ದೋಷರಹಿತ ಜನಗಣತಿಗೆ ಸೂಚನೆ

Contributed bysheshu0147@gmail.com|Vijaya Karnataka

2027ರಲ್ಲಿ ನಡೆಯಲಿರುವ ಜನಗಣತಿ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ನಡೆಯಲಿದೆ. ಇದನ್ನು ದೋಷರಹಿತವಾಗಿ ನಡೆಸಲು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದ್ದಾರೆ. ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮೊಬೈಲ್ ಆ್ಯಪ್ ಮೂಲಕ ದತ್ತಾಂಶ ನಮೂದು ಮತ್ತು ಮನೆ-ಪಟ್ಟಿ ನಕ್ಷೆ ತಯಾರಿಸುವ ಬಗ್ಗೆ ಗಮನಹರಿಸಲು ತಿಳಿಸಲಾಗಿದೆ. ಇದು ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಸಹಕಾರಿಯಾಗಲಿದೆ.

planning for error free 2027 census execution

ವಿಕ ಸುದ್ದಿಲೋಕ ಮಂಡ್ಯ

ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿನಡೆಯಲಿರುವ 2027ರ ಜನಗಣತಿಯನ್ನು ದೋಷÜರಹಿತವಾಗಿ ನಿರ್ವಹಿಸಲು ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಸೋಮವಾರ ನಡೆದ 2027ರ 1ನೇ ಹಂತದ ಜನಗಣತಿ ಕಾರಾರ ಯಚರಣೆಗೆ ನಿಯೋಜನೆಗೊಂಡ ತಾಂತ್ರಿಕ ಸಿಬ್ಬಂದಿಗೆ ತರಬೇತಿ ಕಾರ ್ಯಕ್ರಮ ಸಂಬಂಧ ಸಭೆಯಲ್ಲಿಮಾತನಾಡಿದರು.

‘‘ಜನಗಣತಿಗೆ ನಿಯೋಜನೆಯಾದ ತಾಂತ್ರಿಕ ಪರಿಣಿತರು ಹಾಗೂ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. 2011ರಲ್ಲಿಹಳೆಯ ಮ್ಯಾನುವೆಲ್ ಪದ್ಧತಿಯಲ್ಲಿಗಣತಿ ಕಾರ ್ಯ ನಡೆದಿತ್ತು. ಈ ಬಾರಿ ಮೊಬೈಲ್ ಆ್ಯಪ್ ಮೂಲಕ ನಡೆಯಲಿದ್ದು, ದತ್ತಾಂಶ ನಿಖರತೆ ಮತ್ತು ಪಾರದರ್ಶಕತೆ ಹೆಚ್ಚಲಿದೆ. ಜನಸಾಮಾನ್ಯರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸಲು ಇದು ಸಹಕಾರಿಯಾಲಿದೆ,’’ಎಂದರು.

‘‘ಮೊಬೈಲ್ ನಲ್ಲೇ ಆ್ಯಪ್ ಮೂಲಕ ಡಿಜಿಟಲ್ ದತ್ತಾಂಶ ನಮೂದು ಮತ್ತು ಮನೆ-ಪಟ್ಟಿ ನಕ್ಷೆ ತಯಾರು (ಎಚ್ ಎಲ್ ಬಿ) ಮಾಡುವ ಬಗ್ಗೆ ಹೆಚ್ಚು ಗಮನಹರಿಸಿ. ‘ಜನಗಣತಿ ನಿರ್ವಹಣೆ ಮತ್ತು ಮೇಲ್ವಿಚಾರಣೆ ವ್ಯವಸ್ಥೆ’ (ಸಿಎಂಎಂಎಸ್ ) ಪೋರ್ಟಲ್ ಮೂಲಕ ಲೈವ್ ಮಾನಿಟರಿಂಗ್ , ಮನೆ-ಪಟ್ಟಿ ಮತ್ತು ದತ್ತಾಂಶ ನಿರ್ವಹಣೆಯ ವಿಷÜಯಗಳ ಬಗ್ಗೆ ತಾಂತ್ರಿಕ ಸಿಬ್ಬಂದಿ ತಿಳಿದು ಕೆಲಸ ಮಾಡಿ,’’ಎಂದು ಸಲಹೆ ನೀಡಿದರು.

ಜನಗಣತಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಧನ್ಯಾ, ಜಿಲ್ಲಾಸಂಖ್ಯಾ ಸಂಗ್ರಹಣಾಧಿಕಾರಿ ಕೇಶವಮೂರ್ತಿ, ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕ ನಿರ್ದೇಶಕ ಎಸ್ .ಚೇತನ್ ಇದ್ದರು.

ಎಸ್ ಎಂಡಿವೈ-ಎಸ್ -16-4

ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ2027ರ 1ನೇ ಹಂತದ ಜನಗಣತಿ ಕಾರಾರ ಯಚರಣೆಗೆ ನಿಯೋಜನೆಗೊಂಡ ತಾಂತ್ರಿಕ ಸಿಬ್ಬಂದಿಗೆ ತರಬೇತಿ ಕಾರ ್ಯಕ್ರಮ ಸಂಬಂಧ ಜಿಲ್ಲಾಧಿಕಾರಿ ಡಾ.ಕುಮಾರ ಸೋಮವಾರ ಸಭೆ ನಡೆಸಿದರು.