ಪಿಟಿಸಿಎಲ್ ಷರತ್ತು ಉಲ್ಲಂಘಿಧಿಸಿದರೆ ಸ್ವಯಂ ಅಮಾನ್ಯ

Contributed bysrikanth.g@timesgroup.com|Vijaya Karnataka

ಪಿಟಿಸಿಎಲ್‌ ಕಾಯಿದೆ ಅಡಿಯಲ್ಲಿ ಸರ್ಕಾರದಿಂದ ಮಂಜೂರಾದ ಭೂಮಿಯ ಮೊದಲ ಮಾರಾಟ ಪ್ರಕ್ರಿಯೆ ಅಸಿಂಧುಗೊಂಡರೆ, ನಂತರದ ಎಲ್ಲಾ ಮಾರಾಟ ಪ್ರಕ್ರಿಯೆಗಳು ರದ್ದಾಗಲಿವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ತಮ್ಮಲ್ಲಿ ಇಲ್ಲದ್ದನ್ನು ಕೊಡಲಾಗುವುದಿಲ್ಲ ಎಂಬ ತತ್ವದ ಮೇಲೆ ಈ ಆದೇಶ ನೀಡಲಾಗಿದೆ. 1956ರ ಮಾರಾಟ ಅನಧಿಕೃತ ಎಂದು ಘೋಷಣೆಯಾದಲ್ಲಿ, ನಂತರದ ಎಲ್ಲ ಮಾರಾಟಗಳು ಶೂನ್ಯವಾಗಲಿವೆ ಎಂದು ನ್ಯಾಯಪೀಠ ಹೇಳಿದೆ. ಅರ್ಜಿದಾರರ ವಾದವನ್ನು ನ್ಯಾಯಾಲಯ ವಜಾಗೊಳಿಸಿದೆ.

high courts significant ruling on violating ptcl regulations

ವಿಕ ಸುದ್ದಿಲೋಕ ಬೆಂಗಳೂರು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ ಕಾಯಿದೆ (ಪಿಟಿಸಿಎಲ್ ) ಅಡಿಯಲ್ಲಿಸರಕಾರದಿಂದ ಮಂಜೂರಾದ ಭೂಮಿಯ ಮೊದಲ ಬಾರಿ ಮಾರಾಟ ಪ್ರಕ್ರಿಯೆಯನ್ನು ಅಸಿಂಧುಗೊಳಿಸಿದ ಬಳಿಕ ನಡೆಯುವ ಎಲ್ಲಾಮಾರಾಟ ಪ್ರಕ್ರಿಯೆ ರದ್ದಾಗಲಿವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ ಮಂಜೂರಾಗಿದ್ದ ಜಮೀನನ್ನು ಹಲವು ಸುತ್ತಿನ ಮಾರಾಟದ ಬಳಿಕ ಖರೀದಿಸಿದ್ದ ಎಸ್ .ಕೆ.ಜಯರಾಮ್ ಸಲ್ಲಿಸಿದ್ದ ಅರ್ಜಿ ಕುಧಿರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ .ದೇವದಾಸ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.

‘ತಮ್ಮಲ್ಲಿಇಲ್ಲದ್ದನ್ನು ಕೊಡಲಾಗುವುದಿಲ್ಲ’ ಎಂಬ ಕಾನೂನು ತತ್ವ ಉಲ್ಲೇಖಿಸಿರುವ ನ್ಯಾಯಪೀಠ, ‘ಧಿ‘ಜಮೀನು 1956ರಲ್ಲಿಮಾರಾಟವಾಗಿರುವುದು ಅನಧಿಕೃತವೆಂದು ಘೋಷಣೆ ಮಾಡಲಾಗಿದೆ. ಅದೇ ಆಧಿಧಾರದಲ್ಲಿನಂತರ ನಡೆದ ಎಲ್ಲಮಾರಾಟಗಳು ಶೂನ್ಯವಾಗಲಿವೆ. ಆದ್ದರಿಂದ ಜಮೀನು ಮಂಜೂರುದಾರರಿಂದ ಹಲವು ಮಾರಾಟಗಳ ಬಳಿಕ ಅರ್ಜಿದಾರ ಜಯರಾಮ್ 1988ರಲ್ಲಿಖರೀದಿಸಿರುವ ಪ್ರಕ್ರಿಯೆಯೂ ಕಾನೂನಿನ ಪ್ರಕಾರ ರದ್ದಾಗಲಿದೆ,’’ ಎಂದು ಅಧಿಭಿಧಿಪ್ರಾಧಿಯಧಿಪಟ್ಟು, ಅರ್ಜಿಯನ್ನು ವಜಾಗೊಳಿಸಿದೆ.

‘‘ಪಿಟಿಸಿಎಲ್ ಕಾಯಿದೆಯ ಸೆಕ್ಷನ್ 4(1) ಪ್ರಕಾರ, ಅನುದಾನಿತ ಭೂಮಿಯನ್ನು ಷರತ್ತು ಉಲ್ಲಂಘಿಘಿಸಿ ವರ್ಗಾವಣೆ ಮಾಡಿದರೆ ಅದು ಸ್ವಯಂ ಅಮಾನ್ಯವಾಗುತ್ತದೆ. ಆ ವ್ಯವಹಾರದಿಂದ ಯಾವುದೇ ಹಕ್ಕು, ಮಾಲೀಕತ್ವ ಲಧಿಭ್ಯಧಿವಾಧಿಗುಧಿವುಧಿದಿಧಿಲ್ಲ. ಜಮೀನು ಮಾರಾಟ ಪ್ರಕ್ರಿಯೆ ರದ್ದುಪಡಿಸಿ ಉಪವಿಭಾಗಾಧಿಕಾರಿಗಳು ಹೊರಡಿಸಿರುವ ಆದೇಶದಲ್ಲಿಯಾವುದೇ ಕಾನೂನು ದೋಷವಿಲ್ಲ, ಆದ್ದರಿಂದ ಅರ್ಜಿದಾರರ ವಾದ ಮಾನ್ಯ ಮಾಡಲಾಗದು,’’ ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

ಪರಿಶಿಷ್ಟ ಜಾತಿಗೆ ಸೇರಿದ ಟಿ.ಪೂಜಪ್ಪಗೆ ಬೆಂಗಳೂರು ಪೂರ್ವ ತಾಲೂಕಿನ ಖಾಜಿ ಸೊನ್ನೇನಹಳ್ಳಿ ಗ್ರಾಮದ ಸರ್ವೆ ನಂ.143ರಲ್ಲಿರುವ 3 ಎಕರೆ 26 ಗುಂಟೆ ಭೂಮಿಯನ್ನು ಸರಕಾರ 1947ರಲ್ಲಿಮಂಜೂರು ಮಾಡಿತ್ತು. ಪೂಜಪ್ಪ ನಿಧನದ ನಂತರ ಅವರ ಪತ್ನಿ ಹಾಗೂ ಅಪ್ರಾಪ್ತ ಪುತ್ರರು 1956ರ ಅ.25ರಂದು ಈ ಜಮೀನನ್ನು ಬಸಮ್ಮ ಎಂಬುವರಿಗೆ ಮಾರಾಟ ಮಾಡಿದ್ದರು.

ಈ ನಡುವೆ, ಹಲವು ಸುತ್ತಿನ ಮಾರಾಟದ ಬಳಿಕ ಆ ಜಮೀನನ್ನು ಪದ್ಮಾವತಿ ಎಂಬುವರು ಖರೀದಿಸಿದ್ದು, ಅದನ್ನು ಅವರಿಂದ ಅರ್ಜಿದಾರ ಜಯರಾಮ್ 1988ರ ಸೆ.22ರಂದು ಖರೀದಿಸಿದ್ದರು.

ಆದರೆ, ಮಾರಾಟ ಪ್ರಕ್ರಿಯೆ (ಬಸಮ್ಮಗೆ ಮಾರಾಟ) ಪಿಟಿಸಿಎಲ್ ಕಾಯಿದೆಯ ಪ್ರಕಾರ, ಜಮೀನು ಮಂಜೂರು ಮಾಡಿದ್ದಾಗ ಸರಕಾರ ವಿಧಿಸಿದ್ದ ಷರತ್ತುಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು, ಮಾರಾಟ ರದ್ದುಪಡಿಸಿದ್ದರು. ಅದನ್ನು ಪ್ರಶ್ನಿಸಿ ಬಸಮ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ , ಅರ್ಜಿಯನ್ನು ವಜಾಗೊಳಿಸಿ ಸಕ್ಷಮ ಪ್ರಾಧಿಕಾರದ ಆದೇಶ ಎತ್ತಿ ಹಿಡಿದಿತ್ತು.