ಅಡುಗೆ ಎಣ್ಣೆ ದರದಲ್ಲಿಏರಿಕೆ

Contributed bypunyavathi.hp@timesgroup.com|Vijaya Karnataka

ಅಡುಗೆ ಎಣ್ಣೆ ಬೆಲೆ ಏರಿಕೆ ಮತ್ತು ಅಡುಗೆ ಅನಿಲದ ಕೊರತೆಯಿಂದಾಗಿ ಕೆಲವು ಹೋಟೆಲ್‌ಗಳು ಮುಚ್ಚಲ್ಪಟ್ಟಿವೆ. ಇದರಿಂದ ತರಕಾರಿಗಳ ಬೇಡಿಕೆ ಕಡಿಮೆಯಾಗಿ, ಅವುಗಳ ಬೆಲೆ ಕುಸಿದಿದೆ. ಬೀನ್ಸ್, ಸೊಪ್ಪುಗಳು ಸೇರಿದಂತೆ ಬಹುತೇಕ ತರಕಾರಿಗಳು ಕೆ.ಜಿ.ಗೆ 50-60 ರೂಪಾಯಿ ಆಸುಪಾಸಿನಲ್ಲಿವೆ. ಮೊಟ್ಟೆ ದರವೂ ಕಡಿಮೆಯಾಗಿದ್ದು, ಗ್ರಾಹಕರಿಗೆ ಅನುಕೂಲವಾಗಿದೆ.

cooking oil price increase impact on hotels and vegetable prices

ಯುದ್ಧದ ಹಿನ್ನೆಲೆಯಲ್ಲಿಅಡುಗೆ ಅನಿಲದ ಕೊರತೆಯಿಂದ ಕೆಲವು ಹೋಟೆಲ್ ಗಳು ಮುಚ್ಚಲ್ಪಟ್ಟಿವೆ. ಇನ್ನೂ ಕೆಲವು ಹೋಟೆಲ್ ಗಳಲ್ಲಿಹೆಚ್ಚು ಅಡುಗೆ-ತಿಂಡಿ ಮಾಡುತ್ತಿಲ್ಲ. ಹೀಗಾಗಿ, ತರಕಾರಿಗಳ ಬಳಕೆ ಕಡಿಮೆಯಾಗಿದ್ದು, ಬೇಡಿಕೆಯಿಲ್ಲದಂತಾಗಿದೆ. ತರಕಾರಿಗಳು ದೊಡ್ಡ ಪ್ರಮಾಣದಲ್ಲಿಖರೀದಿಯಾಗುತ್ತಿಲ್ಲ. ಇದರಿಂದ ದರಗಳು ಇಳಿಕೆಯಾಗಿವೆ. ಬಹುತೇಕ ತರಕಾರಿಗಳು ಕೆ.ಜಿ.ಗೆ 50-60 ರೂ. ಆಸುಪಾಸಿನಲ್ಲಿವೆ. ಈ ಹಿಂದೆ 100 ರೂ.ವರೆಗೆ ಏರಿಕೆಯಾಗಿದ್ದ ಬೀನ್ಸ್ ದರ ಕೂಡ 60 ರೂ.ಗೆ ಇಳಿದಿದೆ. ಬಹುತೇಕ ಸೊಪ್ಪುಗಳ ಬೆಲೆಯೂ ಕಡಿಮೆಯಾಗಿವೆ. ಮೊಟ್ಟೆ ದರ ಕಡಿಮೆಯಾಗಿದ್ದು, ಒಂದಕ್ಕೆ 6 ರಿಂದ 6.50 ರೂ. ಮಾರಾಟವಾಗುತ್ತಿದೆ. ಕೆಲವೆಡೆ 7 ರೂ. ಇದೆ. ಸಗಟು ದರದಲ್ಲಿಒಂದು ಮೊಟ್ಟೆಗೆ 4.90 ರೂ. ಗೆ ಇಳಿಕೆಯಾಗಿದೆ. ಆದರೆ, ಚಿಲ್ಲರೆ ಮಾರಾಟಗಾರರು ಕೆಲವೆಡೆ ಅದನ್ನು ಲೆಕ್ಕಿಸದೆ 7 ರೂ.ಗೆ ಮಾರುತ್ತಿರುವುದು ಗ್ರಾಹಕರಿಗೆ ಹೊರೆಯಾಗಿದೆ.