ಜಾನಪದದ ಬೆಳವಣಿಗೆಗೆ ಮಹಿಳಾ ಕೊಡುಗೆ ಅಪಾರ
ವಿಕ ಸುದ್ದಿಲೋಕ ತರೀಕೆರೆ
ಜಾನಪದ ಜೀವಂತವಾಗಿರಲು ಮಹಿಳೆಯರೇ ಕಾರಣ. ಮಹಿಳೆಯರು ಜನಪದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜಾನಪದವನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್ .ಬಾಲಾಜಿ ಹೇಳಿದರು.
ಅವರು ಪಟ್ಟಣದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿಮಂಗಳವಾರ ನಡೆದ ಚಿಕ್ಕಮಗಳೂರು ಜಿಲ್ಲಾಕನ್ನಡ ಜಾನಪದ ಪರಿಷತ್ ಯುವ ಘಟಕದ ಉದ್ಘಾಟನೆ ಮತ್ತು ಪದ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಾನಪದಕ್ಕೆ ಇತಿಮಿತಿಯಿಲ್ಲ, ಚೌಕಟ್ಟಿಲ್ಲ. ಯುವ ಪೀಳಿಗೆ ಜಾನಪದದ ಬಗ್ಗೆ ಆಸಕ್ತಿ ತೋರಬೇಕು. ಆ ನಿಟ್ಟಿನಲ್ಲಿಪ್ರತೀ ಜಿಲ್ಲೆಯಲ್ಲೂಪರಿಷತ್ತು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಶಾಲಾ, ಕಾಲೇಜುಗಳಲ್ಲಿಜಾನಪದದ ಜಾಗೃತಿ ಮೂಡಿಸುವ ಕೆಲಸವನ್ನು ಯುವ ಘಟಕ ಮಾಡಬೇಕಿದೆ. ತರೀಕೆರೆಯಲ್ಲಿರಾಜ್ಯ ಮಟ್ಟದ ಮಹಿಳಾ ಜಾನಪದ ಸಮ್ಮೇಳನ ನಡೆಸುವ ಆಶಯವಿದೆ ಎಂದರು.
ಕಜಾಪ ಮಹಿಳಾ ಘಕಟದ ಜಿಲ್ಲಾಧ್ಯಕ್ಷೆ ಎಂ.ಎಸ್ .ವಿಶಾಲಾಕ್ಷಮ್ಮ ಮಾತನಾಡಿ, ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜಾನಪದ ಸಂಘಟನೆ ಹೆಮ್ಮರವಾಗಿ ಬೆಳೆಯಲಿ ಎಂದರು.
ಕನ್ನಡಶ್ರೀ ಬಿ.ಎಸ್ .ಭಗವಾನ್ ಮಾತನಾಡಿ, ಜಾನಪದ ಕಲಾವಿದರಿಗೆ ಸರಕಾರದಿಂದ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ನೀಡಬೇಕೆಂದು ಮನವಿ ಮಾಡಿದರು.
ಶ್ರೀಗುರು ರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್ .ರಮೇಶ್ , ಕಜಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್ .ಕೌಜಲಗಿ, ರಾಮನಗರ ಕಜಾಪ ಜಿಲ್ಲಾಧ್ಯಕ್ಷ ಕೆ.ಸಿ.ಕಾಂತಪ್ಪ ಮಾತನಾಡಿದರು.
ಕಜಾಪ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ, ಅಕ್ಕಿ ಜಯಣ್ಣ, ಪರಮೇಶ್ , ಟಿ.ಎಲ್ .ಶೇಖರ್ , ಕುಮಾರ್ , ಜಯರಾಮ್ , ಟಿ.ಆರ್ .ಸೋಮಶೇಖರಯ್ಯ ಹಾಗೂ ಇತರರಿದ್ದರು.
10ತರೀಕೆರೆ1 :
ತರೀಕೆರೆ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿನಡೆದ ಚಿಕ್ಕಮಗಳೂರು ಜಿಲ್ಲಾಕನ್ನಡ ಜಾನಪದ ಪರಿಷತ್ ಯುವ ಘಟಕದ ಉದ್ಘಾಟನಾ ಮತ್ತು ಪದ ಪ್ರದಾನ ಸಮಾರಂಭವನ್ನು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್ .ಬಾಲಾಜಿ ಉದ್ಘಾಟಿಸಿದರು.

