ಬ್ಲರ್ಬ್
ಪ್ರತಿವರ್ಷ ಶೇ.20 ರಷ್ಟು ಅರಣ್ಯ ನಾಶ . ಅಮೂಲ್ಯ ಸಸ್ಯ ಸಂಪತ್ತಿನ ಜತೆ ಪ್ರಾಣಿಪಕ್ಷಿಗಳ ಜೀವಕ್ಕೂ ಸಂಚಕಾರ. ಬೇಸಿಗೆ ಮುಗಿಯೋ ತನಕ ಕಾಡು ಪ್ರಾಣಿಗಳ ಹಾವಳಿ ರೀತಿಯಲ್ಲೆಅರಣ್ಯ ಇಲಾಖೆಯನ್ನು ಕಾಡಲಿದೆ ಕಾಡ್ಗಿಚ್ಚು.
ಚಿನ್ನಗಿರಿಗೌಡ ಬಿ.ಪಿ.ಚನ್ನಪಟ್ಟಣ
್ಚhಜ್ಞ್ಞಿaಜಜ್ಟಿಜಿಜಟಡಿdaಚಿpಃಜಞaಜ್ಝಿ.್ಚಟಞ.
ದಿನ ಕಳೆದಂತೆ ಬಿಸಿಲ ಜಳ ಹೆಚ್ಚುತ್ತಿದ್ದು, ವಾತಾವರಣದಲ್ಲೂಬಿಸಿ ಏರುತ್ತಾ ತಾಪಮಾನ ಹೆಚ್ಳಳವಾಗುತ್ತಿದೆ. ಒಣ ಹವಾಮಾನ, ಗಾಳಿ ಮತ್ತು ಮಾನವ ನಿರ್ಮಿತ ಕಾರಣಗಳಿಂದ ಸಂಭವಿಸುವ ಕಾಡ್ಗಿಚ್ಚು ಜಿಲ್ಲೆಯ ಅರಣ್ಯ ಪ್ರದೇಶಕ್ಕೆ ಹಾನಿಯುಂಟಾಗುವ ಆತಂಕ ನಿರ್ಮಾಣಗೊಂಡಿದೆ.
ಈಗಾಗಲೇ ಜಿಲ್ಲೆಯ ಹಲವು ಕಡೆಗಳಲ್ಲಿಕಾಡ್ಗಿಚ್ಚು ಅಥವಾ ಮಾನವ ನಿರ್ಮಿತ ಬೆಂಕಿಯಿಂದ ಬೆಳೆ, ಮರ ಗಿಡಗಳು, ಪ್ರಾಣಿ-ಪಕ್ಷಿಗಳ ಜೀವಕ್ಕೆ ಸಂಚಕಾರ ಉಂಟಾಗಿರುವ ಘಟನೆಗಳು ಕಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿಇದರಿಂದ ಮತ್ತಷ್ಟು ಅಪಾಯ ಎದುರಾಗುವ ಸಂಭವವಿರುವ ಕಾರಣ ಅರಣ್ಯ ಇಲಾಖೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಅರಣ್ಯ ಭೂಮಿ ಒತ್ತುವರಿ ಮಾಡುವ ದಾಹ, ಕಳ್ಳಬೇಟೆಗಾರರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಸೇಡು ತೀರಿಸಿಕೊಳ್ಳಲು, ಕಾಡು ಪ್ರಾಣಿಗಳನ್ನು ಬೇಟೆಯಾಡಲು, ಕಾಡಿಗೆ ಬೆಂಕಿ ಹಾಕಿದರೆ ಚೆನ್ನಾಗಿ ಮಳೆಯಾಗುತ್ತದೆ ಎಂಬ ಮೂಢನಂಬಿಕೆ, ಅರಣ್ಯ ಪ್ರದೇಶದಲ್ಲಿನಡೆಯುವ ಮೋಜು ಮಸ್ತಿ, ಅರಣ್ಯದಲ್ಲಿದನಕರುಗಳನ್ನು ಮೇಯಿಸುವ ದನಗಾಯಿಗಳು ಹೊಸ ಹುಲ್ಲುಹುಟ್ಟಲಿ ಎಂಬ ಕಾರಣದಿಂದ ಕಾಡಿಗೆ ಬೆಂಕಿ ಹಾಕುತ್ತಿದ್ದು, ಇದು ಕಾಡ್ಗಿಚ್ಚಾಗಿ ಅರಣ್ಯ ನಾಶಕ್ಕೆ ಕಾರಣವಾಗುತ್ತಿದೆ.
ಶೇ.30 ರಷ್ಟು ಅರಣ್ಯ ಸಂಪತ್ತು ನಾಶ: ಜಿಲ್ಲೆಯಲ್ಲಿ70 ಸಾವಿರ ಹೆಕ್ಟೇರ್ ಪ್ರದೇಶದಷ್ಟು ಅರಣ್ಯ ವಿದ್ದು, ಇದರಲ್ಲಿಪ್ರತಿ ವರ್ಷ ಶೇ.20 ರಿಂದ 30 ರಷ್ಟು ಅರಣ್ಯ ಪ್ರದೇಶ ಕಾಡ್ಗಿಚ್ಚಿನಿಂದ ಹಾನಿಗೊಳಗಾಗುತ್ತಲೇ ಇದೆ. ಬೆಂಕಿಯಿಂದಾಗಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿಇರುವ ಅಮೂಲ್ಯ ಸಸ್ಯ ಸಂಪತ್ತು, ಅಪರೂಪದ ಜೀವಿಗಳು ನಾಶವಾಗುತ್ತಿದ್ದು, ಫೆಬ್ರವರಿ ತಿಂಗಳ ಮೊದಲ ವಾರದಿಂದ ಕಾಡು ಬೆಂಕಿಗೆ ತುತ್ತಾಗುತ್ತಿದ್ದು, ಪೂರ್ವ ಮುಂಗಾರು ಆರಂಭಗೊಂಡು ಅರಣ್ಯ ಪ್ರದೇಶದಲ್ಲಿಹೊಸ ಭೂಮಿಯಲ್ಲಿಚಿಗುರು ಮೂಡುವವರೆಗೆ ಈ ಸಮಸ್ಯೆ ಇರುತ್ತದೆ.
ಬೇಸಿಗೆಯಲ್ಲೇ ಬೆಂಕಿ ಯಾಕೆ?: ಜಿಲ್ಲೆಯ ಅರಣ್ಯ ಪ್ರದೇಶಗಳು ಬಹುತೇಕ ಎಲೆ ಉದುರುವ ಜಾತಿಯ ಮರಗಳು ಹಾಗೂ ಸಣ್ಣ ಪ್ರಮಾಣದ ಹುಲ್ಲುಗಳಿಂದ ಕೂಡಿದ ಅರಣ್ಯಪ್ರದೇಶವಾಗಿದೆ. ಚಳಿಗಾಲ ಮುಗಿಯುವ ವೇಳೆಗೆ ಬಹುತೇಕ ಮರಗಳು ಎಲೆ ಉದುರುವುದರಿಂದ ಒಣ ಎಲೆಗಳು, ಒಣಹುಲ್ಲುಗಳು ಅರಣ್ಯ ಪ್ರದೇಶದಲ್ಲಿತುಂಬಿರುತ್ತದೆ. ಇದರಿಂದಾಗಿ ಸಣ್ಣದೊಂದು ಕಿಡಿಗೂ ಬೆಂಕಿ ಹತ್ತಿ ಇಡೀ ಕಾಡು ಅಗ್ನಿಗೆ ಆಹುತಿಯಾಗುತ್ತಿದೆ. ಕಾಡ್ಗಿಚ್ಚನ್ನು ನಂದಿಸುವುದು ಸುಲಭದ ಕಾರ್ಯವಲ್ಲ. ಪ್ರತಿವರ್ಷ ಒಂದಿಷ್ಟು ಅರಣ್ಯ ಪ್ರದೇಶವನ್ನು ಕಾಡ್ಗಿಚ್ಚು ಕರಗಿಸುತ್ತಿದೆ.
ವನ್ಯಜೀವಿ- ಮಾನವ ಸಂಘರ್ಷಕ್ಕೆ ನಾಂದಿ: ಕಾಡ್ಗಿಚ್ಚಿನಿಂದ ಅರಣ್ಯ ಪ್ರದೇಶ ಹಾನಿಯಾಗುತ್ತಿರುವುದು ಜಿಲ್ಲೆಯಲ್ಲಿವನ್ಯಜೀವಿ- ಮಾನವ ಸಂಘರ್ಷ ಹೆಚ್ಚಳಕ್ಕೆ ಕಾರಣವಾಗಿದೆ. ಈಗಾಗಲೇ ವರ್ಷದಿಂದ ವರ್ಷಕ್ಕೆ ವನ್ಯಜೀವಿಗಳು ಜನವಸತಿ ಪ್ರದೇಶದಲ್ಲಿಕಾಣಿಸಿಕೊಳ್ಳುವ ಜತೆ ಆಸ್ತಿ ಮತ್ತು ಜೀವಕ್ಕೆ ಅಪಾಯ ತಂದೊಡ್ಡುತ್ತಿವೆ. ಈ ಘಟನೆಗೆ ವರ್ಷ ವರ್ಷ ಎದುರಾಗುವ ಕಾಡ್ಗಿಚ್ಚು ಪ್ರಮುಖ ಕಾರಣವಾಗಿದೆ. ಜಿಲ್ಲೆಯ ಬಹುತೇಕ ಅರಣ್ಯ ಪ್ರದೇಶಗಳು ಪ್ರಾದೇಶಿಕ ಅರಣ್ಯ ಗಳಾಗಿದ್ದರೂ ಇಲ್ಲಿನವಿಲು, ಕಾಡುಹಂದಿ, ಚಿರತೆ, ಕಾಡುಕುರಿ, ಮೊಲ ಮೊದಲಾದ ಕಾಡುಪ್ರಾಣಿಗಳು ವಾಸಿಸುತ್ತಿದ್ದು, ಕಾವೇರಿ ಮತ್ತು ಬನ್ನೇರುಘಟ್ಟ ವನ್ಯಜೀವಿ ವಲಯದಿಂದ ಹೊರ ಬರುವ ಕಾಡಾನೆಗಳು ಜಿಲ್ಲೆಯ ನಾನಾ ಪ್ರಾದೇಶಿಕ ಅರಣ್ಯಗಳಲ್ಲಿನೆಲೆಸಿವೆ. ಕಾಡ್ಗಿಚ್ಚು ಬಿದ್ದಾಗ ಆತಂಕಗೊಳ್ಳುವ ಈ ಕಾಡುಪ್ರಾಣಿಗಳು ಜನವಸತಿ ಪ್ರದೇಶ, ರೈತರ ಕೃಷಿ ಜಮೀನಿಗಳಿಗೆ ನುಗ್ಗಿ ಹಾನಿ ಮಾಡುವ ಸಾಧ್ಯತೆ ಹೆಚ್ಚಿವೆ. ಇನ್ನು ಚಿರತೆಗಳು ಪ್ರಾದೇಶಿಕ ಅರಣ್ಯ ಬಿಟ್ಟು ಜನವಸತಿ ಪ್ರದೇಶದತ್ತ ನುಗ್ಗಿ ಸಾಕುಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ.
ಬಾಕ್ಸ್ ..1
ಕಾಡ್ಗಿಚ್ಚಿಗೆ ಸಿಲುಕುವ ಸ್ಥಳಗಳು..
ಜಿಲ್ಲೆಯಲ್ಲಿಪ್ರಮುಖವಾಗಿ ಚನ್ನಪಟ್ಟಣ ತಾಲೂಕಿನ ಅಬ್ಬೂರು ಗುಡ್ಡೆ, ಚನ್ನಪಸ್ವಾಮಿ ಬೆಟ್ಟ, ಮಾಕಳಿ ಅರಣ್ಯ ಪ್ರದೇಶ, ನರಿಕಲ್ಲುಗುಡ್ಡ, ಚಿಕ್ಕಮಣ್ಣು ಗುಡ್ಡೆ, ದೊಡ್ಡಮಣ್ಣುಗುಡ್ಡೆ, ಹಂದಿಗುಂದಿ ಅರಣ್ಯ ಪ್ರದೇಶ, ಕೊರಣಗೆರೆ ಬೆಟ್ಟ, ಮಾಗಡಿಯ ಸಾವನದುರ್ಗ ಅರಣ್ಯ ಪ್ರದೇಶ, ರಾಮನಗರದ ತೆಂಗಿನಕಲ್ಲುಫಾರೆಸ್ಟ್ , ಕನಕಪುರದ ಕಬ್ಬಾಳು ಅರಣ್ಯ, ಸಂಗಮ ಅರಣ್ಯ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿಪ್ರತಿ ವರ್ಷ ಈ ಮೇಲಿನ ಹಲವು ಕಾರಣಗಳಿಂದಾಗಿ ಬೆಟ್ಟಗುಡ್ಡಕ್ಕೆ, ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳುತ್ತಲೆ ಇದೆ. ಭಾನುವಾರ ರಾತ್ರಿ ಬಿ.ವಿ.ಹಳ್ಳಿ ಬಳಿಯ ಕರಡಿಗುಡ್ಡೆಯಲ್ಲಿಕಾಣಿಸಿಕೊಂಡ ಬೆಂಕಿ ಗುಡ್ಡೆಯ ಅಕ್ಕಪಕ್ಕದಲ್ಲಿನ ಮಾವಿನ ತೋಟಗಳಿಗೂ ಹಬ್ಬಿ ಫಸಲು ತುಂಬಿದ್ದ ನೂರಾರು ಮಾವಿನ ಮರಗಳನ್ನು ಸುಟ್ಟು ಹಾಕುವುದರ ಜತೆಗೆ ಲಕ್ಷಾಂತರ ರೂ. ನಷ್ಟವನ್ನುಂಟು ಮಾಡಿದೆ.
ಬಾಕ್ಸ್ ..2
ಕಾಡ್ಗಿಚ್ಚು ತಡೆಯಲಿರುವ ಮಾರ್ಗೊಪಾಯಗಳು..
ಕಾಡು ಬೆಳೆಸಲು ಕೋಟ್ಯಂತರ ಹಣ ವ್ಯಯಿಸುವ ಸರಕಾರ ಹಾಗೂ ಇಲಾಖೆ ಅರಣ್ಯ ಪ್ರದೇಶವನ್ನು ರಕ್ಷಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಸಹ ಅರಣ್ಯಕ್ಕೆ ಬೆಂಕಿ ಬೀಳುವುದು ತಪ್ಪುತ್ತಿಲ್ಲ. ಹೀಗಾಗಿ ಹಿಂದೆಗಿಂತಲೂ ಹೆಚ್ಚಿನ ಕಟ್ಟುನಿಟ್ಟಿನ ಹಾಗೂ ಮುಂಜಾಗ್ರತ ಕ್ರಮಗಳನ್ನು ಅರಣ್ಯ ಇಲಾಖೆ ತೆಗೆದುಕೊಳ್ಳಬೇಕಿದೆ. ಇದರಲ್ಲಿಪ್ರಮುಖವಾಗಿ ಅರಣ್ಯ ದಂಚಿನ ರೈತರಿಗೆ ಕಾಡಿಗೆ ಬೆಂಕಿ ಹಾಕುವುದರಿಂದ ಆಗಲಿರುವ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ, ದನಕರು ಮೇಯಿಸಲು ಹೋಗುವವರಿಗೆ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡುವುದು, ಕಾಡು ಪ್ರಾಣಿಗಳ ಬೇಟೆಗಾರರ ಎಡೆಮುರಿ ಕಟ್ಟುವುದು, ವಾಚರ್ ಗಳನ್ನು ನೇಮಿಸಿ ಹದ್ದಿನ ಕಣ್ಣಿಡುವುದು, ಸೂಕ್ಷತ್ರ್ಮ ವಲಯದಲ್ಲಿಅಗತ್ಯ ಕ್ರಮ ಕೈಗೊಳ್ಳುವುದು ಸೇರಿದಂತೆ ಕಾಡ್ಗಿಚ್ಚಿನಿಂದ ಆಗಲಿರುವ ಆನಾಹುತಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಮೂಲಕ ಕಾಡ್ಗಿಚ್ಚನ್ನು ತಡೆಯಬಹುದಾಗಿದೆ.
ಕೋಟ್ ..
ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕುವುದರಿಂದ ಸಾಕಷ್ಟು ಸಮಸ್ಯೆ ಉದ್ಭವಿಸಲಿದ್ದು, ಈಗಾಗಲೇ ಜಿಲ್ಲೆಯಲ್ಲಿಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇಂತಹ ಘಟನೆಗಳಿಂದ ಈ ಸಮಸ್ಯೆ ಮತ್ತಷ್ಟು ಜಾಸ್ತಿಯಾಗುತ್ತದೆ. ರೈತರು, ಸಾರ್ವಜನಿಕರು ಅರಣ್ಯ ಪ್ರದೇಶದ ಉಳಿವಿಗೆ ಸಹಕರಿಸಬೇಕೆ ವಿನಹಃ ನಾಶಗೊಳಿಸಬಾರದು. ನಮ್ಮ ಇಲಾಖೆ ಸಹ ಈಗಾಗಲೆ ಹಲವು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು, ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಕೂಡ ಮುಖ್ಯವಾಗಿದೆ.
-ಮಲ್ಲೇಶ್ | ವಲಯ ಅರಣ್ಯಾಧಿಕಾರಿಗಳು, ಚನ್ನಪಟ್ಟಣ,
ಪೋಟೊ16ಸಿಪಿಟಿ2: ಅರಣ್ಯದಲ್ಲಿನ ಕಾಡ್ಗಿಚ್ಚ ಪರಿಣಾಮ ಬಿ.ವಿ.ಹಳ್ಳಿ ಗ್ರಾಮದ ಮಾವಿನ ತೋಟ ಸಂಪೂರ್ಣ ಸುಟ್ಟು ಭಸ್ಮವಾಗಿರುವುದು.
ಪೋಟೊ16ಸಿಪಿಟಿ3: ಕಾಡ್ಗಿಚ್ಚು ನಂದಿಸುವ ಸಾಂದರ್ಭಿಕ ಚಿತ್ರ.

