ಬ್ರೀಫ್ )) ಇಂದು ಶಾಂತಿ ಮೆರವಣಿಗೆ

Contributed bydhanushkulal9@gmail.com|Vijaya Karnataka

ಮಂಗಳೂರಿನಲ್ಲಿ ಯುದ್ಧ ವಿರೋಧಿಸಿ ಶಾಂತಿ ಸಂದೇಶ ಸಾರಲು ಮೆರವಣಿಗೆ ನಡೆಯಲಿದೆ. ಮಾ.17ರಂದು ಸಂಜೆ 4.30ರಿಂದ 5.30ರ ವರೆಗೆ ಹಂಪನಕಟ್ಟೆ ರಸ್ತೆಯಲ್ಲಿ ಮೌನ ಮೆರವಣಿಗೆ ನಡೆಯಲಿದೆ. ಸಮಾನ ಮನಸ್ಕರು, ಸಾಮಾಜಿಕ ಸಂಘಟನೆಗಳು, ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಶಾಂತಿ ಘೋಷಣಾ ಫಲಕಗಳನ್ನು ಹಿಡಿದು ಭಾಗವಹಿಸಲಿದ್ದಾರೆ. ಇದು ಸಮಾಜಕ್ಕೆ ಶಾಂತಿಯ ಸಂದೇಶವನ್ನು ನೀಡುವ ಉದ್ದೇಶ ಹೊಂದಿದೆ.

peace march for security a call against war

ಮಂಗಳೂರು : ಇಡೀ ಜಗತ್ತಿನಲ್ಲಿಯುದ್ಧದ ವಾತಾವರಣ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿಯುದ್ಧವನ್ನು ವಿರೋಧಿಸಿ ಶಾಂತಿ ಸಂದೇಶವನ್ನು ಸಮಾಜಕ್ಕೆ ಪಸರಿಸುವ ಉದ್ದೇಶದಿಂದ ಮಂಗಳೂರಿನಲ್ಲಿಮಾ.17ರಂದು ಶಾಂತಿ ಮೆರವಣಿಗೆ ನಡೆಯಲಿದೆ.

ಮಂಗಳೂರಿನ ಸಮಾನ ಮನಸ್ಕರು, ಶಾಂತಿಗಾಗಿ ಹಾತೊರೆಯುವವರು ಹಾಗೂ ನಾನಾ ಸಾಮಾಜಿಕ ಸಂಘಟನೆಗಳು ಒಟ್ಟು ಸೇರಿ, ಸಂಜೆ 4.30ರಿಂದ 5.30ರ ವರೆಗೆ ಶಾಂತಿ ಘೋಷಣಾ ಫಲಕಗಳನ್ನು ಹಿಡಿದು ಮೌನವಾಗಿ ಹಂಪನಕಟ್ಟೆ ರಸ್ತೆ ಬದಿಯಲ್ಲಿಮೆರವಣಿಗೆ ನಡೆಸಲಿದ್ದಾರೆ. ಈ ಶಾಂತಿ ಮೆರವಣಿಗೆಯಲ್ಲಿನಾನಾ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿತಿಳಿಸಿದ್ದಾರೆ.