4175 ಹೆಕ್ಟೇರ್
2024-25ನೇ ಸಾಲಿನಲ್ಲಿಬಿತ್ತನೆಯಾದ ಜೋಳ
3285 ಹೆಕ್ಟೇರ್
2025-2ನೇ ಸಾಲಿನಲ್ಲಿಬಿತ್ತನೆಯಾದ ಜೋಳ
ರೋಗವಿಲ್ಲದೆ ಹುಲುಸಗಿ ಬೆಳೆದ ಬೆಳೆ | ಹೆಚ್ಚು ಇಳುವರಿ , ಅತಿ ಹೆಚ್ಚು ದರ ನಿರೀಕ್ಷೆಯಲ್ಲಿರೈತರು
ಭರವಸೆ ಬಿತ್ತಿದ ಬಿಳಿಜೋಳ ಬೆಳೆ
ಎಂ.ಎಸ್ . ಶಾಸ್ತ್ರೀಹೊಳೆಮಠ್ ನ್ಯಾಮತಿ
dvಜಛಿdಜಿಠಿಟ್ಟಃಜಞaಜ್ಝಿ.್ಚಟಞ
ಈ ಬಾರಿ ಹಿಂಗಾರು ಹಂಗಾಮಿನಲ್ಲಿಬಿತ್ತನೆ ಮಾಡಿರುವ ಬಿಳಿ ಜೋಳ ಬೆಳೆ , ನ್ಯಾಮತಿ ಸೇರಿ ದಾವಣಗೆರೆ ಜಿಲ್ಲೆಯ ರೈತರ ಕೈಹಿಡಿದಿದೆ. ಜಿಲ್ಲಾದ್ಯಂತ ಈ ಬಾರಿ ಹಿಂಗಾರು ಹಂಗಾಮಿನಲ್ಲಿ3285 ಹೆಕ್ಟೇರ್ ಪ್ರದೇಶದಲ್ಲಿಜೋಳ ಬಿತ್ತನೆ ಮಾಡಿದ್ದು, ಉತ್ತಮ ಇಳುವರಿ ಹಾಗೂ ಹೆಚ್ಚು ಬೆಲೆ ಸಿಗುವ ಭರವಸೆ ಮೂಡಿದೆ.
ಜಿಲ್ಲೆಯಲ್ಲಿಹಿಂಗಾರು ಹಂಗಾಮು ಅವಧಿಯಲ್ಲಿಹೆಚ್ಚಾಗಿ ಜೋಳ ಬೆಳೆಯಲಾಗುತ್ತದೆ. ಈ ಬಾರಿ ಬಿತ್ತನೆ ಮಾಡಿದ ಆರಂಭದಲ್ಲಿಜೋಳ ಬೆಳೆಗೆ ತೇವಾಂಶದ ಕೊರತೆ ಕಾಣಿಸಿಕೊಂಡರೂ, ಪೈರು ಯಾವುದೇ ರೋಗವಿಲ್ಲದೆ ಆರೋಗ್ಯದಿದೆ. ಪ್ರಸ್ತುತ ಜೋಳ ಕಟಾವು ಹಂತ ತಪುಲಿದ್ದು, ರೈತರು ಹೆಚ್ಚು ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
ಜಿಲ್ಲೆಯಲ್ಲಿಬಿಳಿ ಜೋಳ ಬೆಳೆ ಕಾಟಾವಿಗೆ ಬಂದಿರುವುದು ಒಂದೆಡೆ ರೈತರ ಮುಖದಲ್ಲಿಮಂದಹಾಸ ಮೂಡಿಸಿದೆ. ಇನ್ನೊಂದೆಡೆ, ಜಾನುವಾರುಗಳಿಗೆ ಮೇವು ಕೂಡ ಸಿಗುತ್ತಿರುವುದರಿಂದ ಬೇಸಿಗೆಯಲ್ಲಿಮೇವಿನ ಸಮಸ್ಯೆ ತಕ್ಕಮಟ್ಟಿಗೆ ನಿವಾರಣೆ ಆದಂತಾಗಿದೆ.
ನ್ಯಾಮತಿ ತಾಲೂಕಿನಲ್ಲಿಜಿಲ್ಲೆಯಲ್ಲೇ ಹೆಚ್ಚು ಜೋಳ, ಅದರಲ್ಲೂಬಿಳಿಜೋಳ ಹೆಚ್ಚು ಬೆಳೆಯಲಾಗುತ್ತದೆ. ಈ ಹಿಂದೆ ಮುಂಗಾರು ಹಂಗಾಮಿನಲ್ಲಿಕಪ್ಪು ಭೂಮಿಯಲ್ಲಿಜೋಳ, ಹುರುಳಿ, ಕಡಲೆ, ಅಲಸಂದಿ, ಹೆಸರು, ಶೇಂಗಾ ಬೆಳೆದಿದ್ದ ರೈತರು, ಹಿಂಗಾರು ಹಂಗಾಮಿನಲ್ಲಿಬಿಳಿ ಜೋಳ ಬಿತ್ತನೆ ಮಾಡಿದ್ದಾರೆ. ಹರಿಹರ, ಚನ್ನಗಿರಿ ಹಾಗೂ ಜಗಳೂರು ತಾಲೂಕುಗಳ ರೈತರು ಈ ಬಾರಿ ಜೋಳ ಬೆಳೆದಿದ್ದಾರೆ. ಅದರಲ್ಲೂತುಂಗಭದ್ರಾ ಹೊಳೆ ಸಾಲಿನಲ್ಲಿ, ಹಾವೇರಿ ಜಿಲ್ಲೆಯ ಗಡಿ ಭಾಗದ ಹೊಲಗಳಲ್ಲಿಜೋಳದ ತೆನೆಗಳು ರಾರಾಜಿಸುತ್ತಿವೆ.
ಮೇವು ದಾಸ್ತಾನು ಇಲ್ಲದ ರೈತರಿಗೆ ಈ ಬಾರಿ ಉತ್ತಮವಾಗಿ ಬಂದಿರುವ ಜೋಳದ ಬೆಳೆ ವರವಾಗಿದೆ. ಆರೋಗ್ಯಕರವಾಗಿ ಬೆಳೆದಿರುವ ಜೋಳದ ಸೊಪ್ಪೆ, ಜಾನುವಾರುಗಳ ಒಣ ಮೇವಿನ ಸಮಸ್ಯೆ ನಿವಾರಿಸುತ್ತಿದೆ. ಇದರೊಂದಿಗೆ ಜಾನುವಾರುಗಳ ಮೇವಿಗಾಗಿಯೇ ಜೋಳ ಬೆಳೆಯಲಾಗಿದೆ. ನ್ಯಾಮತಿ ತಾಲೂಕು ಒಂದರಲ್ಲೇ ಸುಮಾರು 1 ಸಾವಿರ ಟನ್ ನಷ್ಟು ಜೋಳದ ಮೇವು ಉತ್ಪಾದನೆಯಾಗುತ್ತಿದ್ದು, ಮುಂದಿನ ಏಳೆಂಟು ತಿಂಗಳ ಕಾಲ ಈ ಭಾಗದ ಜಾನುವಾರುಗಳಿಗೆ ಮೇವಿನ ಕೊರತೆ ಕಾಡುವುದಿಲ್ಲಎನ್ನುತ್ತಾರೆ ರೈತರು.
--
ಕಡಿಮೆ ಖರ್ಚಿನ ಬೆಳೆ ಜೋಳ
ಜೋಳಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲ. ಬಿತ್ತನೆ ಮಾಡಿದ ನಂತರ ಒಂದು ತಿಂಗಳಲ್ಲಿಉತ್ತಮ ಮಳೆ ಬಂದರೆ ಸಾಕು. ನಂತರ ಚಳಿ, ಇಬ್ಬನಿಯನ್ನೇ ಉಂಡು ಜೋಳದ ಪೈರು ಬೆಳೆದು ನಿಲ್ಲುತ್ತದೆ. ಜೋಳ ಅತಿ ಕಡಿಮೆ ವೆಚ್ಚವನ್ನು ಬಯಸುವ ಬೆಳೆ. ಜಿಲ್ಲೆಯಲ್ಲಿಜೋಳದ ರೊಟ್ಟಿ ಪ್ರಮುಖ ಆಹಾರವಾಗಿರುವ ಕಾರಣ, ಜೋಳಕ್ಕೆ ಹೆಚ್ಚು ಬಢಿಕೆಯಿದೆ. ಬೆಳೆ ಕಟಾವಾದ ಬಳಿಕ ಜಾನುವಾರುಗಳಿಗೆ ಮೇವು ಕೂಡ ದೊರೆಯುತ್ತದೆ ಎನ್ನುತ್ತಾರೆ ನ್ಯಾಮತಿ ರೈತ ಕರಿಬಸಪ್ಪ.
--
ಕೋಟ್ ..
ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಿಳಿ ಜೋಳ ಬೆಳೆ ರೈತರ ಕೈಹಿಡಿದಿದೆ. ಪ್ರತಿ ಎಕರೆಗೆ ಕನಿಷ್ಠ 8 ಕ್ವಿಂಟಲ್ ಇಳುವರಿ ನಿರೀಕ್ಷೆಯಿದೆ. ಕ್ವಿಂಟಾಲ್ ಗೆ 4 ಸಾವಿರ ರೂ. ಬೆಲೆ ಸಿಕ್ಕರೆ ರೈತರಿಗೆ ಅನುಕೂಲವಾಗುತ್ತದೆ ಫಸಲು ಮಾರುಕಟ್ಟೆಗೆ ಬಂದಾಗ ಬೆಲೆ ಕುಸಿಯದಿದ್ದರೆ ಸಾಕು.
-ಜಿ.ಎಚ್ .ಪರಮೇಶ್ವರಪ್ಪ, ಮಲ್ಲಿಗೆನಹಳ್ಳಿ ರೈತ.
-----
ನ್ಯಾಮತಿ ಭಾಗದಲ್ಲಿಹೆಚ್ಚು ಪ್ರದೇಶದಲ್ಲಿಜೋಳ ಬಿತ್ತನೆಯಾಗಿದ್ದು, ಯಾವುದೇ ರೋಗ ಬಾಧೆಯಿಲ್ಲದೆ ಬೆಳೆ ಸಮೃದ್ಧವಾಗಿದೆ. ಹಿಂಗಾರಿನಲ್ಲಿಬಿತ್ತನೆ ಮಾಡಿರುವ ಬಿಳಿ ಜೋಳ ಈಗ ಕಟಾವಿಗೆ ಬಂದಿದ್ದು, ಎಕರೆಗೆ 8ರಿಂದ 10 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆಯಿದೆ.
-ಡಿ.ಕೆ. ಮಂಜುನಾಥ್ , ಕೃಷಿ ಅಧಿಕಾರಿ, ನ್ಯಾಮತಿ ರೈತ ಸಂಪರ್ಕ ಕೇಂದ್ರ.
--
ಬಿಳಿಜೋಳ ಮಾರುಕಟ್ಟೆ ದರ
ಮಾರುಕಟ್ಟೆ ಕನಿಷ್ಠ ಗರಿಷ್ಠ
ಬಸವಕಲ್ಯಾಣ 3700 ರೂ. 4371 ರೂ.
ಬೆಂಗಳೂರು 3200 ರೂ. 3800 ರೂ.
ಹುಬ್ಬಳ್ಳಿ 2001 ರೂ. 4201 ರೂ.
ಬಳ್ಳಾರಿ 2511 ರೂ. 3015 ರೂ.
ದಾವಣಗೆರೆ (ಸ್ಥಳೀಯ) 2523 ರೂ. 2767 ರೂ.
---
13ಎನ್ ಎಂಟಿ1
ಹಿಂಗಾರು ಹಂಗಾಮಿನಲ್ಲಿಬಿತ್ತನೆ ಮಾಡಲಾಗಿರುವ ನ್ಯಾಮತಿ ಪಟ್ಟಣದ ಹೊರವಲಯದಲ್ಲಿರುವ ಬೆಳೆ ಕಟಾವಿಗೆ ಸಿದ್ಧಗೊಂಡಿರುವ ಬಿಳಿ ಜೋಳ.

