ಶರಣರ ಚಿಂತನೆ ಅಳವಡಿಸಿಕೊಳ್ಳಿ

Contributed bykvkampli@gmail.com|Vijaya Karnataka

ಕಂಪ್ಲಿ ಶರಣ ಸಾಹಿತ್ಯ ಪರಿಷತ್ತು 188ನೇ ಮಹಾಮನೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಶರಣರ ಸಾಹಿತ್ಯ ಮತ್ತು ಚಿಂತನೆ ಅಗತ್ಯ ಎಂದು ಮುಖ್ಯ ಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಹೇಳಿದರು. ಶರಣರ ವಿಚಾರಧಾರೆ ಕುರಿತು ಬಿ.ಎಚ್‌.ಎಂ. ಚಂದ್ರಮಹೇಶಶಾಸ್ತ್ರಿ ಮಾತನಾಡಿದರು. ಪರಿಷತ್ ಅಧ್ಯಕ್ಷ ಜಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.

sharana philosophical maha mane event a necessity today

ಶರಣರ ಚಿಂತನೆ ಅಳವಡಿಸಿಕೊಳ್ಳಿ

ವಿಕ ಸುದ್ದಿಲೋಕ ಕಂಪ್ಲಿ

ಸ್ಥಳೀಯ ತಾಲೂಕು ಘಟಕ ಶರಣ ಸಾಹಿತ್ಯ ಪರಿಷತ್ ನಿಂದ 188ನೇ ಮಹಾಮನೆ ಕಾರ್ಯಕ್ರಮ ನಡೆಯಿತು.

ಪಟ್ಟಣದ ಇಟಗಿ ಸಹಿಪ್ರಾ ಶಾಲೆ ಮುಖ್ಯ ಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಮಾತನಾಡಿ, ‘‘ಸಮಾಜದಲ್ಲಿಉತ್ತಮ ವಾತಾವರಣ ನಿರ್ಮಿಸಲು ಶರಣರ ಸಾಹಿತ್ಯ, ಚಿಂತನೆ ಅಗತ್ಯವಿದೆ,’’ ಎಂದರು.

ಬಿ.ಎಚ್ .ಎಂ.ಚಂದ್ರಮಹೇಶಶಾಸ್ತ್ರಿ ‘ಶರಣರರ ವಿಚಾರಧಾರೆ’ ಕುರಿತು ಮಾತನಾಡಿದರು. ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕ ಕೆ.ಚಂದ್ರಶೇಖರ್ , ಪ್ರಮುಖರಾದ ಎಸ್ .ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಅಂಬಿಗರ ಮಂಜುನಾಥ, ಅಶೋಕ ಕುಕನೂರು, ಸಜ್ಜೇದ ವೀರಭದ್ರಪ್ಪ, ಎಸ್ .ರಾಮಪ್ಪ, ಮಡಿವಾಳ ಹುಲುಗಪ್ಪ, ಟಿ.ನಿರಂಜನಸ್ವಾಮಿ, ಬಿ.ಎಂ.ರುದ್ರಯ್ಯ, ಸಿ.ಕೆ.ಚಿದಾಂಬರ, ಕೆ.ಯಂಕಾರೆಡ್ಡಿ, ಯು.ಎಂ.ವಿದ್ಯಾಶಂಕರ ಇದ್ದರು.

ಪೊ.ಶೀ.16ಕೆಎಂಪಿ1;-ಕಂಪ್ಲಿಶರಣ ಸಾಹಿತ್ಯ ಪರಿಷತ್ತಿನಿಂದ ನಡೆದ ಮಹಾಮನೆ ಕಾರ್ಯಕ್ರಮದಲ್ಲಿಮುಖ್ಯಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಮಾತನಾಡಿದರು.