ಕೊಪ್ಪಳ: ಲೋಕ ಅದಾಲತ್ ನಲ್ಲಿಪ್ರಕರಣ ಇತ್ಯರ್ಥ

Contributed bygvittalslb@gmail.com|Vijaya Karnataka

ಕೊಪ್ಪಳ ಜಿಲ್ಲೆಯ ಗಂಗಾವತಿ, ಕುಷ್ಟಗಿ, ಯಲಬುರ್ಗಾ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ನಡೆಯಿತು. ಇಲ್ಲಿ 57,316 ಪ್ರಕರಣಗಳ ಪೈಕಿ 49,953 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಒಟ್ಟು 44,44,49,017 ರೂಪಾಯಿ ಮೌಲ್ಯದ ಪ್ರಕರಣಗಳು ಬಗೆಹರಿತು. 7 ದಾಂಪತ್ಯ ಪ್ರಕರಣಗಳು ರಾಜಿ ಸಂಧಾನದ ಮೂಲಕ ಒಂದಾದವು. ಇದು ಜನಸಾಮಾನ್ಯರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

large scale case settlements in koppal district

ಲೋಕ ಅದಾಲತ್ ನಲ್ಲಿಪ್ರಕರಣ ಇತ್ಯರ್ಥ

ವಿಕ ಸುದ್ದಿಲೋಕ ಕೊಪ್ಪಳ

ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲೆಯ ಗಂಗಾವತಿ, ಕುಷ್ಟಗಿ ಹಾಗೂ

ಯಲಬುರ್ಗಾ ನ್ಯಾಯಾಲಯಗಳಲ್ಲಿಶನಿವಾರ ನಡೆದ ಲೋಕ ಅದಾಲತ್ ನಲ್ಲಿದೊಡ್ಡ ಪ್ರಮಾಣದಲ್ಲಿಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ.

ಒಟ್ಟು 7 ಪ್ರಕರಣಗಳಲ್ಲಿಗಂಡ-ಹೆಂಡತಿಯರು ತಮ್ಮ ಮನಸ್ತಾಪ ಬಿಟ್ಟು, ಮಧ್ಯಸ್ಥಿಕೆಗಾರರು, ವಕೀಲರು ಹಾಗೂ ನ್ಯಾಯಾಧೀಶರು ನೀಡಿದ ಸೂಕ್ತ ಮಾರ್ಗದರ್ಶನದ ಹಿನ್ನೆಲೆಯಲ್ಲಿಮತ್ತೆ ಒಟ್ಟಿಗೆ ಜೀವನ ನಡೆಸಲು ಒಪ್ಪಿಕೊಂಡಿರುವುದು ವಿಶೇಷವಾಗಿತ್ತು.

ನ್ಯಾಯಾಲಯಗಳಲ್ಲಿನಡೆಯುತ್ತಿದ್ದ ವಿಮೆ, ನೀರಿನ ಬಿಲ್ , ಬ್ಯಾಂಕ್ ಸಾಲ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್ , ಜನನ-ಮರಣ, ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಮೋಟರ್ ವಾಹನ ಅಪಘಾತ ಸೇರಿ ನಾನಾ ರೀತಿಯ ಒಟ್ಟು 5,123 ಪ್ರಕರಣಗಳ ಪೈಕಿ 3,032 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.

ವಿಮೆ, ನೀರಿನ ಕರ, ಮೋಟರ್ ವಾಹನ ಅಪಘಾತ ಸೇರಿ ನಾನಾ ಪೂರ್ವ ದಾವೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 52,194 ಪ್ರಕರಣಗಳ ಪೈಕಿ 46,921 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಯಿತು. ಇತ್ಯರ್ಥಗೊಂಡ ಪ್ರಕರಣಗಳ ಒಟ್ಟು ಮೌಲ್ಯ 3,21,81,082 ರೂ. ಆಗಿದೆ.

ಒಂದೇ ದಿನದಲ್ಲಿನಡೆದ ಈ ಲೋಕ ಅದಾಲತ್ ನಲ್ಲಿಒಟ್ಟು 57,316 ಪ್ರಕರಣಗಳ ಪೈಕಿ 49,953 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇತ್ಯರ್ಥಗೊಂಡ ಪ್ರಕರಣಗಳ ಒಟ್ಟು ಮೌಲ್ಯ 44,44,49,017 ರೂ. ಆಗಿದೆ.

---

16-ಕೆಪಿಎಲ್ ವಿಠ್ಠಲ ಫೋಟೊ-22

ಕೊಪ್ಪಳದಲ್ಲಿಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರದಿಂದ ಲೋಕ ಅದಾಲತ್ ನಡೆಯಿತು.