ಸಂಘಟನೆಯಿಂದ ನೌಕರರ ಸಮಸ್ಯೆಗೆ ಪರಿಹಾರ

Contributed byvinu1273@gmail.com|Vijaya Karnataka

ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಮಸ್ಯೆಗಳಿಗೆ ಸಂಘಟನೆಯ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಮಹಾಮಂಡಳಿ ಅಧ್ಯಕ್ಷ ಶಿವನಂಜಯ್ಯ ಅಭಿಪ್ರಾಯಪಟ್ಟರು. ರಾಜ್ಯಾದ್ಯಂತ 35 ಸಾವಿರಕ್ಕೂ ಅಧಿಕ ನೌಕರರು ಸಂಕಷ್ಟದಲ್ಲಿದ್ದಾರೆ. ಎಲ್ಲರೂ ಒಗ್ಗೂಡಿ ಹೋರಾಟದಲ್ಲಿ ಭಾಗವಹಿಸಿ ತಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗುವಂತೆ ಮಾಡಬೇಕು. ಕನಿಷ್ಠ ವೇತನ ಮತ್ತು ಸವಲತ್ತುಗಳಿಲ್ಲದೆ ದುಡಿಯುವ ನೌಕರರ ಹಿತರಕ್ಷಣೆಗೆ ಸಂಘಟನೆ ಅಗತ್ಯವಾಗಿದೆ.

clarification of dairy workers issues solutions from the organization

ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳಿ ಅಧ್ಯಕ್ಷ ಶಿವನಂಜಯ್ಯ ಅಭಿಪ್ರಾಯ

ವಿಕ ಸುದ್ದಿಲೋಕ ಕುಶಾಲನಗರ

ನೌಕರರ ಸಮಸ್ಯೆಗಳಿಗೆ ಸಂಘಟನೆ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳಿ ಅಧ್ಯಕ್ಷ ಶಿವನಂಜಯ್ಯ ತಿಳಿಸಿದರು.

ರಾಜ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಹಾಮಂಡಳಿ ಹಾಗೂ ಜಿಲ್ಲಾಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ಹಾಲು ಉತ್ಪಾದಕರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿನಡೆದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘‘ರಾಜ್ಯದಲ್ಲಿಸರಿಸುಮಾರು 16 ಸಾವಿರಕ್ಕೂ ಅಧಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ. ಇವುಗಳಲ್ಲಿ35 ಸಾವಿರದಷ್ಟು ನೌಕರರು ಸಂಕಷ್ಟದ ನಡುವೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರೂ ಒಗ್ಗೂಡಿ ದನಿ ಎತ್ತಿದಾಗ ಮಾತ್ರ ನಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗುತ್ತದೆ. ಈ ನಿಟ್ಟಿನಲ್ಲಿನೌಕರರು ಸದಸ್ಯತ್ವ ಪಡೆದು ಸಂಘಟನೆಯಲ್ಲಿತೊಡಗಿಸಿಕೊಂಡು ಹೋರಾಟದಲ್ಲಿಭಾಗಿಯಾಗಬೇಕು,’’ ಎಂದರು.

ಹೋರಾಟ ಅಗತ್ಯ:

ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ‘‘ಕನಿಷ್ಠ ವೇತನವೂ ಇಲ್ಲದೆ, ಸರಕಾರದ ಕನಿಷ್ಠ ಸವಲತ್ತುಗಳೂ ಇಲ್ಲದೆ 365 ದಿನವೂ ಕೆಲಸ ನಿರ್ವಹಿಸುವ ಅಂಗ ಎಂದರೆ ಅದು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು. ನಮ್ಮ ಬೇಡಿಕೆಗಳ ಈಡೇರಿಕೆಗೆ ಹೋರಾಟ ಅಗತ್ಯ,’’ ಎಂದರು.

ಜಿಲ್ಲಾಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಮೇಗೌಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘‘ನೌಕರರು ತಮ್ಮ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಮಹಾಮಂಡಳದ ಗಮನ ಸೆಳೆಯುವ ನಿಟ್ಟಿನಲ್ಲಿಸಂಘಟಿತರಾಗಬೇಕಿದೆ. ನೌಕರರ ಕ್ಷೇಮಾಭಿವೃದ್ಧಿಗಾಗಿ ಕಡ್ಡಾಯವಾಗಿ ಎಲ್ಲಾನೌಕರರು ಸದಸ್ಯತ್ವ ಪಡೆದುಕೊಳ್ಳಬೇಕಿದೆ,’’ ಎಂದು ಕೋರಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿಪಾಲ್ಗೊಂಡಿದ್ದ ಹಾಲು ಉತ್ಪಾದಕರ ವಿವಿಧ ಸಹಕಾರ ಸಂಘಗಳ ಕಾರ್ಯದರ್ಶಿಗಳು ಅನುಭವ ವ್ಯಕ್ತಪಡಿಸಿದರು. ನೌಕರಿ ಬಗ್ಗೆ ಭರವಸೆಯಿಲ್ಲ, ದುಡಿಮೆಗೆ ತಕ್ಕ ಪ್ರತಿಫಲವಿಲ್ಲ, ನಿಗದಿತ ಅವಧಿಗಿಂತ ಹೆಚ್ಚಿನ ಸಮಯ ಕೆಲಸ ನಿರ್ವಹಿಸುವ ಪರಿಸ್ಥಿತಿಯಿದೆ ಎಂಬಿತ್ಯಾದಿ ಸಂಕಷ್ಟಗಳನ್ನು ತೋಡಿಕೊಂಡರು.

ಮಹಾಮಂಡಳಿ ಜಂಟಿ ಕಾರ್ಯದರ್ಶಿ ಬೀರಲಿಂಗಪ್ಪ, ರಾಜ್ಯ ಪ್ರತಿನಿಧಿಗಳಾದ ಶೇಖರ್ , ಸುನಿಲ್ , ತೇಜಾಕ್ಷಿ, ಪ್ರಮುಖರಾದ ತಿಮ್ಮಪ್ಪ ಪೂಜಾರಿ, ರಂಜಿತ್ , ಸ್ವಾಮಿ, ಸತೀಶ್ , ದಿಲೀಪ್ ಮತ್ತಿತರರು ಇದ್ದರು.

11 ಕೆಯುಎಸ್ 01 ಚಿತ್ರದಲ್ಲಿ

ಕೂಡುಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿನಡೆದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಭೆ ಉದ್ಘಾಟಿಸಲಾಯಿತು.