಲೂಕಿನ ಇಂದರಗಿ ಗ್ರಾಮದಲ್ಲಿವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಮಾಕಂರ್ ಡಯ್ಯ ರಾಚಯ್ಯ ಹಿರೇಮಠ (38) ಮೃತ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿ ಗ್ರಾಮದ ತಗಡಿನ ಶೆಡ್ ನಲ್ಲಿವೈರ್ ನಿಂದ ನೇಣು ಬಿಗಿದುಕೊಂಡಿದ್ದು, ಈ ಕುರಿತು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.