29ದಿನಗಳ ಪೊಳಲಿ ಜಾತ್ರೆ ಆರಂಭ

Contributed byyadavvkbantwal@gmail.com|Vijaya Karnataka

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ 29 ದಿನಗಳ ಜಾತ್ರೆ ಆರಂಭವಾಗಿದೆ. ಕುದಿ ಕರೆಯುವ ಸಂಪ್ರದಾಯದ ಮೂಲಕ ಜಾತ್ರೆಯನ್ನು ಘೋಷಿಸಲಾಯಿತು. ಏಪ್ರಿಲ್ 11ರಂದು ಮಹಾರಥೋತ್ಸವ ನಡೆಯಲಿದೆ. ಏಪ್ರಿಲ್ 6ರಿಂದ 10ರವರೆಗೆ ಐದು ದಿನ ಪುರಾಲ್ದ ಚೆಂಡು ನಡೆಯಲಿದೆ. ಏಪ್ರಿಲ್ 12ರಂದು ಆರಾಡ ದಿನ ಮತ್ತು ಅವಭೃತ ಸ್ನಾನ ಜರುಗಲಿದೆ. ಪ್ರಧಾನ ದೈವ ಕೊಡಮಣಿತ್ತಾಯ ನೇಮ ಏಪ್ರಿಲ್ 13ರಂದು ನಡೆಯಲಿದೆ.

polali jatra 29 days of festivities and the tradition of calling the kudi during the maha rathotsava

ಆರಾಡ ದಿನ ಘೋಷಣೆ, ಏ. 11ರಂದು ಮಹಾರಥೋತ್ಸವ

ಬಿ.ಸಿ.ರೋಡ್ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜಾತ್ರೆ ಭಾನುವಾರ ಕುದಿ ಕರೆಯುವ ಸಂಪ್ರದಾಯದ ಮೂಲಕ 29 ದಿನಗಳ ಜಾತ್ರೆಯನ್ನು ಘೋಷಿಸಲಾಯಿತು.

ಶನಿವಾರ ಧ್ವಜಾರೋಹಣಕ್ಕೆ ಮುನ್ನ ನಂದ್ಯಾ ಕ್ಷೇತ್ರದಿಂದ ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಅರಸು ದೈವಗಳ ಭಂಡಾರ ಹಾಗೂ ಉಳಿಪ್ಪಾಡಿ ಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸಿತು. ಪೊಳಲಿ ದೇವಸ್ಥಾನದ ಜಾತ್ರೆಯ ದಿನ ನಿಗದಿಗಾಗಿ ನಟ್ಟೋಜ ವಂಶದ ಮನೆತನದವರು ಪುತ್ತಿಗೆ ಸೋಮನಾಥ ದೇವಸ್ಥಾನದ ಜೋಯಿಸರಲ್ಲಿಗೆ ತೆರಳಿ ಅಲ್ಲಿದಿನ ನಿಗದಿ ಮಾಡಿ ಪೊಳಲಿಗೆ ಆಗಮಿಸುವುದು ಸಂಪ್ರದಾಯವಾಗಿದ್ದು, ಧ್ವಜಾರೋಹಣದ ಮರುದಿನ ಕಂಚಿಲ್ ಸೇವೆಯ ಬಳಿಕ ಕುದಿ ಲೆಪ್ಪುನಿ ಎಂಬ ಸಂಪ್ರದಾಯದ ಮೂಲಕ ಆರಾಡ ದಿನವನ್ನು ಮಾ. 15ರಿಂದ ಏಪ್ರಿಲ್ 12ರಂದು ಆರಾಡ ಎಂದು ತುಳು ಭಾಷೆಯಲ್ಲಿಜೋರಾಗಿ ಗಂಟೆ ಬಡಿಯುವ ಮೂಲಕ ಆರಾಡ ದಿನವನ್ನು ಘೋಷಿಸಲಾಯಿತು.

ಏ. 11ರಂದು ಮಹಾರಥೋತ್ಸವ, ಏಪ್ರಿಲ್ 6ರಿಂದ 10ರ ವರೆಗೆ ಐದು ದಿನ ಪುರಾಲ್ದ ಚೆಂಡು ನಡೆಯಲಿದೆ. ಕುದಿ ಕರೆಯುವ ಕಾರ್ಯಕ್ರಮದಲ್ಲಿಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ತಂತ್ರಿಗಳು, ಅರ್ಚಕವೃಂದ, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ಸೀಮೆಯ ಭಕ್ತರು ಉಪಸ್ಥಿತರಿದ್ದರು.

ಪೊಳಲಿ ಜಾತ್ರೆಯ ವಿವರ

ಏಪ್ರಿಲ್ 6: ಕೊಡಿ (ಮೊದಲ) ಚೆಂಡು, ಕುಮಾರ ರಥ

ಏ. 7 : ಎರಡನೇ ಚೆಂಡು, ಹೂವಿನ ತೇರು

ಏ. 8 : ಮೂರನೇ ಚೆಂಡು, ಸೂರ್ಯಮಂಡಲ

ಏ. 9 : ನಾಲ್ಕನೇ ಚೆಂಡು ಚಂದ್ರಮಂಡಲ

ಏ. 10 : ಕಡೇಚೆಂಡು, ಬೆಳ್ಳಿ ರಥ, ಆಳುಪಲ್ಲಕಿ ರಥ

ಏ. 11: ಮಹಾರಥೋತ್ಸವ

ಏ. 12 : ಆರಾಢ, ಅವಭೃತ ಸ್ನಾನ, ಉಳ್ಳಾಕುಲು-ಮಗೃಂತಾಯ ನೇಮ

ಏ. 13 : ಪ್ರಧಾನ ದೈವ ಕೊಡಮಣಿತ್ತಾಯ ನೇಮ.

16ವೈಎ ಪೊಳಲಿ

ಕ್ಯಾಪ್ಶನ್

ಪೊಳಲಿ ಜಾತ್ರೆಯ ದಿನವನ್ನು ತುಳು ಭಾಷೆಯಲ್ಲಿಜೋರಾಗಿ ಗಂಟೆ ಬಡಿಯುವ ಮೂಲಕ ಆರಾಡ ದಿನವನ್ನು ತಿಳಿಸಲಾಯಿತು.