ರಸ್ತೆ ಬದಿ ಕಟ್ಟಡ ಅವಶೇಷ ಹಾಕಿ ಕಿರಿಕಿರಿ

Contributed byprk.k73@gmail.com|Vijaya Karnataka

ಮುಳಬಾಗಲು ನಗರದ ನೂಗಲಬಂಡೆಯ ಗೋಕುಂಟೆ ರಸ್ತೆಯ ಬದಿಯಲ್ಲಿ ಕಟ್ಟಡ ಅವಶೇಷಗಳು, ತ್ಯಾಜ್ಯ, ಪ್ಲಾಸ್ಟಿಕ್ ಎಸೆಯಲಾಗುತ್ತಿದೆ. ಇದರಿಂದ ಪರಿಸರ ಹಾಳಾಗಿದ್ದು, ದುರ್ವಾಸನೆ ಬರುತ್ತಿದೆ. ಸಾರ್ವಜನಿಕರು ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆ ಆಯುಕ್ತರು ಕಸವನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ.

environmental decline continues waste mismanagement in mulbagal

ಮುಳಬಾಗಲು : ನಗರದ ನೂಗಲಬಂಡೆಯ ಗೋಕುಂಟೆ ರಸ್ತೆಯ ಬದಿಯಲ್ಲಿಹಳೆಯ ಕಟ್ಟಡ ಕೆಡವಿರುವ ಅವಶೇಷಗಳು, ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ಉತ್ಪನ್ನಗಳನ್ನು ಎಸೆದು ಹೋಗುತ್ತಿರುವುದರಿಂದ ಇಲ್ಲಿನ ಪರಿಸರ ಕೆಡುತ್ತಿದ್ದು ಈ ಭಾಗದಲ್ಲಿಸಂಚರಿಸುವ ಪಾದಚಾರಿಗಳು ಹಾಗೂ ವಾಹನಗಳ ಸವಾರರು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆಯ ಕೆಲ ವಾಹನಗಳು ನಗರದಲ್ಲಿಸಂಗ್ರಹವಾಗುವ ಕಸವನ್ನು ಇಲ್ಲಿಸುರಿದು ಹೋಗುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿಕೇಳಿ ಬರುತ್ತಿದೆ. ಹಳೆಯ ಬಟ್ಟೆಗಳು, ಸತ್ತ ಪ್ರಾಣಿಗಳು, ಮಾಂಸದ ಮೂಳೆಗಳು, ಚರ್ಮ, ಕೊಳತು ಹೋಗಿರುವ ಪದಾರ್ಥಗಳು ಸೇರಿದಂತೆ ಇತರೆ ವಸ್ತುಗಳನ್ನು ಇಲ್ಲಿಹಾಕುತ್ತಿರುವುದು ಇಲ್ಲಿನ ವಾತಾವರಣ ಕೆಡಲು ಪ್ರಮುಖ ಕಾರಣವಾಗಿದೆ. ನಗರಸಭೆಯವರು ಈ ಬಗ್ಗೆ ಗಮನಹರಿಸದೇ ಇರುವುದು ಸಾರ್ವಜನಿಕ ವಲಯದಲ್ಲಿಆಕ್ರೋಶ ವ್ಯಕ್ತವಾಗಿದೆ. ಗೋಕುಂಟೆ ಹೋಗುವ ರಸ್ತೆಯಲ್ಲಿಸಾರ್ವಜನಿಕರು ಕಸ, ಹಳೆಮನೆ ಕೆಡವಿರುವ ವಸ್ತುಗಳು, ಸೇರಿದಂತೆ ಇತರೆ ಅನವ್ಯಶಕ ವಸ್ತುಗಳನ್ನು ಎಸೆದು ಹೋಗುತ್ತಿದ್ದು ಇದನ್ನು ತೆರವುಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ನಗರಸಭೆಯವರು ನಗರದಲ್ಲಿಸಂಗ್ರಹವಾಗುವ ಕಸವನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುತ್ತಿದ್ದು ಈ ರಸ್ತೆಯಲ್ಲಿಯಾವುದೇ ರೀತಿಯ ಕಸವನ್ನು ಹಾಕುತ್ತಿಲ್ಲಎಂದು ನಗರಸಭೆ ಆಯುಕ್ತ ಆಂಜನೇಯಲು ತಿಳಿಸಿದ್ದಾರೆ.

16 ಎಂ.ಬಿ.ಎಲ್ ಪೊಟೋ 5 ಮುಳಬಾಗಲು ನಗರದ ನೂಗಲ ಬಂಡೆಯ ಗೋಕುಂಟೆ ರಸ್ತೆಯ ಬದಿಯಲ್ಲಿಸಂಗ್ರಹವಾಗಿರುವ ಕಸದ ರಾಶಿ.