ಕಟಪಾಡಿ ಎಸ್ ವಿಎಸ್ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 90 ಸೈಕಲ್ ವಿತರಣೆ

Contributed byharikatpadi@gmail.com|Vijaya Karnataka

ಮಂಗಳೂರಿನ ಕೆನರಾ ರೊಬೆಕೋ ಕಂಪನಿಯು ಕಟಪಾಡಿ ಎಸ್‌ವಿಎಸ್‌ ಪ್ರೌಢಶಾಲೆಯ 90 ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಸಹಿತ ಸೈಕಲ್‌ಗಳನ್ನು ವಿತರಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲೆಂದು ಈ ಕೊಡುಗೆ ನೀಡಲಾಗಿದೆ. ಸಂಸ್ಥೆಯು ಕಳೆದ ಐದು ವರ್ಷಗಳಿಂದ ಸತತವಾಗಿ ಸೈಕಲ್‌ಗಳನ್ನು ನೀಡುತ್ತಾ ಬಂದಿದೆ. ಈ ಸೈಕಲ್‌ಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕೆಂದು ಆಶಿಸಲಾಗಿದೆ.

distribution of 90 cycles to svs school in katapadi a contribution to nurture student merit

ಮಂಗಳೂರಿನ ಕೆನರಾ ರೊಬೆಕೋ ಕಂಪನಿ ಕೊಡುಗೆ

ವಿಕ ಸುದ್ದಿಲೋಕ ಕಟಪಾಡಿ

ಕಟಪಾಡಿ ಎಸ್ ವಿಎಸ್ ವಿದ್ಯಾವರ್ಧಕ ಸಂಘದ ಅಧೀನದಲ್ಲಿರುವ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಶನಿವಾರ ಮಂಗಳೂರಿನ ಕೆನರಾ ರೊಬೆಕೋ ಕಂಪನಿಯ ವತಿಯಿಂದ ಕೊಡಮಾಡಿದ ಸೈಕಲ್ ಗಳ ವಿತರಣಾ ಕಾರ್ಯಕ್ರಮ ಎಸ್ ವಿಎಸ್ ಪದವಿ ಪೂಧಿರ್ವ ಕಾಲೇಜಿನ ಸಭಾಂಗಣದಲ್ಲಿಶನಿವಾರ ಜರುಗಿತು.

ಕೆನರಾ ರೊಬೆಕೋ ಸಂಸ್ಥೆಯ ಝನಲ್ ಹೆಡ್ ಮುರಳಿಧರ ಶೆಣೈ ಸೈಧಿಕಲ್ ವಿಧಿತಧಿರಿಸಿ ಮಾತನಾಡಿ, ವಿದ್ಯಾರ್ಥಿಗಳ ಓದಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಲ್ಲಿಕಳೆದ 5 ವರ್ಷಗಳಿಂದ ಸತತವಾಗಿ ಈ ಸಂಸ್ಥೆಗೆ ಸೈಕಲ್ ನೀಡುತ್ತಿದ್ದು, ವಿದ್ಯಾರ್ಥಿಗಳು ಒಳ್ಳೆಯ ರೀತಿಯಲ್ಲಿಇದರ ಸದುಪಯೋಗ ಪಡೆದು ಓದಿನಲ್ಲಿಸಾಧನೆ ಮಾಡುತ್ತಿರುವುದರಿಂದ ಈ ಭಾರಿ ಅತ್ಯಂತ ಹೆಚ್ಚು ಸೈಕಲ್ ನೀಡಿದ್ದೇವೆ ಎಂದರು.

8ನೇ ತರಗತಿಯ ಎಲ್ಲ90 ವಿದ್ಯಾರ್ಥಿಗಳಿಗೆ ಹೆಲ್ಮೆಟ್ ಸಹಿತ 90 ಸೈಕಲ್ ಗಳನ್ನು ವಿತರಿಸಲಾಯಿತು. ಎಸ್ ವಿಎಸ್ ವಿದ್ಯಾವರ್ಧಕ ಸಂಘ ಸಂಚಾಲಕ ಕೆ.ಸತ್ಯೇಂದ್ರ ಪೈ. ಅಧ್ಯಕ್ಷತೆ ವಹಿಸಿ ಮಾಧಿತಧಿನಾಧಿಡಿ, ಸೈಕಲ್ ಒಗಿಸಿದ ಕೆನರಾ ರೊಬೆಕೋ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದಧಿರು. ವಿದ್ಯಾರ್ಥಿಗಳು ಈ ಕೊಡುಗೆ ಒಳ್ಳೆಯ ಉದ್ದೇಶಕ್ಕೆ ಬಳಸಿ ಶೈಕ್ಷಣಿಕ ಸಾಧನೆ ಮಾಡುವಂತೆ ಹೆತ್ತವರು, ಶಿಕ್ಷಕರು ಪ್ರೇರೆಪಿಸುವಂತಾಗಲಿ ಎಂದರು.

ಕೆನರಾ ರೊಬೆಕೋ ಸಂಸ್ಥೆಯ ಸಂಧ್ಯಾ ಮುರಳೀಧರ ಶೆಣೈ, ತೃಷಾ ವಿದ್ಯಾ ಪಿಯು ಕಾಲೇಜಿನ ಪ್ರಿಧಿನ್ಸಿಧಿಪಾಧಿಲ್ ಹರಿಪ್ರಸಾದ್ , ಕಟಪಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಕಟಪಾಡಿ ರೋಟರಿ ಕ್ಲಬ್ ಅಧ್ಯಕ್ಷೆ ಆಶಾ ಅಮೀನ್ ಅತಿಥಿಗಳಾಗಿ ಭಾಧಿಗಧಿವಧಿಹಿಧಿಸಿಧಿದಧಿರು.

ಎಸ್ ವಿಎಸ್ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯರಾದ ಕೆ.ನಿತ್ಯಾನಂದ ಶೆಣೈ, ಬಿ.ಚಂದ್ರಕಾಂತ್ ಪೈ., ಶ್ರೀನಿವಾಸ ವಾಸುದೇವ ಕಿಣಿ, ವೆಂಕಟರಮಣ ಭಟ್ , ಗಣೇಶ್ ಕಿಣಿ, ಎಸ್ ವಿಎಸ್ ಎಸ್ ವಿಕೆ ಆಂಗ್ಲಮಾಧ್ಯಮ ವಿಭಾಗದ ಮುಖ್ಯ ಶಿಧಿಕ್ಷಕ ದೇವೇಂದ್ರ ನಾಯಕ್ , ಆಡಳಿತಾಧಿಕಾರಿ ಸುಧಾಕರ್ ಬ್ರಹ್ಮಾವರ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ಕೆ.ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕಿರಣ್ ಕುಮಾರ್ ಶೆಟ್ಟಿ ವಂದಿಸಿದರು. ಶಿಕ್ಷಕ ವಿವೇಕಾನಂದ ಕಾರ್ಯಕ್ರಮ ನಿರೂಪಿಸಿದರು.

ಫೋಟೋ ಕ್ಯಾಪ್ಷನ್

15ಎಚ್ ಎ ಕಟ