12 ಎನ್ ಆರ್ ಡಿ-2 ವಿಧಿಕಧಿಸಿತ ಭಾಧಿರಧಿತಕ್ಕೆ ವಿಧಿಜ್ಞಾಧಿನಿಧಿಗಳ ಕೊಧಿಡುಗೆ ಅಧಿಪಾಧಿರ ನರಗುಂದ: ಸಮೃದ

Contributed bysubedarcb@gmail.com|Vijaya Karnataka

ನರಗುಂದದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಡೆಯಿತು. ಡಾ. ಜಿತೇಂದ್ರ ಜಹಗೀರದಾರ ಅವರು ವಿಜ್ಞಾನಿಗಳ ಕೊಡುಗೆಯನ್ನು ಸ್ಮರಿಸಿದರು. ಭಾರತದ ವಿಜ್ಞಾನಿ ಸಿ.ವಿ.ರಾಮನ್ ಅವರ ಬೆಳಕಿನ ಪರಿಣಾಮದ ಆವಿಷ್ಕಾರವನ್ನು ನೆನಪಿಸಲಾಯಿತು. ವಿದ್ಯಾರ್ಥಿಗಳು ವೈಜ್ಞಾನಿಕ ಪ್ರಯೋಗಗಳನ್ನು ಪ್ರದರ್ಶಿಸಿದರು. ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನದ ಮಹತ್ವವನ್ನು ಸಾರಲಾಯಿತು.

science and technology national science day celebration in naragund to foster perspective

ವಿಧಿಕಧಿಸಿತ ಭಾಧಿರಧಿತಕ್ಕೆ ವಿಧಿಜ್ಞಾಧಿನಿಧಿಗಳ ಕೊಧಿಡುಗೆ ಅಧಿಪಾಧಿರ

ನರಗುಂದ: ಸಮೃಧಿದ್ಧ ಹಾಗೂ ವಿಕಸಿತ ಭಾರತ ನಿರ್ಮಿಸುವಲ್ಲಿವಿಜ್ಞಾನಿಗಳ ಪಾತ್ರ ದೊಡ್ಡದಿದೆ ಎಂದು ಹುಲಕೋಟಿ ಎಚ್ .ಕೆ.ಪಾಟೀಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಜಿತೇಂದ್ರ ಜಹಗೀರದಾರ ಹೇಳಿದರು.

ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಕಾಲೇಜಿನಲ್ಲಿಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಕಸಿತ ಭಾರತವನ್ನಾಗಿ ಪರಿವರ್ತಿಸಲು ವಿಜ್ಞಾನ, ತಂತ್ರಜ್ಞಾನ , ಇಂಜಿನಿಯರಿಂಗ್ , ಔಷಧ, ಬಾಹ್ಯಾಕಾಶ ಸೇರಿ ಇತ್ಯಾದಿ ಕ್ಷೇತ್ರಗಳಲ್ಲಿನ ವಿಜ್ಞಾನಿಗಳ ಕೊಡುಗೆಗಳು ಬಹಳಷ್ಟು ಮಹತ್ವದ್ದಾಗಿದೆ. ಹವಾಮಾನ ಬದಲಾವಣೆ, ಸೈಬರ್ ಭದ್ರತೆ, ಶಿಕ್ಷಣ, ಆರೋಗ್ಯ, ಡಿಜಿಟಲ್ ಮಾರ್ಕೆಟಿಂಗ್ , ನೀರು, ಗಾಳಿ, ಕೃಷಿ, ಬಾಹ್ಯಾಕಾಶ, ರಕ್ಷಣಾ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ತೊಡೆದು ಹಾಕಿ ವೈಜ್ಞಾನಿಕ ಸಂಶೋಧನೆ , ಹೊಸ ನಾವೀನ್ಯತೆ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಕಾಲೇಜಿನ ಪ್ರಾಚಾರ್ಯ ಆರ್ .ಬಿ.ಪಾಟೀಲ್ ಮಾತನಾಡಿ, ಭಾರತದ ಮಹಾನ್ ವಿಜ್ಞಾನಿ ಸಿ.ವಿ.ರಾಮನ್ ಅವರು 1928 ರಲ್ಲಿಬೆಳಕಿನ ಪರಿಣಾಮ ಕಂಡು ಹಿಡಿದ ದಿನದ ಸ್ಮರಣೆಗಾಗಿ ಈ ದಿನವನ್ನು ವಿಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ. ಬರಿಗಣ್ಣಿಗೆ ಕಾಣುವ ಬೆಳಕು ಬಿಳಿಯಾಗಿದ್ದರೂ ಅದರಲ್ಲಿಏಳು ಬಣ್ಣಗಳಿರುತ್ತವೆ ಎಂಬುದನ್ನು ವಿಜ್ಞಾನ ಪ್ರಯೋಗದಿಂದ ತೋರಿಸಿದ್ದರು ಎಂದರು.

ಉಪನ್ಯಾಸಕ ಎಂ.ಬಿ.ಹೂಗಾರ, ವೈ.ಎಂ.ಅನ್ಸಾರಿ ಮಾತನಾಡಿದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವೀರನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರ. ಶಿಕ್ಷಣಾರ್ಥಿಗಳು ಭೌತ ವಿಜ್ಞಾನ ಮತ್ತು ರಸಾಯನ ಶಾಸ್ತ್ರದ ಬಗ್ಗೆ ತಯಾರಿಸಿದ ವಿವಿಧ ಪ್ರಯೋಗಗಳನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿಬಸಮ್ಮ ಹುಡೇದಮನಿ, ಶೋಭಾ ಮಡಿವಾಳ, ಭರತ ಬೂದನ್ನವರ, ವಿದ್ಯಾ ಬಡಿಗೇರ, ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಫೋಟೋ ಶೀರ್ಷಿಕೆ) 12 ಎನ್ ಆರ್ ಡಿ-2 : ನರಗುಂದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಕಾಲೇಜಿನಲ್ಲಿಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಡಾ.ಜಿತೇಂದ್ರ ಜಹಗೀರದಾರ ಉದ್ಘಾಟಿಸಿದರು.