(ಮಸ್ಟ್ ) ವಿಟ್ಲತಾಲೂಕು ರಚನೆ ಆಗ್ರಹಿಸಿ ಜಾಥಾ

Contributed bymambadynews@gmail.com|Vijaya Karnataka
unity march for the formation of vitla taluk
ವಿಕ ಸುದ್ದಿಲೋಕ ವಿಟ್ಲ

ವಿಟ್ಲತಾಲೂಕು ರಚನಾ ಸಮಿತಿ ವತಿಯಿಂದ ವಿಟ್ಲತಾಲೂಕು ಮತ್ತು ವಿಟ್ಲವಿಧಾನಸಭಾ ಕ್ಷೇತ್ರ ರಚಿಸುವಂತೆ ಆಗ್ರಹಿಸಿ ಮಂಗಳವಾರ ವಿಟ್ಲದಲ್ಲಿಜಾಥಾ ನಡೆಯಿತು.
ವಿಟ್ಲಜೈನ ಬಸದಿಯಿಂದ ಹೊರಟ ಜಾಥಾ ನಾಡ ಕಚೇರಿವರೆಗೆ ನಡೆಯಿತು. ಬಳಿಕ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು. ಹೋರಾಟ ಸಮಿತಿ ಅಧ್ಯಕ್ಷ ಬಿ.ಕೆ. ಬಶೀರ್ , ಗೌರವಾಧ್ಯಕ್ಷ ಮುರುವ ಮಹಾಬಲ ಭಟ್ , ಸಂಚಾಲಕ ರಾಮಣ್ಣ ಶೆಟ್ಟಿ, ಉಪಾಧ್ಯಕ್ಷ ಸುದರ್ಶನ ಪಡಿಯಾರ್ ಮತ್ತು ಹಸೈನಾರ್ ಕಡಂಬು, ಕಾರ್ಯದರ್ಶಿ ರಮಾನಾಥ ವಿಟ್ಲ, ಜತೆ ಕಾರ್ಯದರ್ಶಿ ಕಾನ ಈಶ್ವರ ಭಟ್ , ಸದಾನಂದ ಗೌಡ ಸೇರಾಜೆ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಶ್ರೀನಿವಾಸ್ ಕೊಲ್ಯ, ರಾಮಣ್ಣ, ಜಯರಾಮ ಬಲ್ಲಾಳ, ಸುಧೆಶ್ ಭಂಡಾರಿ, ಅಬೂಬಕ್ಕರ್ ಅನಿಲಕಟ್ಟೆ, ಶ್ರೀಧರ ಶೆಟ್ಟಿ ಬೈಲುಗುತ್ತು, ಜಯಂತ ಮತ್ತಿತರರು ಭಾಗವಹಿಸಿದ್ದರು.

ಈ ಸಂದರ್ಭ ಮಾತನಾಡಿದ ರಮಾನಾಥ ವಿಟ್ಲ, ತಾಲೂಕು ಕೇಂದ್ರವನ್ನಾಗಿ ಮಾಡಲು ಬೇಕಾದ ಎಲ್ಲಅರ್ಹತೆಗಳಿದ್ದರೂ ಇನ್ನೂ ಕಾರ್ಯಗತಗೊಂಡಿಲ್ಲ. ಎಲ್ಲಪಕ್ಷದವರನ್ನು ಸೇರಿಸಿಕೊಂಡು ರಾಜಕೀಯ ರಹಿತವಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.

ದ.ಕ.ಜಿಲ್ಲೆಯಲ್ಲಿಬಂಟ್ವಾಳ ತಾಲೂಕು 75 ಗ್ರಾಮಗಳನ್ನು ಹೊಂದಿದ್ದು, ಜಿಲ್ಲೆಯಲ್ಲಿಅತಿ ದೊಡ್ಡ ತಾಲೂಕಾಗಿದೆ. ಅದನ್ನು ವಿಭಜಿಸಿ ವಿಟ್ಲತಾಲೂಕು ರಚನೆ ಮಾಡಬೇಕಿದೆ. ಕರೋಪಾಡಿ, ಕನ್ಯಾನ, ಪೆರುವಾಯಿ, ಮಾಣಿಲ, ಕೇಪು, ಪುಣಚ, ಬಿಳಿಯೂರು, ಕುಳ, ವಿಟ್ಲಮುಡ್ನೂರು, ಕೊಳ್ನಾಡು, ಸಾಲೆತ್ತೂರು ಗ್ರಾಮಗಳ ಜನರು ತಮ್ಮ ಜಮೀನುಗಳಿಗೆ ಸಂಬಂಧಪಟ್ಟ ಸರಕಾರಿ ಕೆಲಸಗಳಿಗೆ ಸುಮಾರು 25 ಕಿ.ಮೀ. ನಿಂದ 50 ಕಿ.ಮೀ. ವರೆಗೆ ಕ್ರಮಿಸಿ ಬಂಟ್ವಾಳ ತಾಲೂಕು ಕಚೇರಿಗೆ ಹೋಗಬೇಕಿದೆ. ಆದ್ದರಿಂದ ಗಡಿನಾಡ ಈ ಪ್ರದೇಶದ ಏಳಿಗೆಗಾಗಿ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ವಿಟ್ಲತಾಲೂಕು ರಚಿಸುವುದು ಅಗತ್ಯ ಹಾಗೂ ಅನಿವಾರ್ಯ ಎಂದು ಹೋರಾಟಗಾರರು ವಿವರಿಸಿದರು.

ನಮ್ಮ ಪ್ರಯತ್ನ ನಿರಂತರವಾಗಿ ನಡೆಯಲಿದೆ. ಹಲವು ಹಿರಿಯರು ಸೇರಿಕೊಂಡು ಹೋರಾಟಕ್ಕೆ ಮುಂದಾಗಿದ್ದೇವೆ. ವಿಟ್ಲವನ್ನು ತಾಲೂಕು ಮಾಡುವುದು ಎಲ್ಲರ ಉದ್ದೇಶ. ಅದೇ ರೀತಿ ನಮ್ಮ ವಿಟ್ಲವಿಧಾನ ಸಭಾ ಕ್ಷೇತ್ರವನ್ನು ಮರಳಿ ಪಡೆಯುವ ಪ್ರಯತ್ನ ನಡೆಸಲಾಗುವುದು. ಇದಕ್ಕೆ ಈ ಭಾಗದ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಚಿತ್ರ: 23ಬಿಎಚ್ ವಿಟ್ಲ

ವಿಟ್ಲತಾಲೂಕು ರಚನೆ ಆಗ್ರಹಿಸಿ ಹೋರಾಟ ಸಮಿತಿ ವತಿಯಿಂದ ಜಾಥಾ ನಡೆಯಿತು.