ಲಾಸೆನ್ನೆ(ಸ್ವಿಡ್ಜರ್ಲೆಂಡ್ ): ನ್ಯೂಜಿಲೆಂಡ್ ನ ಆಕ್ಲೆಂಡ್ ನಲ್ಲಿಜೂನ್ 15ರಿಂದ 21ರವರೆಗೆ ನಡೆಯಲಿರುವ ಎಫ್ ಐಎಚ್ ಹಾಕಿ ನೇಷನ್ ಕಪ್ ಟೂರ್ನಿಯಲ್ಲಿಭಾರತ ಮಹಿಳಾ ಹಾಕಿ ತಂಡ ಪಾಲ್ಗೊಳ್ಳಲಿದೆ.
ಹಾಕಿ ಪ್ರೊ ಲೀಗ್ ನಲ್ಲಿಭಾಗವಹಿಸದ ಅತ್ಯುತ್ತಮ ಶ್ರೇಯಾಂಕದ ತಂಡಗಳಿಗೆ ಉನ್ನತ ಮಟ್ಟದ ಸ್ಪರ್ಧೆಯನ್ನು ನೀಡಲು ಮತ್ತು ಮುಂದಿನ ಋುತುವಿನಲ್ಲಿವಿಜೇತ ತಂಡಕ್ಕೆ ಬಡ್ತಿ ನೀಡುವ ಆಯ್ಕೆಯನ್ನು ನೀಡಲು ಹಾಕಿ ನೇಷನ್ ಕಪ್ ಅನ್ನು 2021 ರಲ್ಲಿಪ್ರಾರಂಭಿಸಲಾಯಿತು.
ಭಾರತೀಯ ಮಹಿಳಾ ಹಾಕಿ ತಂಡವು ಒಂಬತ್ತು ತಂಡಗಳ ಶ್ರೇಯಾಂಕದಲ್ಲಿಕೊನೆಯ ಸ್ಥಾನ ಪಡೆದ ನಂತರ ಪ್ರೊ ಲೀಗ್ 2024-25 ರಿಂದ ಕೆಳಗಿಳಿದಿದೆ. ಹಾಕಿ ನೇಷನ್ ಕಪ್ 2 ಮೂಲಕ ಬಡ್ತಿ ಪಡೆದ ಆತಿಥೇಯ ನ್ಯೂಜಿಲೆಂಡ್ , ಯುಎಸ್ ಎ, ಜಪಾನ್ , ಕೊರಿಯಾ, ಚಿಲಿ, ಸ್ಕಾಟ್ಲೆಂಡ್ ಮತ್ತು ಫ್ರಾನ್ಸ್ ಈ ಟೂರ್ನಿಯಲ್ಲಿಭಾಗವಹಿಸಲಿವೆ. ಪುರುಷರ ವಿಭಾಗದಲ್ಲಿದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ , ಫ್ರಾನ್ಸ್ , ಕೊರಿಯಾ, ಜಪಾನ್ , ವೇಲ್ಸ್ , ಮಲೇಷ್ಯಾ ಮತ್ತು ಸ್ಕಾಟ್ಲೆಂಡ್ ತಂಡಗಳು ಭಾಗವಹಿಸಲಿವೆ.

