ಸಿಪಿಎಂ ಸ್ಥಳೀಯ ನಾಯಕರಿಂದ ವಿರೋಧ
ಕಾಸರಗೋಡು: ಜಿಲ್ಲೆಯ ಕಾರಡ್ಕ ಪಂಚಾಯಿತಿಯ ನಾರ್ಲತ್ ನಲ್ಲಿಕೇರಳ ಸರಕಾರ ಪ್ರಾರಂಭಿಸಲು ಮುಂದಾಗಿರುವ ಬಾಕ್ಸೈಟ್ ಗಣಿಗಾರಿಕೆಯನ್ನು ಸಿಪಿಎಂ ಸ್ಥಳೀಯ ನೇತಾರರು ವಿರೋಧಿಸಿದ್ದಾರೆ. ಈ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸಿಪಿಎಂ ಕಾರಡ್ಕ ಸಿಪಿಎಂ ಸ್ಥಳೀಯ ಸಮಿತಿ ಒತ್ತಾಯಿಸಿದೆ. ಗಣಿಗಾರಿಕೆ ಕೈ ಬಿಡುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಿಪಿಎಂ ಕಾರಡ್ಕ ಸ್ಥಳೀಯ ಕಾರ ್ಯದರ್ಶಿ ಕೆ.ಜಯನ್ ತಿಳಿಸಿದ್ದಾರೆ.
ಗಣಿಗಾರಿಕೆಗೆ ಗುರುತಿಸಿದ ಹೆಚ್ಚಿನ ಭೂಮಿ ಸಂರಕ್ಷಿತ ಅರಣ್ಯ ಭೂಮಿಯಾಗಿದೆ. ಇದು ವಸತಿ ಪ್ರದೇಶಗಳಿಂದ ಕೂಡಿದೆ. ವಸತಿ ಪ್ರದೇಶಗಳು ಮತ್ತು ಮಣ್ಣಿನ ಪ್ರದೇಶಗಳನ್ನು ಹೊರತುಪಡಿಸಿ, 82.15 ಹೆಕ್ಟೇರ್ ಭೂಮಿಯನ್ನು ಗಣಿಗಾರಿಕೆಗೆ ಗುರುತಿಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯು 2017ರಲ್ಲಿಯೋಜನೆಯನ್ನು ಕೈಬಿಡಲು ನಿರ್ಧರಿಸಲಾಗಿತ್ತು. ಒಂದು ವರ್ಷದ ಹಿಂದೆ ಸರಕಾರ ತನ್ನ ನಿಲುವನ್ನು ಬದಲಾಯಿಸಿದ ನಂತರ ಗಣಿಗಾರಿಕೆ ಕ್ರಮ ಮತ್ತೆ ಸಕ್ರಿಯವಾಗಿದೆ. ಮಣ್ಣು ಅಗೆಯುವುದು ಮತ್ತು ಪರಿಶೀಲನೆ ಸೇರಿದಂತೆ ಸಮೀಕ್ಷೆ ಮತ್ತು ಕಾರ ್ಯ ವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಟೆಂಡರ್ ಆಹ್ವಾನಿಸಲಾಗಿದೆ. ಅದೇ ರೀತಿ, 2007ರಲ್ಲಿ, ಕಿನನೂರು ಕರಿಂದಳಂ ಪಂಚಾಯಿತಿಯ 200 ಎಕರೆ ಭೂಮಿಯನ್ನು ಗಣಿಗಾರಿಕೆಗಾಗಿ ಮುಂಬಯಿ ಮೂಲದ ಆಶಾಪುರ ಕಂಪನಿಗೆ ಹಸ್ತಾಂತರಿಸಲಾಯಿತು, ಆದರೆ ವಿರೋಧದಿಂದಾಗಿ ಯೋಜನೆಯನ್ನು ಕೈಬಿಡಬೇಕಾಯಿತು.
ಈ ಬಗ್ಗೆ ಕಾರಡ್ಕ ಲೋಕಲ್ ಕಮಿಟಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಸಿಪಿಐಎಂ ಜಿಲ್ಲಾಸಮಿತಿ ಸದಸ್ಯ ಎಂ. ಮಾಧವನ್ ಉದ್ಘಾಟಿಸಿದರು. ಈ ಪ್ರದೇಶದ ನೂರಾರು ಸಿಪಿಎಂ ಕಾರ ್ಯಕರ್ತರು ಭಾಗವಹಿಸಿದ್ದರು.
ಚಿತ್ರ:15ಕೆಎಸ್ ಕಾರಡ್ಕ- ಕಲೆಕ್ಟರೇಟ್ ಧರಣಿ ನಡೆಯಿತು.

