ಅಳಗಂಚಿಪುರದಲ್ಲಿಎನ್ ಎಸ್ ಎಸ್ ಶಿಬಿರ

Contributed bysrinivas.hullahalli@gmail.com|Vijaya Karnataka

ನಂಜನಗೂಡಿನ ಜೆಎಸ್‌ಎಸ್‌ ಪದವಿ ಕಾಲೇಜಿನಿಂದ ಅಳಗಂಚಿಪುರ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಏರ್ಪಡಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಕೆ. ವೀರಣ್ಣ ಅವರು ಶಿಬಿರಕ್ಕೆ ಚಾಲನೆ ನೀಡಿದರು. ಯುವ ವಿದ್ಯಾರ್ಥಿಗಳು ಸೇವಾ ಭಾವನೆಯೊಂದಿಗೆ ಸಾಮಾಜಿಕ ಸೇವೆ ಸಲ್ಲಿಸಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಅವರು ತಿಳಿಸಿದರು. ಶಿಬಿರದಲ್ಲಿ ಸ್ವಯಂಸೇವಕರು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದರು.

alaganchipur camp an opportunity for youth to enhance social service skills

ಅಳಗಂಚಿಪುರದಲ್ಲಿಎನ್ ಎಸ್ ಎಸ್ ಶಿಬಿರ

ವಿಕ ಸುದ್ದಿಲೋಕ ನಂಜನಗೂಡು

ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಸಲುವಾಗಿ ಯುವ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳಲ್ಲಿಸೇವಾ ಭಾವನೆಯೊಂದಿಗೆ ಸಾಮಾಜಿಕ ಸೇವೆ ಸಲ್ಲಿಸುವ ಮೂಲಕ ನೆರವಾಗಬೇಕು ಎಂದು ಜೆಎಸ್ ಎಸ್ ಶಿಕ್ಷಣ ಸಂಸ್ಥೆಗಳ ನಿವೃತ್ತ ಪ್ರಾಧ್ಯಾಪಕ ಕೆ. ವೀರಣ್ಣ ತಿಳಿಸಿದರು.

ತಾಲೂಕಿನ ಅಳಗಂಚಿಪುರ ಗ್ರಾಮದಲ್ಲಿನಂಜನಗೂಡಿನ ಜೆಎಸ್ ಎಸ್ ಪದವಿ ಕಾಲೇಜಿನಿಂದ ಆಯೋಜಿಸಿದ್ದ 2025-2026ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

‘‘ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಸ್ಥಾಪಿಸಿದ ರಾಷ್ಟ್ರೀಯ ಸೇವಾ ಯೋಜನೆ ಘಟಕ ಪರಿಕಲ್ಪನೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಾಮಾಜಿಕ ಪರಿಕಲ್ಪನೆಗೆ ಅನುಗುಣವಾಗಿದ್ದು, ಕಾಲೇಜು ಹಂತದಲ್ಲಿವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳು ಶಿಬಿರದಲ್ಲಿಭಾಗಿಯಾಗುವ ಮೂಲಕ ಗ್ರಾಮ, ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ನೆರವಾಗಬಹುದು,’’ ಎಂದು ತಿಳಿಸಿದರು.

ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್ . ಹೊನ್ನೇಗೌಡ ಮಾತನಾಡಿ, ‘‘ಕಾಲೇಜಿನ ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಶಿಸ್ತು, ಸಮಯ ಪ್ರಜ್ಞೆಯೊಂದಿಗೆ ಗ್ರಾಮದ ಎಲ್ಲಾಹಿರಿಯ ಕಿರಿಯ ನಾಗರಿಕರೊಂದಿಗೆ ಬೆರೆತು ಗ್ರಾಮದ ನೈರ್ಮಲ್ಯ, ಆರೋಗ್ಯದ ಬಗ್ಗೆ ಅರಿವು ಹಾಗೂ ಶಿಕ್ಷಣದ ಮಹತ್ವ ಕುರಿತಂತೆ ರಾಷ್ಟ್ರೀಯ ಸೇವಾಯೋಜನಾ ಘಟಕದ ಉದ್ದೇಶಿತ ಕಾರ್ಯಯೋಜನೆಗಳನ್ನು ಸಕಾಲದಲ್ಲಿಪೂರ್ಣಗೊಳಿಸಿ ಗ್ರಾಮದ ಸಮಸ್ತರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗುವ ಜತೆಗೆ ಮಾದರಿ ವಿದ್ಯಾರ್ಥಿಗಳಾಗಿ ಕಾಲೇಜಿಗೆ ಕೀರ್ತಿ ಮತ್ತು ಯಶಸ್ಸನ್ನು ತರಬೇಕು,’’ ಎಂದು ಸಲಹೆ ನೀಡಿದರು.

ಅಳಗಂಚಿಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಹದೇವ, ಸಿದ್ದರಾಜು, ಮಾದೇಗೌಡ, ಮಂಜು, ದೊಡ್ಡಯ್ಯ, ನಂಜುಂಡಸ್ವಾಮಿ, ಜೆಎಸ್ ಎಸ್ ಕಾಲೇಜಿನ ಅಧ್ಯಾಪಕರಾದ ಡಾ.ಬಿ.ಕೆ. ಕೆಂಡಗಣ್ಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

ಎಂವೈಎಸ್ 10 ಎನ್ ಜಿಡಿ4

ನಂಜನಗೂಡು ತಾಲೂಕಿನ ಅಳಗಂಚಿಪುರ ಗ್ರಾಮದಲ್ಲಿನಂಜನಗೂಡಿನ ಜೆಎಸ್ ಎಸ್ ಪದವಿ ಕಾಲೇಜಿನಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾಯೋಜನೆಯ ಏಳು ದಿನಗಳ ವಾರ್ಷಿಕ ವಿಷೇಷ ಶಿಬಿರಕ್ಕೆ ಪ್ರೊ.ಕೆ. ವೀರಣ್ಣ ಚಾಲನೆ ನೀಡಿದರು.