ಉದ್ಯೋಗಸ್ಥ ಮಹಿಳೆ ಸವಾಲು ವೈಯಕ್ತಿಕವಲ್ಲ

Contributed bysatyappanavarpm@gmail.com|Vijaya Karnataka

ಶಿಗ್ಗಾವಿ ಸಂಸ್ಕೃತಿ ಶಾಲೆಯಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಸ್ವತಿ ಘಜಕೋಶ ಮಾತನಾಡಿದರು. ಉದ್ಯೋಗಸ್ಥ ಮಹಿಳೆಯರ ಸಮಸ್ಯೆಗಳು ವೈಯಕ್ತಿಕವಲ್ಲ, ಸಾಮಾಜಿಕ ಮತ್ತು ವ್ಯವಸ್ಥಿತ ಬದಲಾವಣೆ ಅಗತ್ಯ ಎಂದರು. ಕಚೇರಿ ಕೆಲಸದೊಂದಿಗೆ ಮನೆ ನಿರ್ವಹಣೆ, ಮಕ್ಕಳ ಆರೈಕೆ ಒತ್ತಡಕ್ಕೆ ಕಾರಣ. ಸಮಾನ ಕೆಲಸಕ್ಕೆ ಸಮಾನ ವೇತನ, ಸುರಕ್ಷಿತ ಸಾರಿಗೆ ವ್ಯವಸ್ಥೆ ಕೊರತೆ ಇದೆ.

working women social challenges and struggles

ಮಹಿಳಾ ದಿನಾಚರಣೆ ಕಾರ್ಯಕ್ರಮ

ವಿಕ ಸುದ್ದಿಲೋಕ ಶಿಗ್ಗಾವಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಮಹಿಳೆಯರು ಮನೆ ನಾಲ್ಕು ಗೋಡೆಗಳಿಂದ ಹೊರ ಬಂದು ಆರ್ಥಿಕವಾಗಿ ಸ್ವತಂತ್ರರಾಗುತ್ತಿರುವುದು ಹೆಮ್ಮೆ ವಿಷಯ. ಆದರೆ, ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ವೈಯಕ್ತಿಕ ಸಮಸ್ಯೆಗಳಲ್ಲ. ಅವು ಸಾಮಾಜಿಕ ಮತ್ತು ವ್ಯವಸ್ಥಿತ ಬದಲಾವಣೆ ಬಯಸುವಂತದ್ದಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಸ್ವತಿ ಘಜಕೋಶ ಹೇಳಿದರು.

ಪಟ್ಟಣದ ಎಂಪಿಎಂ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿಮಂಗಳವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘‘ಕಚೇರಿ ಕೆಲಸದ ಜತೆಗೆ ಮನೆ ನಿರ್ವಹಣೆ, ಮಕ್ಕಳ ಆರೈಕೆ ಮತ್ತು ಹಿರಿಯರ ಸೇವೆ ಸಂಪೂರ್ಣ ಜವಾಬ್ದಾರಿ ಮಹಿಳೆಯರ ಮೇಲಿದ್ದು ಅವರ ಮಾನಸಿಕ ಒತ್ತಡಕ್ಕೆ ಮುಖ್ಯ ಕಾರಣವಾಗಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಲ್ಲಿಇಂದಿಗೂ ಹಲವು ಕ್ಷೇತ್ರಗಳಲ್ಲಿತಾರತಮ್ಯವಿದೆ. ಇದು ಮಹಿಳೆಯರ ವೃತ್ತಿಜೀವನದ ಉತ್ಸಾಹ ಕುಗ್ಗಿಸುತ್ತಿದೆ. ಕೆಲಸದ ಸ್ಥಳದಲ್ಲಿಸೂಕ್ತ ಶೌಚಾಲಯ, ವಿಶ್ರಾಂತಿ ಕೊಠಡಿ, ರಾತ್ರಿ ಪಾಳಿಯಲ್ಲಿಕೆಲಸ ಮಾಡುವಾಗ ಸುರಕ್ಷಿತ ಸಾರಿಗೆ ವ್ಯವಸ್ಥೆ ಕೊರತೆ ಇಂದಿಗೂ ಮಹಿಳೆಯರನ್ನು ಕಾಡುತ್ತಿದೆ,’’ ಎಂದರು.

‘‘ದಿನದಲ್ಲಿಕನಿಷ್ಟ 30 ನಿಮಿಷ ಯೋಗ, ಧ್ಯಾನ ಅಥವಾ ತಮಗೆ ಇಷ್ಟ ಹವ್ಯಾಸದಲ್ಲಿತೊಡಗಿಸಿಕೊಳ್ಳುವ ಮೂಲಕ ಒತ್ತಡ ಮುಕ್ತರಾಗಬೇಕು. ಕೆಲಸದ ಸ್ಥಳದಲ್ಲಿರುವ ‘ವಿಶಾಖಾ ಮಾರ್ಗಸೂಚಿ’ ಯಂತಹ ಸುರಕ್ಷತಾ ನಿಯಮಗಳ ಬಗ್ಗೆ ಪ್ರತಿಯೊಬ್ಬ ಮಹಿಳೆಯೂ ಅರಿವು ಹೊಂದಿರಬೇಕು,’’ ಎಂದರು.

ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ಅನಿತಾ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಮೊರಬದ, ಶಾಂತಾ ಮೊರಬದ, ಸವಿತಾ ಗೌರಿಮಠ, ಶ್ವೇತಾ ದುಬೆ, ಸ್ವಪ್ನಾ ಪಟ್ಟೆದ, ಗಾಯಿತ್ರಿ ಎಂ.ವಿ.ರಾಜೇಶ್ವರಿ ಪಾಟೀಲ, ಕವಿತಾ ಲಂಗೋಟಿ, ಸವಿತಾ ಹೊನ್ನಣ್ಣವರ, ಲಕ್ಷಿತ್ರ್ಮೕ ಹಾಗಲೂರ, ನಿಖಿತಾ ಕಂಕನಾವಡ, ಪೂಜಾ ಹಿರೇಮಠ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಗದಿಗೆಪ್ಪ ಅಣ್ಣಿಗೇರಿ ನಿರೂಪಿಸಿದರು.

ಧಿಧಿ

ಪೋಟೋ 10ಎಸ್ .ಜಿ.ಎನ್ .3

ಶಿಗ್ಗಾವಿ ಸಂಸ್ಕೃತಿ ಶಾಲೆಯಲ್ಲಿನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿಸರಸ್ವತಿ ಘಜಕೋಶ ಮಾತನಾಡಿದರು.

ಧಿಧಿ-