ಬೆಳಗಾವಿಯ ಮಹಿಳಾ ಉದ್ಯಮಿಗಳ ಸಮೂಹದಿಂದ ಕಾರ್ಯಕ್ರಮ ಆಯೋಜನೆ
ವಿಕ ಸುದ್ದಿಲೋಕ ಬೆಳಗಾವಿ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೆಳಗಾವಿಯ ಮಹಿಳಾ ಉದ್ಯಮಿಗಳ ಸಮೂಹ ‘ಬೆಲಾ’ ವತಿಯಿಂದ ನಾನಾ ಕ್ಷೇತ್ರಗಳಲ್ಲಿಸಾಧನೆ ಮಾಡಿದ 36 ಮಹಿಳಾ ಸಾಧಕಿಯರಿಗೆ ‘ವಿಮೆನ್ ಎಂಟ್ರಪ್ರಿನಿಯರ್ ಅವಾರ್ಡ್ ’ ಮತ್ತು ‘ವಿಮೆನ್ ಪ್ರೊಫೆಷನಲ್ ಅವಾರ್ಡ್ ಆಫ್ ದಿ ಇಯರ್ ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಲ್ಲಿನ ಖಾಸಗಿ ಹೋಟೆಲ್ ನಲ್ಲಿಮಾ.8ರಂದು ನಡೆದ ಸಮಾರಂಭದಲ್ಲಿಉಪಮೇಯರ್ ವಾಣಿ ವಿಲಾಸ್ ಜೋಶಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ನೇತ್ರಾವತಿ ಪಾಟೀಲ ಅವರು ಪ್ರಶಸ್ತಿ ವಿತರಿಸಿ, ಸಾಧಕಿಯರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿಮಾತನಾಡಿದ ಬೆಲಾ ಮಹಿಳಾ ಉದ್ಯಮಿಗಳ ಸಮುದಾಯದ ಸಿಇಒ, ಬಿರ್ಲಾ ಇಂಟರ್ ನ್ಯಾಷನಲ್ ಸ್ಕೂಲ್ ವ್ಯವಸ್ಥಾಪಕ ನಿರ್ದೇಶಕಿ ಲಕ್ಷ್ಮಿ ಖಿಲಾರಿ, ‘‘ಬೆಳಗಾವಿಯ ಮಹಿಳೆಯರು ಧೈರ್ಯ, ದೃಢತೆ ಮತ್ತು ನಾಯಕತ್ವದ ಪ್ರತೀಕ. ಅವರ ಸಾಧನೆ ಮುಂದಿನ ಪೀಳಿಗೆಯ ಮಹಿಳೆಯರಿಗೆ ದೊಡ್ಡ ಪ್ರೇರಣೆಯಾಗಲಿದೆ’’ ಎಂದು ಹೇಳಿದರು.
300ಕ್ಕೂ ಅಧಿಕ ನೋಂದಣಿ :
‘ಬೆಲಾ’ ಮಹಿಳಾ ಉದ್ಯಮಿಗಳು ಮತ್ತು ವೃತ್ತಿಪರರ ಸಮುದಾಯವಾಗಿದ್ದು, ನೆಟ್ ವರ್ಕಿಂಗ್ , ಮಾರ್ಗದರ್ಶನ, ಸನ್ಮಾನ ಹಾಗೂ ನಾನಾ ಕಾರ್ಯಕ್ರಮಗಳ ಮೂಲಕ ಮಹಿಳೆಯರನ್ನು ಸಬಲಗೊಳಿಸುವ ಕಾರ್ಯ ನಡೆಸುತ್ತಿದೆ. ಪ್ರಶಸ್ತಿ, ಪ್ರದರ್ಶನ, ನಾಯಕತ್ವ ತರಬೇತಿ ಹಾಗೂ ಸಮುದಾಯ ಕಾರ್ಯಕ್ರಮಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದು, ಈ ಬಾರಿ ಪ್ರಶಸ್ತಿಗಾಗಿ 300ಕ್ಕೂ ಹೆಚ್ಚು ಮಹಿಳೆಯರು ನೋಂದಣಿ ಮಾಡಿಕೊಂಡಿದ್ದರು. ಪಾರದರ್ಶಕ ಮೌಲ್ಯಮಾಪನ ಪ್ರಕ್ರಿಯೆ ನಡೆಸಿ 36 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
*ಫೋಟೋ-11ರವಿಜಿ12: ನಾನಾ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಮಹಿಳಾ ಸಾಧಕಿಯರಿಗೆ ಬೆಲಾ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.

