ಶಾಲೆಗೆ ತಡವಾಗಿ ಬಂದ ವಿಧಿದ್ಯಾರ್ಥಿಗೆ ಬಿಸಿಲಲ್ಲಿನಿಲ್ಲಿಸಿ ಶಿಕ್ಷೆ

Contributed bydjtrupti@gmail.com|Vijaya Karnataka

ಯಲಹಂಕದ ಖಾಸಗಿ ಶಾಲೆಯೊಂದರಲ್ಲಿ 1ನೇ ತರಗತಿ ವಿದ್ಯಾರ್ಥಿಗೆ ತಡವಾಗಿ ಬಂದಿದ್ದಕ್ಕೆ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಬಾಲನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪೋಷಕರು ಪ್ರಶ್ನಿಸಿದಾಗ ಪ್ರಾಂಶುಪಾಲರು ಸರಿಯಾದ ಉತ್ತರ ನೀಡಿಲ್ಲ. ಸಾರ್ವಜನಿಕರ ವಿರೋಧ ವ್ಯಕ್ತವಾಗಿದೆ. ಪೊಲೀಸರು ವಿಡಿಯೋ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.

is life safe or punishment the story of a child punished in the sun at school

ವಿಕ ಸುದ್ದಿಲೋಕ ಬೆಂಗಳೂರು

ಶಾಲೆಗೆ ತಡವಾಗಿ ಬಂದ 1 ನೇ ತರಗತಿ ವಿದ್ಯಾರ್ಥಿಯನ್ನು ಎರಡು ಗಂಟೆಗಳ ಕಾಲ ಬಿಸಿಲಲ್ಲಿನಿಲ್ಲಿಸಿ ಶಿಕ್ಷೆ ವಿಧಿಸಿದ ಖಾಸಗಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಯಲಹಂಕ ನ್ಯೂಟೌನ್ ಠಾಣೆಯಲ್ಲಿಎನ್ .ಸಿ.ಆರ್ . ದಾಖಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿಹರಿದಾಡಿದ ವಿಡಿಯೋ ಆಧರಿಸಿ ಬಾಲನ್ಯಾಯ ಕಾಯಿಧಿದೆ-2015 (ಮಕ್ಕಳ ಆರೈಕೆ ಮತ್ತು ರಕ್ಷಣೆ) ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಯಲಹಂಕದ ಅಟ್ಟೂರು ಲೇಔಟ್ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿಆರು ವರ್ಷದ ಬಾಲಕನನ್ನು ಬಿಸಿಲಿನಲ್ಲಿನಿಲ್ಲಿಸಿ ಶಿಕ್ಷೆ ವಿಧಿಸಿದ್ದ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮಗುವಿನ ಪೋಷಕರು ಪ್ರಾಂಶುಪಾಲರನ್ನು ಪ್ರಶ್ನಿಸಿದ್ದಾಗ ಅಸಮಂಜಸ ಹಾಗೂ ಬೇಜವಾಬ್ದಾರಿ ಉತ್ತರ ನೀಡಿದ್ದ ಆರೋಪ ಕೇಳಿ ಬಂದಿತ್ತು.

ಶಾಲಾ ಆಡಳಿತ ಮಂಡಳಿಯ ನಡೆಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ವಿಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಾರ್ವಜನಿಕರು ದೌರ್ಜನ್ಯಕ್ಕೆ ಒಳಗಾದ ಬಾಲಕನ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಇಂತಹ ಘಟನೆಗಳು ನಡೆದಾಗ ದೂರು ನೀಡಲು ಹಿಂದೇಟು ಹಾಕಬೇಡಿ ಎಂದು ಸಲಹೆ ನೀಡಿದ್ದಾರೆ.