ಮಾ.26ರಿಂದ ವೀರಭದ್ರಸ್ವಾಮಿ ಜಾತ್ರೆ

Contributed byprasannanews1985@gmail.com|Vijaya Karnataka

ಗುಬ್ಬಿ ತಾಲ್ಲೂಕಿನ ಬೆಟ್ಟದಹಳ್ಳಿ ಗ್ರಾಮದಲ್ಲಿ ಮಾ.26 ರಿಂದ 30ರವರೆಗೆ ಶ್ರೀ ವೀರಭದ್ರಸ್ವಾಮಿ ಜಾತ್ರೆ ನಡೆಯಲಿದೆ. ರುದ್ರಾಭಿಷೇಕ, ಧ್ವಜಾರೋಹಣ, ಅಗ್ನಿಕೊಂಡ, ಗ್ರಾಮದ ರಾಜಬೀದಿಗಳಲ್ಲಿ ಲಿಂಗದವೀರರ ಕುಣಿತ, ಸಿಡಿಮದ್ದು ಪ್ರದರ್ಶನ, ಬೆಳ್ಳಿಪಲ್ಲಕಿ ಉತ್ಸವ, ಮಹಾರಥೋತ್ಸವ, ಮಹಾದಾಸೋಹ, ಸುಗಮ ಸಂಗೀತ, ಆರ್ಕೆಸ್ಟ್ರಾ, ವೃಷಭ ವಾಹನೋತ್ಸವ, ತೀರ್ಥೋತ್ಸವ ಜರುಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸೇವಾ ಸಮಿತಿ ತಿಳಿಸಿದೆ.

from march 26 veerabhadreshwara jatra dates and events of the festival

ವಿಕ ಸುದ್ದಿಲೋಕ ಗುಬ್ಬಿ

ತಾಲೂಕಿನ ಹಾಗಲವಾಡಿ ಹೋಬಳಿ ಬೆಟ್ಟದಹಳ್ಳಿ ಗ್ರಾಮದ ಶ್ರೀ ಭದ್ರಕಾಳಿ ಸಹಿತ ಶ್ರೀ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್ 26ರಿಂದ 30ರವರೆಗೆ ಚಂದ್ರಶೇಖರ ಮಹಾಸ್ವಾಮಿಗಳ ನೇತೃತ್ವದಲ್ಲಿನಡೆಸಲು ತೀರ್ಮಾನಿಸಲಾಗಿದೆ.

ಮಾ.26ರಂದು ಗುರುವಾರ ರುದ್ರಾಭಿಷೇಕ, ಧ್ವಜಾರೋಹಣ, ಮಾ.27ರಂದು ಶುಕ್ರವಾರ ಆರತಿ ಅಗ್ನಿಕೊಂಡ ಮತ್ತು ಅದೇ ದಿನ ಸಂಜೆ ರಾತ್ರಿ 8 ಗಂಟೆಗೆ ಅಳಿಲುಘಟ್ಟ ಶ್ರೀ ವೀರಭದ್ರಸ್ವಾಮಿ ಆಗಮನದೊಂದಿಗೆ ರಾತ್ರಿ 12 ಗಂಟೆಗೆ ಸರಿಯಾಗಿ ಗ್ರಾಮದ ರಾಜಬೀದಿಗಳಲ್ಲಿಲಿಂಗದವೀರರ ಕುಣಿತ ಹಾಗೂ ಬಸವ ನಗರಿ ವಾದ್ಯಗಳೊಂದಿಗೆ ಬಾರಿ ಸಿಡಿಮದ್ದಿನ ಪ್ರದರ್ಶನ ಬೆಳ್ಳಿಪಲ್ಲಕಿ ಉತ್ಸವ ನಡೆಯಲಿದೆ. ಮಾ.28ರಂದು ಶನಿವಾರ ಬೆಳಗ್ಗೆ 6 ಗಂಟೆಗೆ ಅಗ್ನಿಕೊಂಡ ಪ್ರವೇಶ, ಅದೇ ದಿನ ಮಧ್ಯಾಹ್ನ 12.30ಗಂಟೆಗೆ ಮಹಾರಥೋತ್ಸವ, ಮಹಾದಾಸೋಹ ಹಾಗೂ ನಾದಬಾಸ್ಕರ ಶಿವಶಂಕರ್ ಶಾಸ್ತ್ರಿಗಳ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ರಾತ್ರಿ 9 ಗಂಟೆಗೆ ಸರಿಯಾಗಿ ಆರ್ಕೆಸ್ಟ್ರಾ , ಬಾರಿ ಸಿಡಿಮದ್ದಿನ ಪ್ರದರ್ಶನ, ಮಾ.29ರಂದು ಭಾನುವಾರ ರುದ್ರಾಭಿಷೇಕ, ಪಾನಕ ಫಲಾಹಾರ ಹಾಗೂ ವೃಷಭ ವಾಹನೋತ್ಸವ ಜರುಗಲಿದೆ. ಮಾ.30ರಂದು ಸೋಮವಾರ ರುದ್ರಾಭಿಷೇಕ ಪಾನಕ ಫಲಾಹಾರ ಹಾಗೂ ತೀರ್ಥೋತ್ಸವ ಏರ್ಪಡಿಸಲಾಗಿದ್ದು, ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಬೇಕೆಂದು ವೀರಭದ್ರಸ್ವಾಮಿ ಸೇವಾ ಸಮಿತಿ ಪ್ರಕಟಣೆಗೆ ತಿಳಿಸಿದೆ.

ಫೋಟೋ 16 ಗುಬ್ಬಿ 01: ಶ್ರೀ ವೀರಭದ್ರೇಶ್ವರ ಸ್ವಾಮಿ.