ಮರುಡೇಶ್ವರಸ್ವಾಮಿ ಬ್ರಹ್ಮರಥೋತ್ಸವ

Contributed byshekartnp77@gmail.com|Vijaya Karnataka

ತಿ.ನರಸೀಪುರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಶ್ರೀ ಮರುಡೇಶ್ವರಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. ಶ್ರೀ ಮರುಡೇಶ್ವರಸ್ವಾಮಿ, ಶ್ರೀ ಸುಬ್ರಹ್ಮಣೇಶ್ವರ ಸ್ವಾಮಿ, ಶ್ರೀ ಗಣಪತಿ ಮೂರ್ತಿಗಳ ರಥೋತ್ಸವ ನಡೆಯಿತು. ಸಾವಿರಾರು ಭಕ್ತರು ರಥಗಳನ್ನು ಎಳೆದು ಪುನೀತರಾದರು. ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಭಕ್ತರಿಗೆ ಪಾನಕ, ಮಜ್ಜಿಗೆ ವಿತರಿಸಲಾಯಿತು.

marudeshwar swami brahmarathotsava celebrated with devotion and grandeur

ಮರುಡೇಶ್ವರಸ್ವಾಮಿ ಬ್ರಹ್ಮರಥೋತ್ಸವ

ವಿಕ ಸುದ್ದಿಲೋಕ ತಿ.ನರಸೀಪುರ

ತಾಲೂಕಿನ ಮಾದಾಪುರ ಗ್ರಾಮದಲ್ಲಿಶ್ರೀ ಮರುಡೇಶ್ವರಸ್ವಾಮಿ ಬ್ರಹ್ಮರಥೋತ್ಸವ ಬುಧವಾರ ಸಾವಿರಾರು ಭಕ್ತರ ಹರ್ಷೋದ್ಗಾರದ ನಡುವೆ ವಿಜೃಂಭಣೆಯಿಂದ ನಡೆಯಿತು.

ಶ್ರೀ ಮರುಡೇಶ್ವರಸ್ವಾಮಿ, ಶ್ರೀ ಸುಬ್ರಹ್ಮಣೇಶ್ವರ ಸ್ವಾಮಿ (ಮತ್ತಿತಾಳೇಶ್ವರ ಸ್ವಾಮಿ), ಶ್ರೀ ಗಣಪತಿ ರಥೋತ್ಸವ ನಡೆಯಿತು.

ದೇವಸ್ಥಾನದಲ್ಲಿಬೆಳಗ್ಗೆ ಮರುಡೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಶ್ರೀಗಂಧ ಅಲಂಕಾರದೊಂದಿಗೆ ಸಹಸ್ರನಾಮದೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೂರು ಉತ್ಸವ ಮೂರ್ತಿಗೆ ಅಲಂಕಾರ ಮಾಡಿ ಮಂಟಪೋತ್ಸವದೊಂದಿಗೆ ಮೆರವಣಿಗೆ ನಡೆಸಲಾಯಿತು.

ಮೂರು ರಥಗಳ ಸುತ್ತ ಪ್ರದಕ್ಷಿಣೆ ಹಾಕಿ ಮಹಾಮಂಗಳಾರತಿ ನೆರವೇರಿಸಲಾಯಿತು. ಮಧ್ಯಾಹ್ನ 1.50ಕ್ಕೆ ಉತ್ಸವ ಮೂರ್ತಿಗಳನ್ನು ಕೂರಿಸಲಾಯಿತು. 2.10ಕ್ಕೆ ರಥಕ್ಕೆ ಚಾಲನೆ ನೀಡಲಾಯಿತು.

ಭಕ್ತರು ಮೂರು ರಥಗಳನ್ನು ಎಳೆದು ಪುನೀತರಾದರು. ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಕೊಸಂಬರಿ ವಿತರಿಸಲಾಯಿತು.

ಮಾದಾಪುರ, ಮರಡಿಪುರ, ಚನ್ನಬಸಯ್ಯನಹುಂಡಿ, ನಿಲಸೋಗೆ, ಚೌಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದರು.

ಎಂವೈಎಸ್ 11 ಟಿಎನ್ ಪಿ1

ತಿ.ನರಸೀಪುರ ತಾಲೂಕು ಮಾದಾಪುರ ಬಳಿಯ ಮರುಡೇಶ್ವರಸ್ವಾಮಿ ಗಣಪತಿ ಹಾಗೂ ಸುಬ್ರಹ್ಮಣೇಶ್ವರ ರಥೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.