ನಿತ್ಯದರ್ಶಿ 16 ಮಾರ್ಚ್ 2026
ಶ್ರೀಪತಿ ಭಟ್ | ಬೆಂಗಳೂರು
---------
ಮೇಷ: ಪ್ರಭಾವಿ ವ್ಯಕ್ತಿಗಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕಾಗಬಹುದು. ಕಾರ್ಯನಿಮಿತ್ತವಾಗಿ ಅತ್ತೆ-ಸೊಸೆಯಲ್ಲಿಭಿನ್ನಾಭಿಪ್ರಾಯ ತೋರಿ ಬಂದರೂ ತಾಳ್ಮೆ ಇರಲಿ. ತಂತ್ರಜ್ಞಾನ ವಿಚಾರದಲ್ಲಿಸಿದ್ಧಹಸ್ತರಾಗುವಿರಿ.
(ಶುಭ ಸಂಖ್ಯೆ: 2)
-------
ವೃಷಭ: ವಾಹನ ಚಾಲನೆ ಅಥವಾ ಕಬ್ಬಿಣದ ಕೆಲಸ ಮಾಡುವವರು ಕಾಳಜಿ ವಹಿಸಿ. ಔಷಧಿ ವ್ಯಾಪಾರಿಗಳಿಗೆ ಇಂದು ಅಧಿಕ ಲಾಭ ಉಂಟಾಗುವುದು. ದಾಂಪತ್ಯದಲ್ಲಿಯಾವುದೇ ರೀತಿಯ ಬಿರುಕು ಬರದಂತೆ ನೋಡಿಕೊಳ್ಳಿ.
(ಶುಭ ಸಂಖ್ಯೆ : 9)
--------
ಮಿಥುನ: ನಿಮ್ಮ ರಚನಾತ್ಮಕ ಕಾರ್ಯಕ್ರಮಗಳ ಕುರಿತು ದೂರದರ್ಶನ ಮಾಧ್ಯಮದವರಿಂದ ಮೆಚ್ಚುಗೆಯ ಮಾತುಗಳನ್ನು ಕೇಳಲಿದ್ದೀರಿ. ಸಿದ್ಧ ಉಡುಪು ತಯಾರಿಕರಿಗೆ ಹಾಗೂ ಮಾರಾಟಗಾರರಿಗೆ ವಿಶೇಷ ಲಾಭ ಬರುವುದು.
(ಶುಭ ಸಂಖ್ಯೆ : 4)
-------
ಕರ್ಕ: ಅತಿಯಾದ ಉತ್ಸಾಹದಿಂದ ಜೀವನದಲ್ಲಿಹೊಸ ತಿರುವುವೊಂದನ್ನು ಪಡೆದುಕೊಳ್ಳುವವಿರಿ. ದೂರದ ಸಂಚಾರ ತೋರಿ ಬಂದರೂ ಮುಂದೂಡಿಕೆ ಅನಿವಾರ್ಯವಾಗುವುದು. ಕ್ರೀಡಾಪಟುಗಳಿಗೆ ಅದೃಷ್ಟದ ಜಯ ಸಿಗಲಿದೆ.
(ಶುಭ ಸಂಖ್ಯೆ : 1)
----------
ಸಿಂಹ: ಅನಿವಾರ್ಯತೆಗಳಿಲ್ಲದೆ ಕೇವಲ ಹಿರಿಮೆಗಾಗಿ ವಿಲಾಸೀ ವಸ್ತುಗಳನ್ನು ಖರೀದಿಸುವಿರಿ. ಕಟ್ಟಡದ ಕಂಟ್ರಾಕ್ಟರುಗಳಿಗೆ ಕೆಲಸಗಾರರ ಕೊರತೆ ಕಾಣಲಿದೆ ಅಥವಾ ಪರಿಣಿತ ಕೆಲಸಗಾರರ ಗೈರುಹಾಜರಿಯಿಂದ ನಷ್ಟ ಸಂಭವಿಸುವುದು.
(ಶುಭ ಸಂಖ್ಯೆ : 3)
-------
ಕನ್ಯಾ: ನೀವು ಇರುವ ಜಾಗದಲ್ಲಿತೊಂದರೆ ಕಾಣಿಸಿಕೊಳ್ಳಲಿದೆ. ಕೂಡಲೇ ಬಗೆಹರಿಸಿಕೊಳ್ಳಿ. ನಿಮ್ಮ ಸೋಮಾರಿತನವೇ ನಿಮ್ಮ ಶತ್ರುವಾಗಿ ಪರಿಣಾಮ ಬೀರುವುದು. ಸಾಲದ ಹಣ ಈ ದಿನ ಹಿಂದಿರುಗಿ ಬರುವುದು.
(ಶುಭ ಸಂಖ್ಯೆ: 8)
-------
ತುಲಾ: ನಿಮ್ಮ ಮಾತ-ಪಿತೃಗಳ ಆಶೀರ್ವಾದದಿಂದ ಕೆಲಸಕಾರ್ಯಗಳಲ್ಲಿಜಯ ಪಡೆಯುವಿರಿ. ಸಂಘ-ಸಂಸ್ಥೆಯಲ್ಲಿನಿಮ್ಮ ಪ್ರಾಮುಖ್ಯತೆ ಮತ್ತು ಜವಾಬ್ದಾರಿಯೂ ಹೆಚ್ಚಲಿದೆ. ಸಿದ್ಧ ಉಡುಪು ಮಾರಾಟಗಾರರಿಗೆ ಶುಭದಿನ.
(ಶುಭ ಸಂಖ್ಯೆ : 6)
------------
ವೃಶ್ಚಿಕ: ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾನೂನು ವಿಷಯದಲ್ಲಿಹೆಚ್ಚಿನ ಸಲಹೆ ಪಡೆದುಕೊಳ್ಳುವುದು ಅನಿವಾರ್ಯವಾಗಲಿದೆ. ಇತರರ ಅನುಮಾನಕ್ಕೆ ಎಡೆ ಮಾಡಿಕೊಡುವಂತಹ ಕೆಲಸಗಳು ನಿಮ್ಮಿಂದ ನಡೆಯಲಿವೆ.
(ಶುಭ ಸಂಖ್ಯೆ : 7)
--------
ಧನು: ಧಾರ್ಮಿಕ ಕಾರ್ಯದಲ್ಲಿಭಾಗವಹಿಸುವಿಕೆಯಿಂದ ಮಾನಸಿಕ ಶಾಂತಿ ಹೆಚ್ಚಾಗಲಿದೆ. ವೈಯಕ್ತಿಕ ಸಮಸ್ಯೆ ಬಗೆಹರಿದು ನೆಮ್ಮದಿ ಸಿಗಲಿದೆ. ಎಲ್ಲರನ್ನೂ ಗೌರವಯುತವಾಗಿ ನೋಡಿ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಸಿಗುತ್ತದೆ.
(ಶುಭ ಸಂಖ್ಯೆ : 5)
---------
ಮಕರ: ಸ್ನೇಹಿತರಲ್ಲಿಅಥವಾ ಸಂಬಂಧಿಕರಲ್ಲಿಅವರ ವೈಯಕ್ತಿಕ ವಿಚಾರವನ್ನು ಅನಗತ್ಯವಾಗಿ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು. ಈ ದಿನ ಹಂತ ಹಂತವಾಗಿ ಪ್ರಗತಿ ಪ್ರಾಪ್ತಿಯಾಗುವುದು.
(ಶುಭ ಸಂಖ್ಯೆ :9)
-----
ಕುಂಭ: ನಿಯಮವನ್ನು ಬದಿಗಿಟ್ಟು ಸಮಯಕ್ಕೆ ಸರಿಯಾಗಿ ವರ್ತಿಸುವ ಅನಿವಾರ್ಯತೆ ಎದುರಾಗುವುದು. ಬಹುಕಾಲಿಕ ಯೋಜನೆಗಳು ಅರ್ಧದಲ್ಲಿನಿಲ್ಲುವ ಲಕ್ಷಣಗಳಿವೆ. ವಿರೋಧಿಗಳು ನಿಮ್ಮನ್ನು ಏನೂ ಮಾಡಲಾರರು.
(ಶುಭ ಸಂಖ್ಯೆ : 2)
----------
ಮೀನ: ನೃತ್ಯ ಮತ್ತು ಅಭಿನಯ ಕಲಿಯಲು ಆಸಕ್ತಿ ಉಂಟಾಗುವುದು ಹಾಗೂ ಹೆಸರು ಸಂಪಾದಿಸಬಹುದು. ಸಾಮಾಜಿಕ ಬದುಕಿನಲ್ಲಿಗೌರವಯುತವಾಗಿ ವರ್ತಿಸಿ. ಸಿಹಿ ತಿಂಡಿಗಳ ತಯಾರಕರಿಗೆ ಬೇಡಿಕೆ ಹೆಚ್ಚುವುದು.
(ಶುಭ ಸಂಖ್ಯೆ : 1)

