ಇರಾನ್ -ಇಸ್ರೇಲ್ ಯುದ್ಧದ ಮುಕ್ತಾಯದ ನಂತರ ಶಾಂತಿಯನ್ನು ಕಾಪಾಡಿಕೊಳ್ಳುವಲ್ಲಿಇರಾನ್ ಅಮೆರಿಕಕ್ಕೆ ನೀಡುವ ಗೌರವ ಅತ್ಯಂತ ನಿರ್ಣಾಯಕ ಅಂಶವಾಗಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ… ಟ್ರಂಪ್ ಪ್ರತಿಪಾದಿಸಿದ್ದಾರೆ. ತಮ್ಮ ಓವಲ್ ಕಚೇರಿಯಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ , ‘ಅವರು ನಮ್ಮನ್ನು ಗೌರವಿಸುವವರೆಗೆ ನಮಗೆ ಯಾವುದೇ ತೊಂದರೆ ಎದುರಾಗುವುದಿಲ್ಲ’ಎಂದು ತಿಳಿಸಿದ್ದಾರೆ. ಇದೇ ವೇಳೆ, ಹರ್ಮುಜ್ ಜಲಸಂಧಿಧಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸುವುದರಿಂದ ಜಾಗತಿಕವಾಗಿ ತೈಲದ ಮಹಾಪೂರವೇ ಹರಿಯಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ. ಹಗೆತನವನ್ನು ಕೊನೆಗೊಳಿಸಲು ಮತ್ತು ಮಾರ್ಗವನ್ನು ಮರುಪರಿಶೀಲಿಸಿ ಮುಕ್ತಗೊಳಿಸಲು ಮಧ್ಯಂತರ ಒಪ್ಪಂದವನ್ನು ತಲುಪಲಾಗಿದ್ದರೂ, ಪ್ರಾಥಮಿಕ ಮಾರ್ಗವು ಇಂದಿಗೂ ಮೈನ್ ಗಳಿಂದ (ಸುರಂಗ ಬಾಂಬುಗಳು) ನಿರ್ಬಂಧಿಧಿಸಲ್ಪಟ್ಟಿದೆ ಎಂದು ತಿಳಿಸಿದ್ದಾರೆ.