ವಿಕ ಸುದ್ದಿಲೋಕ ಹಾವೇರಿ
ಮನೆಯಲ್ಲಿಕುಟುಂಬದ ಜವಾಬ್ದಾರಿ ಹೊತ್ತಿರುವ ಮಹಿಳೆ, ಶಿಕ್ಷಣ ಎಂಬ ವಿದ್ಯೆ ಪಡೆದು ಜಗತ್ತಿನ ಎಲ್ಲಕ್ಷೇತ್ರದಲ್ಲೂಮುಂಚೂಣಿಯಲ್ಲಿದ್ದಾಳೆ. ಹಾಗಾಗಿ ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದಲ್ಲಿಉತ್ತಮ ಮಾದರಿ ವ್ಯಕ್ತಿಗಳನ್ನಾಗಿಸಬೇಕು ಎಂದು ಮಾಜಿ ಶಾಸಕ ನೆಹರು ಓಲೇಕಾರ ತಿಳಿಸಿದರು.
ಮಾನವ ಬಂಧುತ್ವ ವೇದಿಕೆ ಹಾಗೂ ಮಹಿಳಾ ಬಂಧುತ್ವ ವೇದಿಕೆ ಜಿಲ್ಲಾಘಟಕದಿಂದ ಸೋಮವಾರ ನಗರದ ವಿದ್ಯಾನಗರ 2ನೇ ಕ್ರಾಸ್ ನಲ್ಲಿಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಡುಗೆ ಮನೆಗೆ ಸೀಮಿತವಾಗಿದ್ದ ಹೆಣ್ಣುಮಗಳು ಇಂದು ಜಗತ್ತಿನ ಪ್ರತಿ ವಲಯದಲ್ಲೂತನ್ನದೇಯಾದ ಛಾಪು ಮೂಡಿಸುತ್ತಿದ್ದಾಳೆ. ರಾಜಕೀಯ, ಶಿಕ್ಷಣ, ಉದ್ಯೋಗ, ಸಮಾಜಸೇವೆ ಹೀಗೆ ಎಲ್ಲರಂಗದಲ್ಲೂಮಹಿಳೆಯರಿಗೆ ವಿಶೇಷ ಸ್ಥಾನಮಾನ ಸಿಗುತ್ತಿದೆ. ಮಹಿಳೆಯರು ಇಂದು ಬಹಳಷ್ಟು ಬುದ್ಧಿವಂತರಾಗಿದ್ದಾರೆ. ಹೆಣ್ಣು ಮಕ್ಕಳ ಕೈಯಲ್ಲಿಜವಾಬ್ದಾರಿ ಇದ್ದರೆ, ನೀತಿ ನಿಯಮ ಮಾನವೀಯತೆ ಬೆಳೆಸಿಕೊಂಡು ಮನೆ, ಸಮಾಜವನ್ನೂ ನಿರ್ವಹಣೆ ಮಾಡಿಕೊಂಡು ಹೋಗುತ್ತಾರೆ. ತಾಯಂದಿರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮಕ್ಕಳಿದ್ದಾಗಲೇ ಸಂಸ್ಕಾರ ಕಲಿಸಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿಮಹಿಳಾ ಶಕ್ತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಮಹಿಳೆಯರು ಸರಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಜೀವನ ನಡೆಸಬೇಕು ಎಂದು ತಿಳಿಸಿದರು.
ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರರು ಸ್ತ್ರೀ ಸಮಾನತೆ ವಿರುದ್ಧ ಹೋರಾಡಿದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮಹಿಳೆ ಅಬಲೆಯಲ್ಲಸಬಲೆ ಎಂದು ತೋರಿಸಿಕೊಟ್ಟ ಉಕ್ಕಿನ ಮಹಿಳೆಯಾಗಿದ್ದಾರೆ. ಸಾವಿತ್ರಿಬಾಯಿ ಫುಲೆ ಸ್ತ್ರೀ ಶೋಷಣೆ ಮೆಟ್ಟಿ ನಿಂತು, ಶಿಕ್ಷಣ ಪಡೆದು ಕ್ರಾಂತಿಯನ್ನೇ ಮಾಡಿದ್ದಾರೆ. ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ, ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಅಂತಹ ಅನೇಕ ಮಹಿಳಾ ಸಾಧಕರ ಜೀವನಾದರ್ಶಗಳು, ತತ್ವ ಸಿದ್ಧಾಂತಗಳು ಇಂದಿನ ಮಹಿಳೆಯರಿಗೂ ಆದರ್ಶವಾಗಬೇಕು. ಜತೆಗೆ ಇಂತಹವರ ಆದರ್ಶಗಳನ್ನು ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿವಿವಿಧ ಕ್ಷೇತ್ರದಲ್ಲಿಸಾಧನೆಗೈದ ಮಹಿಳಾ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಾನವ ಬಂಧುತ್ವ ವೇದಿಕೆ ಜಿಲ್ಲಾಧ್ಯಕ್ಷೆ ಸುಮಂಗಲಾ ಇಪ್ಪಿಕೊಪ್ಪ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ರಮೇಶ ಆನವಟ್ಟಿ, ಕೆಡಿಪಿ ಸದಸ್ಯ ಮಲ್ಲಿಕಾರ್ಜುನ ಬೂದಗಟ್ಟಿ, ವೇದಿಕೆಯ ತಾಲೂಕಾ ಸಂಚಾಲಕಿ ಗೀತಾ ಪ್ರಕಾಶ, ನಾಗರಾಜ ಬಡೆಮ್ಮನವರ, ಪರಿಮಳಾ ಜೈನ್ , ತನುಶ್ರೀ ಯು.ಡಿ, ಮಂಜುಳಾ ಕರಬಸಮ್ಮನವರ, ಪ್ರೇಮಾ ಜೋಗುಳ, ಬಾಬುಸಾಬ್ ಮೋಮಿನಗಾರ, ಶಾಂತಕ್ಕ ಶಿರೂರ, ರವಿ ಪುತ್ರನ್ , ಸೌಭಾಗ್ಯ ಹಿರೇಮಠ, ಮಂಜುಳಾ ಅಕ್ಕಿ, ಇಂದಿರಾ ಬಾಗಲಕೋಟೆ, ಎಸ್ .ಎಲ್ ಮಠದ, ನಾಗರಾಜ ಮೇದಾರ, ಅಕ್ಷತಾ ಶೆಟ್ಟರ್ ಉಪಸ್ಥಿತರಿದ್ದರು.
ಪೋಟೋ 16 ಮಂಜು 1
ಹಾವೇರಿಯ ವಿದ್ಯಾನಗರದಲ್ಲಿಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಶಾಸಕ ನೆಹರು ಓಲೇಕಾರ ಉದ್ಘಾಟಿಸಿದರು.

