ಕೆಲ್ಲೂಪುರದಲ್ಲಿಮನೆ ಮುಂದೆ ಕೊಳಚೆ ನೀರು
* ಸಾರ್ವಜನಿಕರಲ್ಲಿಸಾಂಕ್ರಾಮಿಕ ರೋಗ ಭೀತಿ
ವಿಕ ಸುದ್ದಿಲೋಕ ನಂಜನಗೂಡು
ತಾಲೂಕಿನ ಕೆಲ್ಲೂಪುರದಲ್ಲಿಮನೆ ಮುಂಭಾಗದಲ್ಲಿಯೇ ಕೆಲ ತಿಂಗಳಿನಿಂದಲೂ ಕೊಳಚೆ ನೀರು ನಿಂತಿದ್ದು, ರಾಶಿ ರಾಶಿ ತ್ಯಾಜ್ಯ ಮನೆ ಮುಂದೆ ಸಂಗ್ರಹಗೊಂಡಿದೆ. ಇದರಿಂದ ಇಡೀ ಆವರಣವೇ ಗಬ್ಬೆದ್ದು ನಾರುತ್ತಿದ್ದು, ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಆತಂಕ ಎದುರಾಗಿದೆ.
ತಾಲೂಕಿನ ಹುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೆಲ್ಲೂಪುರ ಗ್ರಾಮದ ಹೊಸ ಬಡಾವಣೆಗೆ ಹೊಂದಿಕೊಂಡಂತಿರುವ ಅಂಕಶೆಟ್ಟಿ ಮತ್ತು ಲಿಂಗರಾಜಮ್ಮ ಎಂಬುವರ ವಾಸದ ಮನೆಯ ಮುಂಭಾಗದಲ್ಲಿಬಡಾವಣೆಯ ಮೇಲ್ಭಾಗದಿಂದ ಹರಿದು ಬರುವ ಚರಂಡಿ ನೀರು ಹಾಗೂ ಕಲ್ಮಶಯುಕ್ತ ತ್ಯಾಜ್ಯ ನೀರು ಸಂಗ್ರಹಗೊಂಡು ಇಡೀ ಆವರಣವೇ ಕೊಳಚೆ ಪ್ರದೇಶದಂತಾಗಿದೆ.
ಸಾಂಕ್ರಾಮಿಕ ರೋಗದ ಭೀತಿ:
ಇನ್ನು ಬಡಾವಣೆಯ ಕೊಳಚೆ ನೀರು ಸಂಪೂರ್ಣ ತಗ್ಗು ಪ್ರದೇಶಕ್ಕೆ ಹರಿದು ಮನೆ ಮುಂದೆ ಸಂಗ್ರಹಗೊಂಡಿದೆ. ಇದರಿಂದಾಗಿ ಇಡೀ ಪ್ರದೇಶ ಸೊಳ್ಳೆಗಳ ಆವಾಸ ಸ್ಥಾನವಾಗಿರುವುದಲ್ಲದೆ ಕೊಳಚೆ ನೀರು ಕೆರೆಯಂತಾಗಿ ದುರ್ನಾತ ಬೀರುತ್ತಿದೆ. ಹೀಗಾಗಿ ಕಲ್ಮಶ ನೀರು ಸಂಗ್ರಹಗೊಳ್ಳುವ ಪ್ರದೇಶದಲ್ಲಿವಾಸಿಸುವ ಜನರು ಆಗಾಗ ಜ್ವರ ಇನ್ನಿತರ ಬಾಧೆಗೊಳಗಾಗುತ್ತಿದ್ದು, ನಿತ್ಯ ಕೂಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿರುವ ನಿವಾಸಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರಲು ಪರದಾಡುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ಸಾಂಕ್ರಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಸ್ವಚ್ಛವಾಗದ ಚರಂಡಿಗಳು:
‘‘ಬಡಾವಣೆಯಲ್ಲಿಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಿದ್ದರೂ ಚರಂಡಿಯಲ್ಲಿಸಂಗ್ರಹವಾಗುವ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದಾಗಿ ಮಲೀನಯುಕ್ತ ಕೊಳಚೆ ನೀರು ಕೆಲ ಭಾಗಗಳಲ್ಲಿಒಂದೇ ಪ್ರದೇಶದಲ್ಲಿಸಂಗ್ರಹಗೊಂಡಿದ್ದು, ಕನಿಷ್ಠ ಪಕ್ಷ ಚರಂಡಿಯನ್ನಾದರೂ ಸ್ವಚ್ಛಗೊಳಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಮನೆಯ ಸುತ್ತ ಚರಂಡಿ ನೀರು ಸಂಗ್ರಹಗೊಂಡು ಮಣ್ಣಿನ ಗೋಡೆಯ ಮನೆಯ ತಳಪಾಯವೇ ಮುರಿದು ಬೀಳುವ ಆತಂಕ ಎದುರಾಗಿದೆ,’’ ಎನ್ನುತ್ತಾರೆ ನಿವಾಸಿಗಳು.
ಇನ್ನು ಚರಂಡಿಯಲ್ಲಿತೇಲಿ ಬರುವ ಕಲ್ಮಶಯುಕ್ತ ತ್ಯಾಜ್ಯ ಪದಾರ್ಥಗಳು ಹಾಗೂ ಪ್ಲಾಸ್ಟಿಕ್ ಇನ್ನಿತರ ವಸ್ತುಗಳು ರಸ್ತೆ ಬದಿಯಲ್ಲಿಸಂಗ್ರಹಗೊಂಡು ಗಾಳಿಗೆ ನಿವಾಸಿಗಳ ಮನೆಗೆ ತೂರಲ್ಪಡುತ್ತವೆ. ಮಳೆಗಾಲಕ್ಕೂ ಮುನ್ನವೇ ಕನಿಷ್ಠ ಚರಂಡಿಗಳನ್ನು ಸ್ವಚ್ಛಗೊಳಿಸಿ ಮನೆಗೆ ಮಲಿನ ನೀರು ನುಗ್ಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿಮಳೆಗಾಲದಲ್ಲಿಮನೆಯೇ ಮುರಿದು ಬೀಳುತ್ತದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಾರೆ.
ಕೋಟ್ ...
ಚರಂಡಿ ತ್ಯಾಜ್ಯದಿಂದ ನಮ್ಮ ಕುಟುಂಬದ ಜನರು ವಾರದಲ್ಲಿನಾಲ್ಕು ದಿನ ಕೆಮ್ಮು, ನೆಗಡಿ, ಜ್ವರದಿಂದ ಬಳಲುವಂತಾಗಿದೆ. ಕೂಲಿ ಮಾಡಿದ ಹಣವನ್ನೆಲ್ಲಮಾತ್ರೆ ಮತ್ತು ಔಷಧಗಳಿಗೆ ಖರ್ಚು ಮಾಡುತ್ತಿದ್ದೇವೆ. ಚರಂಡಿ ತ್ಯಾಜ್ಯದಿಂದ ನಮ್ಮ ಆರೋಗ್ಯ ಹದಗೆಟ್ಟಿದೆ. ಅಧಿಕಾರಿಗಳು ನಮ್ಮ ಸಂಕಷ್ಟವನ್ನು ತಪ್ಪಿಸಲು ಮುಂದಾಗಬೇಕು. ಇಲ್ಲವಾದಲ್ಲಿಕುಟುಂಬ ಸಮೇತ ಊರನ್ನೇ ತೊರೆಯಬೇಕಾಗುತ್ತದೆ.
-ಅಂಕಶೆಟ್ಟಿ, ಕೆಲ್ಲೂಪುರ ಗ್ರಾಮಸ್ಥ
ಚಿತ್ರ(ಎಂವೈಎಸ್ 10 ಎನ್ ಜಿಡಿ1-2ಧಿ3) ನಂಜನಗೂಡು ತಾಲೂಕಿನ ಕೆಲ್ಲೂಪುರ ಗ್ರಾಮದಲ್ಲಿತ್ಯಾಜ್ಯಯುಕ್ತ ಮಲೀನಗೊಂಡಿರುವ ಚರಂಡಿ ನೀರು ಲಿಂಗರಾಜಮ್ಮ ಎಂಬುವರ ಮನೆಯ ಮುಂದೆ ಸಂಗ್ರಹಗೊಂಡಿರುವುದು.

