ವನಿತಾ ಅಶೋಕ್ 16 ನ್ಯೂ

Contributed bynetravati.krishnamurthy@timesgroup.com|Vijaya Karnataka

ಮಧುಮೇಹ ನಿಯಂತ್ರಣಕ್ಕೆ ವ್ಯಾಯಾಮ ಅತ್ಯಗತ್ಯ. ಮಧ್ಯಮ ತೀವ್ರತೆಯ ಏರೋಬಿಕ್ ವ್ಯಾಯಾಮ ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ ಮಾಡುತ್ತದೆ. ಇದು ರಕ್ತದ ಸಕ್ಕರೆ ಮಟ್ಟ ಇಳಿಸಿ, ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸುತ್ತದೆ. ವೇಟ್ ಟ್ರೈನಿಂಗ್ ಸ್ನಾಯು ಬಲಪಡಿಸಿ, ಕೊಬ್ಬು ಕಡಿಮೆ ಮಾಡುತ್ತದೆ. ಮಧುಮೇಹಿಗಳು ವ್ಯಾಯಾಮದ ಮೊದಲು ವೈದ್ಯರ ಸಲಹೆ ಪಡೆಯಬೇಕು. ವಾರಕ್ಕೆ 150 ನಿಮಿಷ ವ್ಯಾಯಾಮ ಮಾಡುವುದು ಉತ್ತಮ.

moderate intensity exercises encourage diabetes control

ವ್ಯಾಯಾಮದ ಮೂಲಕ ಮಧುಮೇಹ ನಿಯಂತ್ರಿಸಿ

ಮಧ್ಯಮ ತೀವ್ರತೆಯ ಏರೋಬಿಕ್ ವ್ಯಾಯಾಮವು ಟೈಪ್ 2 ಡಯಾಬಿಟಿಸ್ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ. ಮಧುಮೇಹ ಇರುವವರಿಗೆ ವ್ಯಾಯಾಮದಿಂದ ತುಂಬಾ ಒಳ್ಳೆಯ ಪ್ರಯೋಜನಗಳಿವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಮತ್ತು ಹೃದಯವನ್ನು ಬಲಪಡಿಸುತ್ತದೆ. ವೇಟ್ ಟ್ರೈನಿಂಗ್ ಮಾಡುವುದರಿಂದ ಸ್ನಾಯುಗಳು ಹೆಚ್ಚಾಗುತ್ತವೆ ಮತ್ತು ಕೊಬ್ಬು ಕಡಿಮೆಯಾಗುತ್ತದೆ. ಹೊಸ ವ್ಯಾಯಾಮ ಆರಂಭಿಸುವ ಮೊದಲು ಮಧುಮೇಹಿಗಳು ಕಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೃದಯ ಸಂಬಂಧಿತ ಅಪಾಯಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸಬೇಕು ಮತ್ತು ಕಾಲುಗಳಿಗೆ ಉತ್ತಮ ಶೂಗಳನ್ನು ಧರಿಸಬೇಕು. ಟೈಪ್ 1 ಡಯಾಬಿಟಿಸ್ ಇರುವವರಿಗೆ ವಾಕಿಂಗ್ , ಈಜು, ಸೈಕ್ಲಿಂಗ್ ಮುಂತಾದ ಕಾರ್ಡಿಯೋ ವ್ಯಾಯಾಮಗಳು ತುಂಬಾ ಒಳ್ಳೆಯದು.

ರಕ್ತದ ಸಕ್ಕರೆ ನಿಯಂತ್ರಣಕ್ಕಾಗಿ ಪ್ರತಿ ವಾರ ಕನಿಷ್ಠ 150 ನಿಮಿಷಗಳ ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆ ಮಾಡಿ. ವ್ಯಾಯಾಮವನ್ನು ಎಂದಿಗೂ ಬಿಡಬೇಡಿ. ವೇಟ್ ಟ್ರೈನಿಂಗ್ (ಸ್ನಾಯು ಬಲಪಡಿಸುವ ವ್ಯಾಯಾಮ)ಇದನ್ನು ಸಾಧ್ಯವಿದ್ದರೆ ಪ್ರತಿ ವಾರ 3 ಬಾರಿ ಮಾಡಿ. ಇದಕ್ಕಾಗಿ ನೀವು 8-10 ಬಾರಿ ಮಾತ್ರ ಎತ್ತಬಹುದಾದ ತೂಕವನ್ನು ಬಳಸಿ.