ಬಿಎಲ್ ವೈ16ಜಯಪ್ಪ03 ಶಾಂತಿಸಭೆಯಲ್ಲಿಎಸ್ಪಿ ಎಸ್ .ಜಾಹ್ನವಿ ಸೂa

Contributed byrathodjayakumar92@gmail.com|Vijaya Karnataka

ಹೊಸಪೇಟೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಎಸ್ಪಿ ಎಸ್‌. ಜಾಹ್ನವಿ ಅವರು ಯುಗಾದಿ ಹಾಗೂ ರಂಜಾನ್‌ ಹಬ್ಬಗಳನ್ನು ಸಾರ್ವಜನಿಕರು ಶಾಂತಿ, ಸೌಹಾರ್ದತೆಯಿಂದ ಆಚರಿಸಲು ಸೂಚನೆ ನೀಡಿದರು. ಕಾನೂನು ಸುವ್ಯವಸ್ಥೆ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಅಧಿಕಾರಿಗಳು ಯಾರನ್ನೂ ರಕ್ಷಿಸದೆ ತಪ್ಪು ಮಾಡಿದವರ ಮೇಲೆ ಕ್ರಮ ಜರುಗಿಸಬೇಕು ಎಂದರು. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಹಬ್ಬ ಆಚರಿಸಬೇಕು ಎಂದು ತಿಳಿಸಿದರು.

yugadi and ramadan peace meeting s jahnavi

ಶಾಂತಿಸಭೆಯಲ್ಲಿಎಸ್ಪಿ ಎಸ್ .ಜಾಹ್ನವಿ ಸೂಚನೆ

ಶಾಂತಿ ಕಧಿದಧಿಡಿಧಿದರೆ ಕಾಧಿನೂನು ಕ್ರಮ

ವಿಕ ಸುದ್ದಿಲೋಕ ವಿಜಯನಗರ (ಹೊಸಪೇಟೆ)

‘‘ನಾಡಿನ ಸಂಸ್ಕೃತಿಯ ಸಂಕೇತವಾದ ಯುಗಾದಿ ಹಾಗೂ ಪವಿತ್ರ ರಂಜಾನ್ ಹಬ್ಬಗಳನ್ನು ಸಾರ್ವಜನಿಕರು ಶಾಂತಿ, ಸೌಹಾರ್ದತೆ ಮತ್ತು ಸಂಭ್ರಮದಿಂದ ಆಚರಿಸಬೇಕು. ಯಾರಾದರೂ ಸಮಾಜದ ಶಾಂತಿ ಅಥವಾ ಕಾನೂನು ಸುವ್ಯವಸ್ಥೆ ಕದಡಲು ಯತ್ನಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು,’ಧಿ’ ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಎಸ್ . ಜಾಹ್ನವಿ ಹೇಧಿಳಿದರು.

ನಗರದ ಡಿವೈಎಸ್ಪಿ ಕಚೇರಿ ಆವರಣದಲ್ಲಿಸೋಮವಾರ ಹಮ್ಮಿಕೊಂಡಿದ್ದ ಯುಗಾದಿ ಮತ್ತು ರಂಜಾನ್ ಹಬ್ಬಗಳ ನಿಮಿತ್ತ ನಾಗರಿಕ ಸೌಹಾರ್ದ ಸಭೆಯಲ್ಲಿಮಾತನಾಡಿದರು.

‘‘ ನಮ್ಮ ಧರ್ಮ, ನಮ್ಮ ಸಮುದಾಯದವರೆಂಬ ಕಾರಣಕ್ಕೆ ಅಧಿಕಾರಿಗಳು, ಸಿಬ್ಬಂದಿ ಸಹ ಯಾರನ್ನೂ ರಕ್ಷಿಸಬಾರದು. ಯಾರೇ ತಪ್ಪು ಮಾಡಿದ್ದರೂ ಒಂದೇ ದೃಷ್ಟಿಯಲ್ಲಿನೋಡಿ ಕ್ರಮ ಕೈಗೊಳ್ಳಬೇಕು. ಕೆಲ ಕಿಡಿಗೇಡಿಗಳು ವೈಯಕ್ತಿಕ ಕಲಹ, ಸಣ್ಣ ಘಟನೆಗಳನ್ನೂ ದೊಡ್ಡದಾಗಿ ಬಿಂಬಿಸಿ, ಸಾಮರಸ್ಯ ಕದಡುವ ಕೆಲಸ ಮಾಡುತ್ತಾರೆ. ಅಂತಹವರ ಬಗ್ಗೆ ಆಯಾ ಸಮುದಾಯದವರೇ ಮಾಹಿತಿ ನೀಡಿದರೆ, ಹಬ್ಬಗಳನ್ನು ಮತ್ತಷ್ಟು ಶಾಂತಿಯುತ ಆಚರಿಸಲು ಸಹಕಾರಿಯಾಗುತ್ತದೆ. ಎಲ್ಲಸಮುದಾಯದವರೂ ಒಂದೇ ತಾಯಿ ಮಕ್ಕಳಂತೆ ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಬೇಕು,’ಧಿ’ ಎಂದು ತಿಳಿಸಿದರು.

ಎಎಸ್ಪಿ ಮಂಜುನಾಥ ಮಾತನಾಡಿ, ‘ಧಿ‘ಚಂದ್ರನನ್ನು ನೋಡಿ ಆಚರಣೆ ಮಾಡುವ ಹಬ್ಬ ಎಂದರೆ ಯುಗಾದಿ ಹಾಗೂ ರಂಜಾನ್ . ಎರಡೂ ಹಬ್ಬಗಳು ಬಹಳ ವಿಶೇಷವಾಗಿದ್ದು, ಪವಿತ್ರ ಹಬ್ಬಗಳಾಗಿವೆ. ಉಭಯ ಧರ್ಮೀಯರು ಶಾಂತಿ, ಸಾಮರಸ್ಯದಿಂದ ಹಬ್ಬ ,’ಧಿ’ ಆಚರಿಸಬೇಕು ಎಂದರು.

ಡಿವೈಎಸ್ಪಿ ಡಾ.ಟಿ.ಮಂಜುನಾಥ, ಪೌರಾಯುಕ್ತ ಶಿವಕುಮಾರ್ ಎರಗುಡಿ, ಸಿಪಿಐಗಳಾದ ಹುಲಗಪ್ಪ, ಮಹ್ಮದ್ ಗೌಸ್ , ರಾಜೇಶ್ ಭಟಗುರ್ಕಿ ಸೇರಿ ಇತರರಿದ್ದರು.

ಧಿ

ಫೋಟೊ: ಬಿಎಲ್ ವೈ16ಜಯಪ್ಪ03: ಹೊಸಪೇಟೆಯಲ್ಲಿಸೋಮವಾರ ನಡೆದ ಶಾಂತಿ ಸಭೆಯಲ್ಲಿಎಸ್ಪಿ ಎಸ್ .ಜಾಹ್ನವಿ ಮಾತನಾಡಿದರು.